ದುಬೈನಲ್ಲಿ ಶುರುವಾಯ್ತು ಮಹೇಶ್ ಬಾಬು ಸಿನಿಮಾ

ಪ್ರಿನ್ಸ್‌ ಗೆ ಜೋಡಿಯಾದರು ಸೌತ್‌ ಇಂಡಸ್ಟ್ರಿ ಕ್ವೀನ್‌ ಕೀರ್ತಿ ಸುರೇಶ್‌

ಪ್ರಿನ್ಸ್‌ ಮಹೇಶ್‌ ಬಾಬು ಹೊಸ ಸಿನಿಮಾಕ್ಕೆ ದುಬೈನಲ್ಲಿ ಚಿತ್ರೀಕರಣ ಶುರುವಾಗಿದೆ. ಇಲ್ಲಿ ಮಹೇಶ್‌ ಬಾಬು ಅವರಿಗೆ ಅಷ್ಟೇ ಫೇಮಸ್‌ ಆದ ನಟಿ ಕೀರ್ತಿ ಸುರೇಶ್‌ ಜೋಡಿ. ‘ಸರ್ಕಾರು ವಾರಿ ಪಾಟ’ ಎನ್ನುವುದು ಈ ಚಿತ್ರದ ಹೆಸರು. ” ಗೀತ ಗೋವಿಂದಂʼ ಚಿತ್ರದ ಖ್ಯಾತಿಯ ನಿರ್ದೇಶಕ ಪರುಶುರಾಮ್‌ ಪೆಟ್ಲಾ ಈ ಚಿತ್ರದ ನಿರ್ದೇಶಕ. ಇದು ಆಕ್ಷನ್‌ ಥ್ರಿಲ್ಲರ್‌ ಸಿನಿಮಾ. ಮಹೇಶ್‌ ಬಾಬು ಇದ್ದ ಮೇಲೆ ಇದೆಲ್ಲ ಇರಲೇಬೇಕು. ಹಾಗಂತ ಈಗಾಗಲೇ ತೋರಿಸಿದ್ದನ್ನೇ ಮತ್ತೆ ಮಾಡಲಾದೀತೆ?

ಹೊಸ ತೆರೆನಾದ ಕತೆ ಇಲ್ಲಿದೆಯಂತೆ. ಹಣವರ್ಗಾವಣೆ, ಹಣಕಾಸಿನ ಹಗರಣ ಕುರಿತ ಕಥಾವಸ್ತು ಚಿತ್ರದ್ದು. ಮಹೇಶ್‌ ಬಾಬು ಈ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಇದೇ ಮೊದಲ ಕಾರಣವಂತೆ. ಸದ್ಯಕ್ಕೀಗ ಈ ಚಿತ್ರದ ಚಿತ್ರೀಕರಣಕ್ಕೆ ದುಬೈನಲ್ಲಿ ಚಾಲನೆ ಸಿಕ್ಕಿದೆ.
ಕೊರೋನಾ ಆತಂಕದಿಂದ ಮಹೇಶ್‌ ಬಾಬು ಅವರು ಕಳೆದ ವರ್ಷವಿಡೀ ಸಿನಿಮಾ ಚಿತ್ರೀಕರಣದಿಂದ ದೂರವಿದ್ದರು. ಆದಾದ ನಂತರವೀಗ ಇದೇ ಮೊದಲುʼ ಸರ್ಕಾರು ವಾರಿ ಪಾಟʼ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಇಷ್ಟರಲ್ಲೇ ಚಿತ್ರದ ನಾಯಕಿ ಕೀರ್ತಿ ಸುರೇಶ್‌ ಕೂಡ ಚಿತ್ರ ತಂಡ ಸೇರಿಕೊಳ್ಳಲಿದ್ದಾರಂತೆ. ಇನ್ನು ‘ಸರಿಲೇರು ನೀಕೆವ್ವಾರು’ ಚಿತ್ರದ ನಂತರ ಮಹೇಶ್ ಬಾಬು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಕೊರೋನಾದಿಂದಾಗಿ ಟಾಲಿವುಡ್‌ ಸ್ತಬ್ಧವಾಗಿತ್ತು. ಕಳೆದ ವರ್ಷವಿಡೀ ಮನೆಯಲ್ಲುಳಿದಿದ್ದ ಮಹೇಶ್ ಬಾಬು ಇದೀಗ ಶೂಟಿಂಗ್‌ಗೆಂದು ದುಬೈಗೆ ಹಾರಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಇದೇ ಆಗಸ್ಟ್‌ ವೇಳೆಗೆ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.

Related Posts

error: Content is protected !!