ಚಕ್ರವರ್ತಿ ಚಂದ್ರಚೂಡ್‌ ಸುಫಾರಿ ಕೊಟ್ಟ ರಾಧಿಕಾ ಯಾರು ? ಸಖತ್‌ ವೈರಲ್‌ ಆಯ್ತು ʼಕೇಳು ಜನಮೇಜಯʼ ನ ಫಸ್ಟ್‌ ಲುಕ್‌!

ನಾವಿದ್ದೇವೆ ಮುನ್ನುಗಿ ಅಂದ್ರು ಸ್ಟಾರ್‌ ಬಳಗ

ನಟ, ನಿರ್ದೇಶಕ ಹಾಗೂ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್‌ ಬೆಳ್ಳಿ ತೆರೆಗೆ ಹೀರೋ ಆಗಿ ಎಂಟ್ರಿಯಾಗುತ್ತಿರುವ ʼಕೇಳು ಜನಮೇಜಯʼ ಫಸ್ಟ್‌ ಲುಕ್‌ ಪೋಸ್ಟರ್‌ ಧೂಳೆಬ್ಬಿಸುತ್ತಿದೆ. ಚಂದ್ರ ಚೂಡ್‌ ಅವರ ಸಿಕ್ಸ್‌ ಪ್ಯಾಕ್‌ ದೇಹದ ಪ್ರದರ್ಶನಕ್ಕಿಂತ ಪೋಸ್ಟರ್‌ ಮೇಲಿನ ಇತರೆ ವಿಷಯಗಳು ಕುತೂಹಲ ಹುಟ್ಟಿಸಿವೆ. ರಾಧಿಕಾ ಸುಫಾರಿ … ಅಂತ ಪೋಸ್ಟರ್‌ ನಲ್ಲಿ ಹಾಕಿದ್ದೇ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿದೆ. ಅಷ್ಟೇ ಅಲ್ಲ, ಐಪಿಸಿ ಸೆಕ್ಸನ್‌ 375/ 300 ನ ಹಿನ್ನೆಲೆ ಏನು? ಜತೆಗೆ ಆರ್‌ ಹೌಸ್‌ ನ ಆ ಕೋಣೆಯಲ್ಲಿ ನಡೆದಿದ್ದೇನು ? ಹಾಗೆಯೇ ವಾಟ್ಸಾಪ್‌ ಲೀಕ್ಡ್‌ ಡಾಕ್ಯೂಮೆಂಟ್‌ ಯಾರದ್ದು? ಕೇಳು ಜನಮೇಜಯ ಫಸ್ಟ್‌ ಲುಕ್‌ ಪೋಸ್ಟರ್‌ ಇದೆಲ್ಲ ಪ್ರಶ್ನೆಗಳನ್ನು ಸಿನಿಮಾ ಪ್ರೇಕ್ಷಕರ ಮುಂದಿಡುವ ಮೂಲಕ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅದೇ ಕಾರಣಕ್ಕೆ, ಫಸ್ಟ್‌ ಲುಕ್‌ ಪೋಸ್ಟರ್ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ‌

ವಿಶೇಷವಾಗಿ ಚಿತ್ರೋದ್ಯಮ ಮಾತ್ರವಲ್ಲದೆ, ಕನ್ನಡ ಸಂಘಟನೆಗಳು ಹಾಗೂ ರಾಜಕೀಯ ವಲಯದಿಂದಲೂ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸ್ಟಾರ್‌ ಬಳಗ ಚಂದ್ರಚೂಡ್‌ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಮೆಚ್ಚಿಕೊಂಡು ಮಾತನಾಡಿದೆ. ಸೋಷಲ್‌ ಮೀಡಿಯಾದಲ್ಲಿ ಪೋಸ್ಟರ್‌ ವೈರಲ್‌ ಆಗಿದೆ. ಸದ್ಯಕ್ಕೆ ಟ್ವಿಟರ್‌ನಲ್ಲಿ ಕೇಳು ಜಲಮೇಜಯ ಫಸ್ಟ್‌ ಲುಕ್‌ ಪೋಸ್ಟರ್‌ ಟ್ರೆಂಡಿಂಗ್‌ ಎರಡನೇ ಸ್ಥಾನದಲ್ಲಿದೆ. ಚಿತ್ರೋದ್ಯಮದಿಂದ ಹಿರಿಯ ನಟಿ ತಾರಾ, ನಟಿ ಅನಿತಾ ಭಟ್‌ , ನಟರಾದ ಡಾಲಿ ಧನಂಜಯ್‌, ಸಂಚಾರಿ ವಿಜಯ್‌, ರಾಜವರ್ಧನ್‌, ವಿಕ್ಕಿ ವರುಣ್‌, ಅರಣ್‌ ಗೌಡ, ನವ ನಾಯಕ ದುಶ್ಯಂತ್‌, ಚೇತನ್‌ ಗೌಡ, ನಿರ್ದೇಶಕರಾದ ದಯಾಳ್‌ ಪದ್ಮನಾಭನ್‌, ರವಿ ಶ್ರೀವತ್ಸ, ಸಿಂಪಲ್‌ ಸುನಿ, ಶ್ರೀನಿ, ಅರವಿಂದ್‌ ಕೌಶಿಕ್‌, ನಿರ್ಮಾಪಕರಾದ ಅಶ್ವಿನಿ ರಾಮ್‌ ಪ್ರಸಾದ್‌, ಗುರುದೇವ್‌ ನಾಗರಾಜ್‌ ,ಕರ್ನಾಟಕ ಚಲವ ಚಿತ್ರ ಅಕಾಡೆಮಿ ಆಧ್ಯಕ್ಷರಾದ ಸುನೀಲ್‌ ಪುರಾಣಿಕ್‌ ಮತ್ತಿತರರು ಕೇಳು ಜನಮೇಜಯ ಚಿತ್ರದ ಫಸ್ಟ್‌ ಲುಕ್‌ ಗೆ ಸೋಷಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.


ಹಾಗೆಯೇ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಸೇರಿದಂತೆ ಚಿತ್ರೋದ್ಯಮ ಆಚೆಗೂ ಹಲವು ಸೆಲಿಬ್ರಿಟಿಗಳು ಕೂಡ ಕೇಳು ಜನಮೇಜಯ ಫಸ್ಟ್‌ ಲುಕ್‌ ಪೋಸ್ಟರ್‌ ಮೆಚ್ಚಿಕೊಂಡಿದ್ದಾರೆ. ಇನ್ನು ವಿಶೇಷ ಅಂದ್ರೆ ಈ ಪೋಸ್ಟರ್‌ ಲಾಂಚ್‌ ಆದ ಬಗೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಸುಮಾರು ೫೦ ಕ್ಕೂ ಹೆಚ್ಚು ಸಿನಿಮಾ ಸೆಲಿಬ್ರಿಟಿಗಳು ಸೋಷಲ್‌ ಮೀಡಿಯಾದಲ್ಲಿ ಏಕ ಕಾಲದಲ್ಲಿಯೇ ಲಾಂಚ್‌ ಮಾಡಿದ್ದರು. ಹಾಗಾಗಿಯೇ “ಕೇಳು ಜನಮೇಜಯʼ ದ ಪೋಸ್ಟರ್‌ ಬಾರೀ ಸದ್ದು ಮಾಡುತ್ತಿದೆ. ಪತ್ರಕರ್ತ, ಬರಹಗಾರ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್‌ ಇದೇ ಮೊದಲು ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ʼ ಕೇಳು ಜನಮೇಜಯʼ ಚಿತ್ರಕ್ಕೆ ಸಂತೋಷ್ ಕೊಡಂಕೇರಿ ನಿರ್ದೇಶಕ. ಜೀವನ್ ಪ್ರಕಾಶ್ ಕ್ಯಾಮರಾ ವಿನಯ್ ಸಂಗೀತವಿರುವ ಈ ಚಿತ್ರಕ್ಕೆ ದೃಷ್ಠಿ ಮೀಡಿಯಾ ಮತ್ತುರಘುನಾಥ್ ನಿರ್ಮಾಪಕರು .

ಸದ್ಯಕ್ಕೆ ನಿರ್ದೇಶನದ ಜತೆಗೆಯೇ ನಟನೆಗೆ ಮುಖ ಮಾಡಿರುವ ಚಂದ್ರಚೂಡ್‌ ಅದರಲ್ಲೇ ಈಗ ಸಾಕಷ್ಟು ಬ್ಯುಸಿ ಆಗಿದ್ದಾರೆ. ನವೀನ್‌ ಕೃಷ್ಣ ನಿರ್ದೇಶನದ ” ಮೇಲೊಬ್ಬ ಮಾಯಾವಿʼ, ಅರವಿಂದ್‌ ಕೌಶಿಕ್‌ ನಿರ್ದೇಶನದ ಗಾನ್‌ ಕೇಸ್‌, ರವಿ ಶ್ರೀವತ್ಸ ನಿರ್ದೇಶನದ ಡಿಆರ್‌ ಹಾಗೂ ಸುದೀರ್‌ ಶಾನ್‌ ಬೋಗ್‌ ನಿರ್ದೇಶನದ ಮಾರೀಚ ಚಿತ್ರಗಳಲ್ಲಿ ನಟಿಸಿದ್ದು, ಅವೆಲ್ಲ ಬಿಡುಗಡೆಗೆ ರೆಡಿ ಆಗಿವೆ.

Related Posts

error: Content is protected !!