“ನೂರರಷ್ಟು ಭರ್ತಿಗೆ ಅವಕಾಶ ಸಿಕ್ಕಿದೆಯಂತೆ ಮಾಸ್ಕ್, ಸ್ಯಾನಿಟೈಸ್ಡ್ ಮರಿಯಬೇಡಿ” ಅಪ್ಪು ಮನವಿ
ನಟ ಪುನೀತ್ ರಾಜ್ ಕುಮಾರ್ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಇಲ್ಲಿವರೆಗಿನ ಕತೆ ಮುಗಿಯಿತು, ಆದರೆ ಇನ್ಮುಂದೆ ವರ್ಷಕ್ಕೆ ಮೂರು ಸಿನಿಮಾದಲ್ಲಾದರೂ ಅಭಿನಯಿಸಬೇಕು, ಅವರು ಆ ವರ್ಷದಲ್ಲೇ ಹಂತ ಹಂತವಾಗಿ ತೆರೆ ಕಾಣಬೇಕು. ಆ ರೀತಿ ಡಿಸೈಡ್ ಮಾಡಿಕೊಂಡೇ ಸಿನಿಮಾಗಳಿಗೆ ಕಾಲ್ ಶೀಟ್ ನೀಡ್ಬೇಕು ಅನ್ನೋದು ಅವರ ನಿರ್ಧಾ ರ .
ಇದು ಅಂತೆ, ಕಂತೆ ಯಲ್ಲ. ಖುದ್ದು ಅವರೇ ” ಸಿನಿ ಲಹರಿʼ ಜತೆ ಹಂಚಿಕೊಂಡ ಮಾಹಿತಿ. ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ಜರುಗಿದ” ಫುಡ್ ಸ್ಟೆಪ್ಸ್ ʼ ಹೆಸರಿನ ಫುಡ್ ಪ್ರಾಡೆಕ್ಟ್ ಲಾಂಚ್ ಗೆ ಅತಿಥಿಯಾಗಿ ಬಂದಿದ್ದ ಅವರು, ಆನಂತರ “ ಸಿನಿ ಲಹರಿ ʼ ಜತೆ ಮಾತನಾಡಿದರು.“ ಚಿತ್ರ ಮಂದಿರಗಳಲ್ಲಿ ಈಗ ನೂರರಷ್ಟು ಆಸನಗಳ ಭರ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸಂತಸ ತಂದಿದೆ. ಇದರಿಂದ ಚಿತ್ರೋದ್ಯಮಕ್ಕೆ ಮತ್ತೆ ಚಾಲನೆ ಸಿಗಲಿದೆ. ಎಲ್ಲರಿಗೂ ಕೆಲಸ ಸಿಗಲಿದೆ. ಆದರೂ ಪ್ರೇಕ್ಷಕರು ಎಚ್ಚರಿಕೆಯಿಂದಲೇ ಇರಬೇಕಿದೆ. ಮಾಸ್ಕ್ ಹಾಗೂ ಸ್ಯಾನಿಟೈಸ್ಡ್ ಬಳಸುವುದನ್ನು ಮರೆಯಬಾರದು. ಮನರಂಜನೆ ಜತೆಗೆ ಅವರ ಆರೋಗ್ಯವೂ ಮುಖ್ಯ ಎಂದು ಮನವಿ ಮಾಡಿಕೊಂಡರು.
ಕೊರೋನಾ ಕಾರಣ ಸಂಕಷ್ಟದಲ್ಲಿರುವ ಚಿತ್ರೋದ್ಯಮಕ್ಕೆ ಇನ್ನಷ್ಟು ವೇಗ ಸಿಗಬೇಕಾದರೆ ಸ್ಟಾರ್ ಗಳು ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಸಿನಿಮಾ ಮಾಡುವುದು ಒಳ್ಳೆಯಲ್ಲವೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟ ಪುನೀತ್, ಇನ್ಮೇಲೆ ವರ್ಷಕ್ಕೆ ಕನಿಷ್ಟ ಮೂರು ಸಿನಿಮಾಗಳಲ್ಲಾದರೂ ಅಭಿನಯಿಸಲು ನಿರ್ಧರಿಸಿದ್ದೇನೆʼ ಅಂತ ತಮ್ಮ ನಿರ್ಧಾರ ರಿವೀಲ್ ಮಾಡಿದರು. ಈ ಡಿಸೈಡ್ ಈ ವರ್ಷದಲ್ಲೇ ಇಂಪ್ಲಿಮೆಂಟ್ ಆಗುತ್ತಾ ಎನ್ನುವ ಕುತೂಹಲದ ಪ್ರಶ್ನೆಗೆ, ನೋಡೋಣ, ಮುಂದೆ ಹೇಳ್ತೀನಿ ಅಂತ ಹಾಗೆಯೇ ಕುತೂಹಲ ಉಳಿಸಿದರು.
“ ಈ ವರ್ಷದ ಮಟ್ಟಿಗೆ ಈಗ ಯುವ ರತ್ನ ಬರಲಿದೆ. ಅದರ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಅದಾದ ಮೇಲೆ ಜೇಮ್ಸ್ ಸರದಿ. ಈಗಾಗಲೇ ಅದಕ್ಕೆ ಬಹುತೇಕ ಶೂಟಿಂಗ್ ಮುಗಿದಿದೆ. ಅದು ರಿಲೀಸ್ ಯಾವಾಗೋ ಗೊತ್ತಿಲ್ಲ, ಈ ವರ್ಷದಲ್ಲೇ ಬಂದ್ರು ಬರಬಹುದು ಅಂತ ಹೇಳಿದರು. ಹಾಗಾದ್ರೆ ಮುಂದಿನ ಸಿನಿಮಾ? ಎನ್ನುವ ಪ್ರಶ್ನೆಗೆ ಗೊತ್ತಿಲ್ಲ ಅಂತ ನಕ್ಕರು. ಅದೇನೆ ಇರಲಿ, ವರ್ಷಕ್ಕೆ ಒಂದೋ ಎರಡೋ ಸಿನಿಮಾ ಸಾಕು ಅಂದುಕೊಂಡಿದ್ದ ಪುನೀತ್, ಈಗ ವರ್ಷಕ್ಕೆ ಮೂರು ಸಿನಿಮಾ ಗ್ಯಾರಂಟಿ ಅಂತ ಹೇಳಿಕೊಂಡಿರುವುದು ಅವರ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯಂತೂ ಹೌದು.