ಎಂಬಿಎ ಹುಡುಗರ ಪೋಲಿ ಪ್ರೇಮ ಪುರಾಣ – ಮಾರ್ಚ್‌ 4 ರಂದು ತೆರೆಗೆ ಬರುತ್ತಿದೆ ಎಂಬಿಎ ಭಾಗ್ಯ ಅನ್‌ ಲಿಮಿಟೆಡ್‌ ಚಿತ್ರ !.

ಹೆಚ್ ಪಿ  ನಿರ್ದೇಶನದ ಸಿನಿಮಾ, ಹೆಚ್ ಪಿ ಅಂದ್ರೇನು? ನಿರ್ದೇಶಕರು ಅದು ನಿಗೂಢ ಎನ್ನುವುದೇಕೆ?

ಎಂಬಿಎ ಅನ್ನೋದೊಂದು ಸಿನಿಮಾ ಹೆಸರು. ಎಂಬಿಎ ಅಂದ್ರೆ ನಿಮಗೆಲ್ಲ ಇದುವರೆಗೂ ಗೊತ್ತಿರೋದು ಇದೊಂದು ಸ್ಟಡಿ ಕೋರ್ಸ್‌ ಅಂತ. ಅದ್ರೆ ಹೊಸಬರ ಒಂದು ತಂಡ , ಈಗ ಅದೇ ಹೆಸರಲ್ಲಿ ಒಂದು ಸಿನಿಮಾ ಮಾಡಿ ರಿಲೀಸ್‌ ರೆಡಿ ಆಗಿದೆ. ಎಂಬಿಎ ಹೆಸರಿನ ಚಿತ್ರದ ಶೀರ್ಷಿಕೆಗೆ ” ಭಾಗ್ಯ ಅನ್ ಲಿಮಿಟೆಡ್‌..ʼ ಅನ್ನೋದು ಟ್ಯಾಗ್‌ ಲೈನ್ ಇದೆ. ಹೆಚ್‌ ಪಿ ಎನ್ನುವವರು ಇದರ ನಿರ್ದೇಶಕ.
ಎಸ್.‌ ನಾರಾಯಣ್‌ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರಂತೆ. ಈಗ ಅವರೇ ಸ್ವತಂತ್ರ ನಿರ್ದೇಶಕರಾಗಿ “ಎಂಬಿಎʼ ಹೆಸರಿನ ಚಿತ್ರದ ಮೂಲಕ ಆಕ್ಷನ್‌ ಕಟ್‌ ಹೇಳಿದ್ದಾರೆ. ನಿಮಗೆ ಗೊತ್ತಿರುವ ಹಾಗೆ ಎಂಬಿಎ ಅಂದ್ರೆ ಮಾಸ್ಟರ್‌ ಆಫ್‌ ಬಿಸಿನೆಸ್‌ ಆಡ್ಮಿನಿಸ್ಟ್ರೇಷನ್‌ ಅಂತ. ಆದ್ರೆ ಇಲ್ಲಿ ಎಂಬಿಎ ಎನ್ನುವ ಶೀರ್ಷಿಕೆಯ ಫುಲ್‌ ಫಾರ್ಮ್‌ ಬೇರೇನೆ ಇದೆಯಂತೆ. ಅದೇನು ಅಂತ ಗೊತ್ತಾಗಬೇಕಾದ್ರೆ, ಸಿನಿಮಾ ನೋಡ್ಬೇಕು ಅಂತಾರೆ ನಿರ್ದೇಶಕರು.


ಹಾಗಂತ ಇದೇನು ಕಾಲೇಜಿಗೆ ಸಂಬಂಧಿಸಿದ ಕಥಾ ಹಂದರ ಚಿತ್ರವಲ್ಲವೇ ಅಂತ ಭಾವಿಸಬೇಕಿಲ್ಲ. ಕಾಲೇಜಿನಲ್ಲಿ ನಡೆಯುವ ಸಸ್ಪೆನ್ಸ್‌, ಥ್ರಿಲ್ಲರ್‌ ಹಾಗೂ ಮರ್ಡರ್‌ ಮಿಸ್ಟರಿಯ ಕಥಾ ಹಂದರದ ಚಿತ್ರ ಇದು. ಅಲ್ಲಿ ಪ್ರೀತಿ ಇದೆ, ರೋಮಾನ್ಸ್‌ ಇದೆ, ಸೆಟಿಮೆಂಟ್‌ ಇದೆ, ಆಕ್ಷನ್‌ ಇದೆ ಎನ್ನುತ್ತಾರೆ ನಿರ್ದೇಶಕ ಹೆಚ್.ಪಿ.
ಚಿತ್ರದ ಶೀರ್ಷಿಕೆಯ ಹಾಗೆಯೇ ಇಲ್ಲಿ ಇನ್ನೊಂದು ಕುತೂಹಲ ನಿರ್ದೇಶಕರ ಹೆಸರಿಗೆ ಸಂಬಂಧಿಸಿದ್ದು. ಹೆಚ್‌ ಪಿ ಅನ್ನೋದು ಅವರ ಹೆಸರು. ಅದರ ಫುಲ್‌ ಫಾರ್ಮ್‌ ಏನು ಅಂತ ಪ್ರಶ್ನಿಸಿದರೆ, ಅದೆಲ್ಲ ಬೇಡ ಸರ್‌, ಆ ಕತೆ ಬೇರೆಯಿದೆ ಅಂತಾರೆ ನಿರ್ದೇಶಕ. ಹೊಸ ಪ್ರತಿಭೆಗಳಾದ ಪುನೀತ್‌ ಗೌಡ, ಗೂಳಿಸೋಮ, ಕಾವ್ಯ ಗೌಡ, ಸೌಮ್ಯ ಶಾನ್‌ಬೋಗ್‌ ಈ ಚಿತ್ರದ ಪ್ರಮುಖ ಕಲಾವಿದರು. ಸದ್ಯಕ್ಕೆ ಚಿತ್ರ ತಂಡ ಟ್ರೀಲರ್‌ ಲಾಂಚ್‌ ಮಾಡುವ ಮೂಲಕ ಸದ್ದು ಮಾಡಿದೆ. ಎರಡು ವರ್ಷಗಳ ಹಿಂದೆಯೇ ಶುರುವಾಗಿದ್ದ ಈ ಚಿತ್ರಕ್ಕೆ ಈಗ ಬಿಡುಗಡೆಯ ಕಾಲ ಕೂಡಿ ಬಂದಿದೆ. ಟ್ರೇಲರ್‌ ಲಾಂಚ್‌ ಗೆ ಹೆಸರಾಂತ ಸಂಭಾಷಣಾಕಾರ ಮಳ್ಳವಳ್ಳಿ ಸಾಯಿ ಕೃಷ್ಣ ಆಗಮಿಸಿದ್ದರು. ಟ್ರೇಲರ್‌ ಲಾಂಚ್‌ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದರು.


ಸರಿ ಸುಮಾರು ಎರಡು ನಿಮಿಷಗಳಷ್ಟು ಅವಧಿಯ ಟ್ರೇಲರ್‌ನಲ್ಲಿ ಬರೀ ಪೋಲಿ ಮಾತುಗಳೇ ತುಂಬಿಕೊಂಡಿವೆ.

ಸೆನ್ಸಾರ್‌ ನಿಂದ ಈ ಚಿತ್ರಕ್ಕೆ ಎ ಸರ್ಟಿಫಿಕೇಟ್‌ ಸಿಕ್ಕಿದೆ.  ಸಿನಿಮಾ ಮುಖ್ಯವಾಗಿ ಕಾಲೇಜು ಹುಡುಗರ ಪ್ರೀತಿ, ಪ್ರೇಮ, ಹೊರಳಾಟ, ತೊಳಲಾಟ, ಒದ್ದಾಟಗಳ ಕತೆ ಹೇಳುತ್ತದೆ. ಹಾಗೆಯೇ ಈಗಿನ ಯುವ ಜನತೆಗೆ ಒಂದು ಸಂದೇಶ ನೀಡುತ್ತದೆ. ಹಾಗಾಗಿಯೇ ಸೆನ್ಸಾರ್‌ ಕಡೆಯಿಂದ ಚಿತ್ರಕ್ಕೆ ಎ ಸರ್ಟಿಫಿಕೇಟ್‌ ಸಿಕ್ಕಿದೆ ಎನ್ನುವುದು ನಿರ್ದೇಶಕ ಹೆಚ್.ಪಿ. ನೀಡುವ ಸ್ಪಷ್ಟನೆ. ನಿರ್ದೇಶಕ ಹೆಚ್.ಪಿ ಅವರೇ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹರ್ಷ ಕಾಗೋಡು ಸಂಗೀತ ನೀಡಿದ್ದು, ದರ್ಶನ್‌ ದೇವ್‌ ಛಾಯಾಗ್ರಹಣ ಮಾಡಿದ್ದಾರೆ. ಮರಿ ಸ್ವಾಮಿ ಸಂಕಲನ ಚಿತ್ರಕ್ಕಿದೆ.

Related Posts

error: Content is protected !!