ಬುರ್ಜಾ ಖಲೀಫಾ ದಷ್ಟು ಎತ್ತರಕ್ಕೆ ಜಿಗಿಯಿತು ಕನ್ನಡ ಸಿನಿಮಾ, ಹೊಸ ಇತಿಹಾಸ ದಾಖಲಿಸಿದರು ಅಭಿನಯ ಚಕ್ರವರ್ತಿ

ಜಗತ್ತಿನ ಹಲವು ದೇಶಗಳಲ್ಲಿ ವಿಕ್ರಾಂತ್ ರೋಣ ರಿಲೀಸ್

ದುಬೈ ನ ಬುರ್ಜಾ ಖಲೀಫಾ ಅಂದ್ರೆ ಜಗತ್ತಿನ ಅಚ್ಚರಿಗಳಲ್ಲಿ ಒಂದು. ಅದಕ್ಕೆ‌ಕಾರಣವೇ ಅದರ ಎತ್ತರ. ಅದೊಂದು‌ ಜಗತ್ತಿನಲ್ಲೇ ಬಹು ಎತ್ತರದ ಬಹು ಮಹಡಿ ಕಟ್ಟಡ ಎನ್ನುವ ಹೆಮ್ಮೆ. ಅದರ ಮೇಲೆ ಈಗ ಕನ್ನಡದ ಪತಾಕೆ ಹಾರಿಸಿದ್ದಾರೆ ನಟ ಕಿಚ್ಚಸುದೀಪ್.
ಚಿತ್ರ ತಂಡ ಅಂದುಕೊಡಂತೆ ಜ.31 ರ ರಾತ್ರಿ 9 ಗಂಟೆಗೆ ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಬಿಡುಗಡೆಯಾಯಿತು. ಅದರ ಜೊತೆ ಕಿಚ್ಚ ಸುದೀಪ್ ಅವರ ಕಟೌಟ್ ಸಹ ಪ್ರದರ್ಶನವಾಯಿತು.


ಇದೊಂದು ವಿಶ್ವ ದರ್ಶನ. ಎತ್ತರಕ್ಕೇರುವುದು ಅಂದರೆ ಇದೇ ಇರಬೇಕು. ಅಲ್ಲಿ ಕನ್ನಡ ಮತ್ತು ಕನ್ನಡ ಸಿನಿಮಾಗಳೆರಡ ಬೃಹತ್ ದರ್ಶನವೇ ಆಯಿತು. ಕನ್ನಡ ಧ್ವಜ ರಾರಾಜಿಸಿತು. ಅದರ ಜತೆಗೆ ಸುದೀಪ್ ಅವರ ಭಾವ ಚಿತ್ರವೂ ಪ್ರಜ್ವಲಿಸಿತು‌.
ಸುದೀಪ್ ಅವರ ಬೆಳ್ಳಿ ಮಹೋತ್ಸವದ ಹಿನ್ನೆಲೆ 2000 ಅಡಿಗೂ ಎತ್ತರದ ವಿಶ್ವವಿಖ್ಯಾತ ಕಟ್ಟಡದ ಮೇಲೆ ಕಿಚ್ಚನ ಕಟೌಟ್ ಪ್ರದರ್ಶನಗೊಂಡಿದ್ದು ಒಂದೆಡೆಯಾದರೆ,
ಮತ್ತೊಂದೆಡೆ, ಸುದೀಪ್ ನಟಿಸಿದ ಚಿತ್ರಗಳ ಝಲಕ್, ಕ್ರಿಕೆಟ್, ಗಾಯನ ಸೇರಿದಂತೆ ಕಿಚ್ಚ ನಡೆದು ಬಂದ ಹಾದಿಯನ್ನು ಟೀಸರ್ ಮೂಲಕ ಬಿತ್ತರಿಸಲಾಯಿತು.

‘ವಿಕ್ರಾಂತ್ ರೋಣ’ ಟೀಸರ್ ಲಾಂಚ್ ನಂತರ, ಈ ಚಿತ್ರವು ಭಾರತದ ಹಲವು ಭಾಷೆಗಳಲ್ಲಿ ಹಾಗೂ ಜಗತ್ತಿನ ಹಲವು ದೇಶಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ ಎಂಬುದಾಗಿ ಚಿತ್ರ ತಂಡ ಹೇಳಿತು. ನಿರ್ಮಾಪಕ ಜಾಕ್ ಮಂಜು, ಪ್ರಿಯಾ ಸುದೀಪ್, ನಿರ್ದೆಶಕ ಅನೂಪ್ ಭಂಡಾರಿ, ನಟ ನಿರೂಪ್ ಭಂಡಾರಿ ಸೇರಿ ಹಲವರು ಈ ಅಪರೂಪದ ಕ್ಷ ಣಗಳಿಗೆ ಸಾಕ್ಷಿ ಯಾದರು.

Related Posts

error: Content is protected !!