ಸಿನಿಮಾ ಜಗತ್ತಿಗೂ ಬಂತು ಬೈ ಒನ್‌- ಗೆಟ್‌ ಒನ್‌! ಡಿಫೆರೆಂಟ್‌ ಟೈಟಲ್‌ನ ಚಿತ್ರ

ಹೊಸ ಸಾಹಸಕ್ಕೆ ಇಳಿದ ಅವಳಿ  ಸಹೋದರರು,  ಸಾಥ್‌ ಕೊಟ್ಟ ಅನುಭವಿ ನಿರ್ದೇಶಕರು 

ಕನ್ನಡದಲ್ಲಿ ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆದ ಚಿತ್ರಗಳ ಪೈಕಿ ಈಗ ಇದು ಒಂದು. ಆ ಚಿತ್ರದ ಹೆಸರು ಬೈ ಒನ್‌, ಗೆಟ್‌ ಒನ್.‌ ಕನ್ನಡದಲ್ಲಿ ʼ ಒಂದು ಕೊಂಡರೆ ಮತ್ತೊಂದು ಫ್ರೀʼ ಅಂತ. ಹರೀಶ್ ಅನಿಲ್‌ಗಾಡ್ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಮಧುಮಿಥುನ್ ಹಾಗೂ ಮನುಮಿಲನ್ ಎಂಬ ಅವಳಿ ಸಹೋದರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಇವರೇ ಚಿತ್ರದ ನಿರ್ಮಾಪಕರು ಕೂಡ. ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ವಿಶೇಷ ಅಂದ್ರೆ, ನಿರ್ದೇಶಕರು ಹಾಗೂ ಚಿತ್ರದ ನಾಯಕ ನಟರಿಬ್ಬರೂ, ಉಷಾ ಭಂಡಾರಿ ಅವರ ಸಿನಿಮಾ ಶಾಲೆಯಲ್ಲಿ ಕಲಿತವರು. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ಇರೋ ಪಾತ್ರದಲ್ಲಿ ಉಷಾ ಭಂಡಾರಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಆ ದಿನ ಅವರೇ ಚಿತ್ರದ ಟೀಸರ್‌ ಲಾಂಚ್‌ ಮಾಡಿದರು.” ಮಧು, ಮನು, ಹರೀಶ ನನ್ನ ಹಳೇ ವಿದ್ಯಾರ್ಥಿಗಳು. ಈ ಸಿನಿಮಾದಲ್ಲಿ ಬಹಳಷ್ಟು ರಹಸ್ಯಗಳಿವೆ, ಮಿಸ್ಟ್ರಿಗಳಿವೆ, ನನ್ನ ಪಾತ್ರವೂ ಸಹ ಸಸ್ಪೆನ್ಸ್ ಆಗಿದೆ. ಈ ಅವಳಿ ಹುಡುಗರ ನಡವಳಿಕೆಗಳು ಒಂದೇ ಆಗಿದ್ದರೂ ಒಬ್ಬ ಸ್ಲೋ ಮತ್ತೊಬ್ಬ ಫಾಸ್ಟ್. ಹರೀಶ ನನ್ನ ಶಾಲೆಗೆ ಕುಕ್ ಆಗಿ ಬಂದಿದ್ದ, ಈಗ
ನಿರ್ದೇಶಕನಾಗಿದ್ದಾನೆ, ತುಂಬಾ ಖುಷಿಯಾಗ್ತಿದೆʼ ಎಂದು ಸಂತಸ ವ್ಯಕ್ತಪಡಿಸಿದರು.


ಕನ್ನಡ ಫಿಲಂ ಚೇಂಬರ್ ಅಧ್ಯಕ್ಷ ಕೃಷ್ಣೇಗೌಡ, “ರಾಮಾ ರಾಮಾ ರೇʼ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್, ʼಅಯೋಗ್ಯʼ ಚಿತ್ರದ ಖ್ಯಾತಿಯ ನಿರ್ದೇಶಕ ಮಹೇಶ್‌ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಚಿತ್ರಕ್ಕೆ ರೋಷಿನಿ ತೇಲ್ಕರ್‌ ನಾಯಕಿ. ನೆಗೆಟಿವ್‌ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದ ನನಗೆ ಈ ಆಫರ್‌ ಬಂತು. ಪಾತ್ರವೂ ಚೆನ್ನಾಗಿದೆ ಎಂದರು ರೋಷಿನಿ. ಹಾಗೆಯೇ ರಿಶಿತಾ ಮಲ್ನಾಡ್‌ ಈ ಚಿತ್ರದ ಮತ್ತೋರ್ವ ನಾಯಕಿ. ಹಾಗೆಯೇ ಚಿತ್ರದಲ್ಲಿ ನಟ ಕಿಶೋರ್‌ ಪ್ರಮುಖ ಪಾತ್ರದಲ್ಲಿ ಕಾಣಸಿಕೊಂಡಿದ್ದಾರಂತೆ. ನಿರ್ದೇಶಕ ಹರೀಶ್‌ ಮಾತನಾಡಿ ಚಿತ್ರದ ವಿಶೇಷತೆ ಹೇಳಿಕೊಂಡರು.

” ಮೈಸೂರಿನಲ್ಲಿ ಶುರುವಾಗುವ ಕಥೆ, ವಿಭಿನ್ನ ತಿರುವುಗಳನ್ನು ಪಡೆದುಕೊಂಡು ನಂತರಕರಾವಳಿ ಪ್ರಕೃತಿಯ ಮಡಿಲಲ್ಲಿ ಮುಕ್ತಾಯಗೊಳ್ಳುತ್ತದೆ, ಕಮರ್ಷಿಯಲ್ ಎಲಿಮೆಂಟ್ ಹೊಂದಿರುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದೆ. ಹುಡುಗಾಟದಲ್ಲಿಶುರುವಾಗುವ ಅವಳಿ ಜವಳಿಯ ಆಟಗಳು ದ್ವಿತೀಯಾರ್ಧದಲ್ಲಿ ಗಂಭೀರಸ್ವರೂಪ ಪಡೆಯುತ್ತಾ, ಒಂದು ಹುಡುಕಾಟದಲ್ಲಿ ಕೊನೆಯಾಗುತ್ತದೆʼಎಂದರು.ದಿನೇಶ್‌ ಕುಮಾರ್‌ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅನಿಲ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಅಭಿಷೇಕ್ ಮೃತ್ಯುಂಜಯ ಪಾಂಡೆ ಮತ್ತು ವಿಶ್ವಜಿತ್ ರಾವ್ ಛಾಯಾಗ್ರಹಣ ಮಾಡಿದ್ದು, ರಾಜಶೇಖರ್‌ರಾವ್, ವಿಜಯೇಂದರ್, ಮುತ್ತು ಹಾಗೂ ಶಿವು ಸಾಹಿತ್ಯ ರಚಿಸಿದ್ದಾರೆ. ಥ್ರಿಲ್ಲರ್ ಮಂಜು, ವೈಲೆಂಟ್ ವೇಲು ಹಾಗೂ ರಮೇಶ್ ಸಾಹಸ ದೃಶ್ಯ ಸೆರೆಹಿಡಿದಿದ್ದಾರೆ. ಬಲ ರಾಜವಾಡಿ, ಪ್ರಶಾಂತ್ ರಾಯ್ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Related Posts

error: Content is protected !!