ಫೇಸ್‌ಬುಕ್ ತಂದ ಅವಕಾಶ
ಈ ಸಿನಿಮಾ ಮೇಲಿನ ಪ್ರೀತಿಯೇ ಅಂಥದ್ದು. ಬಹುತೇಕ ಸಾಫ್ಟ್‌ವೇರ್ ಮಂದಿಯೇ ಈ ಸಿನಿಮಾರಂಗವನ್ನು ಸ್ಪರ್ಶಿಸಿದೆ. ಈಗಲೂ ಒಬ್ಬೊಬ್ಬರು ಕಾಲಿಡುತ್ತಲೇ ಇದ್ದಾರೆ. ಅಂತಹವರ ಸಾಲಿಗೆ ನಿಖಿತಾಸ್ವಾಮಿ ಕೂಡ ಒಬ್ಬರು. ಈ ನಿಖಿತಾಸ್ವಾಮಿ ಅಪ್ಪಟ ಕನ್ನಡದ ಚೆಲುವೆ. ಈ ಹುಡುಗಿ ಗಾಂಧಿನಗರದ ಅಂಗಳಕ್ಕೆ ಬರೋಕೆ ಕಾರಣವೇ ರೋಚಕ. ಅಷ್ಟಕ್ಕೂ ಈ ಹುಡುಗಿ ಯಾರು, ಯಾವ ಸಿನಿಮಾ ಮಾಡಿದ್ದಾರೆ, ಇಲ್ಲಿಗೆ ಬಂದದ್ದು ಹೇಗೆ? ಈ ಕುರಿತಂತೆ “ಸಿನಿಲಹರಿ”ಯ ಒಂದು ರೌಂಡಪ್.
ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆ ಅನೇಕ ನಟಿಯರು ಎಂಟ್ರಿಯಾಗುತ್ತಲೇ ಇದ್ದಾರೆ. ಗ್ಲಾಮರ್ ಜೊತೆಗೆ ಪ್ರತಿಭೆಯನ್ನೂ ಇಲ್ಲಿ ಪ್ರದರ್ಶಿಸಲು ಅಣಿಯಾಗಿದ್ದಾರೆ. ಆದರೆ, ಅದೃಷ್ಟ ಅನ್ನೋದು ಇಲ್ಲಿ ಬಹುಮುಖ್ಯ. ಸ್ಯಾಂಡಲ್‌ವುಡ್‌ನಲ್ಲಿ ತಾನು ನೆಲೆಯೂರಬೇಕು ಎಂದು ಕಪ್ಪು-ಬಿಳಿ ಕಣ್ಣಲ್ಲಿ ಕಲರ್‌ಫುಲ್ ಕನಸು ಕಟ್ಟಿಕೊಂಡು ಬರುವ ಹುಡುಗಿಯರಿಗೇನೂ ಕಮ್ಮಿ ಇಲ್ಲ. ಇಲ್ಲಿ ನೂರಾರು ನಟಿಮಣಿಗಳು ಕನ್ನಡಕ್ಕೆ ಕಾಲಿಟ್ಟಿದ್ದಾರೆ, ಅಂತಹವರ ಪೈಕಿ ಒಂದಷ್ಟು ಹುಡುಗಿಯರು ಸುದ್ದಿಯಾಗಿದ್ದಾರೆ. ಇನ್ನು ಕೆಲವರು ನೆಲೆ ನಿಲ್ಲೋಕೆ ಮುಂದಾಗಿದ್ದಾರೆ. ಇಲ್ಲೀಗ ಗಟ್ಟಿನೆಲೆ ನಿಲ್ಲಲು ಪೂರ್ಣ ಪ್ರಮಾಣದಲ್ಲಿ ತಯಾರಾಗಿರುವ ನಟಿಯೊಬ್ಬರು ಸಿನಿಮಾ ಮೇಲೊಂದು ಸಿನಿಮಾ ಮಾಡಿ, ಇಲ್ಲೊಂದಷ್ಟು ನೆಲೆ ಕಾಣುವ ಕನಸು ಕಾಣುತ್ತಿದ್ದಾರೆ. ಆ ನಿಟ್ಟಿನಲ್ಲಿ ಅವರೀಗ ಒಂದಷ್ಟು ಮೆಟ್ಟಿಲನ್ನೂ ಏರಿದ್ದಾರೆ.
ಹೌದು, ಮೊದಲೇ ಹೇಳಿದಂತೆ ನಿಖಿತಾ ಸ್ವಾಮಿ ಅಪ್ಪಟ ಕನ್ನಡದ ಹುಡುಗಿ. ಈ ಬಣ್ಣದ ಲೋಕಕ್ಕೆ ಬರುವ ಮುನ್ನ, ಎಂಜಿನಿಯರಿಂಗ್ ಪದವಿ ಮುಗಿಸಿ, ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡಿದವರು. ಅದರ ಜೊತೆಯಲ್ಲೇ ಅವರು ಮಾಡೆಲಿಂಗ್ ಕೂಡ ಮಾಡಿಕೊಂಡಿದ್ದಾರೆ. ನಿಖಿತಾ ಸ್ವಾಮಿ ಅವರಿಗೆ ಕನ್ನಡ ಚಿತ್ರರಂಗದಲ್ಲಿ ತಾನೊಬ್ಬ ಒಳ್ಳೆಯ ಕಲಾವಿದೆ ಆಗಬೇಕು ಎಂಬ ಬಹುದ ದೊಡ್ಡ ಕನಸು. ಒಂದರ ಮೇಲೊಂದರಂತೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಈ ಹುಡುಗಿಯ ಒಂದಷ್ಟು ಸಿನಿಮಾಗಳು ಸಾಲು ಸಾಲಾಗಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿವೆ. ನಿಖಿತಾ ಸ್ವಾಮಿ ಕನ್ನಡದ ಜೊತೆ ಜೊತೆಗೆ ಪರಭಾಷೆಯಲ್ಲೂ ಒಂದು ಸಿನಿಮಾ ಮಾಡಿದ್ದಾರೆ. ಈಗಾಗಲೇ ಆ ಚಿತ್ರ ರಿಲೀಸ್‌ಗೂ ರೆಡಿಯಾಗಿದೆ.
ತಮ್ಮ ಸಿನಿಪಯಣದ ಕುರಿತು ಸ್ವತಃ ನಿಖಿತಾ ಸ್ವಾಮಿ ಅವರು ಹೇಳುವುದಿಷ್ಟು. “ನಾನು ಮೂಲತಃ ಬೆಂಗಳೂರಿನವಳು. ಸಿನಿಮಾಗೆ ಬರಬೇಕು ಎಂಬ ಯಾವ ಉದ್ದೇಶವೂ ಇರಲಿಲ್ಲ. ಒಮ್ಮೆ ಫೇಸ್‌ಬುಕ್‌ನಲ್ಲಿ ಒಂದಷ್ಟು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದೆ. ಅವುಗಳನ್ನು ನೋಡಿ ಒಂದು ಚಿತ್ರತಂಡ, ನನಗೆ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಿತು. ಬಯಸದೆ ಬಂದ ಅವಕಾಶ ಅಂದುಕೊಂಡು ನಾನೂ ಗ್ರೀನ್‌ಸಿಗ್ನಲ್ ಕೊಟ್ಟೆ. ನನ್ನ ಮೊದಲ ಚಿತ್ರ “ಸದ್ದು”. ಅಲ್ಲಿಂದ ನನ್ನ ಸಿನಿಮಾ ಜರ್ನಿ ಶುರುವಾಯಿತು.
ನಾನು ಎಂಜಿನಿಯರಿಂಗ್ ಪದವಿ ಓದಿದ್ದೇನೆ. ಮಾಡೆಲಿಂಗ್ ಮಾಡಿಕೊಂಡಿದ್ದವಳಿಗೆ ಸಿನಿಮಾ ಜಗತ್ತು ಮೆಲ್ಲನೆ ಕೈ ಬೀಸಿ ಕರೆಯಿತು. ಹಾಗಾಗಿ ನಾನು ಈ ಬಣ್ಣದ ಲೋಕವನ್ನು ಸ್ಪರ್ಶಿಸಿದ್ದೇನೆ ಎಂದು ಹೇಳುವ ನಿಖಿತಾ ಸ್ವಾಮಿ, ಎಂಜಿನಿಯರಿಂಗ್ ಮುಗಿದ ಬಳಿಕ ನಾನು ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುವುದರ ಜೊತೆಯಲ್ಲೇ ಮಾಡೆಲಿಂಗ್ ಮಾಡಿಕೊಂಡಿದ್ದೆ. ಅಲ್ಲಿಂದ ನನಗೆ ಕೆಲವು ಬ್ರಾಂಡ್‌ಕಂಪೆನಿಗಳಲ್ಲಿ ಜಾಹಿರಾತು ಮಾಡುವ ಅವಕಾಶ ಸಿಕ್ಕಿತು. ಹಾಗೆ ಸಿಕ್ಕ ಅವಕಾಶವನ್ನು ನಾನು ಚೆನ್ನಾಗಿಯೇ ಬಳಸಿಕೊಂಡೆ. ಹೇರ್ ಆಯಿಲ್, ಜ್ಯೂವೆಲ್ಸ್ ಹಾಗೂ ಉಡುಪು ಜಾಹಿರಾತುಗಳಲ್ಲಿ ಕಾಣಿಸಿಕೊಂಡೆ. ಹಲವು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದೇ ತಡ, ಒಂದಷ್ಟು ಅವಕಾಶ ಬರಲು ಶುರುವಾದವು.
ಒಂದು ವರ್ಷ ಮಾತ್ರ ನಾನು ಇನ್ಫೋಸಿಸ್‌ಸಂಸ್ಥೆಯಲ್ಲಿ ಕೆಲಸ ಮಾಡಿದೆ. ಆಮೇಲೆ ಸಿನಿಮಾರಂಗಕ್ಕೆ ಎಂಟ್ರಿಯಾದೆ. “ಸದ್ದು” ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಯಾದೆ. ಈ ಸಿನಿಮಾಗೆ ಆಯ್ಕೆಯಾಗಿದ್ದೇ ಒಂದು ರೋಚಕ ಎನ್ನುವ ನಿಖಿತಾಸ್ವಾಮಿ, ನಾನು ಫೇಸ್‌ಬುಕ್‌ನಲ್ಲಿ ನನ್ನ ಮಾಡೆಲ್‌ಫೋಟೋಸ್‌ಗಳು ಹಾಗೂ ಜಾಹಿರಾತುಗಳ ಕ್ಲಿಪ್ಪಿಂಗ್‌ಹಾಕಿದ್ದನ್ನು ನೋಡಿದ “ಸದ್ದು” ಚಿತ್ರತಂಡ, ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಕಲ್ಪಿಸಿತು. ಆ ಬಳಿಕ ನಾನು ಒಂದಷ್ಟು ನಟನೆಯಲ್ಲೂ ಗಟ್ಟಿಗೊಳ್ಳಬೇಕು ಅಂತ ನಿರ್ಧಾರ ಮಾಡಿದೆ.
ಉಮಾ ಮಹೇಶ್ವರಿ ಎನ್ನುವವರ ಬಳಿ ನಾನು ನಟನೆ ತರಬೇತಿ ಪಡೆದುಕೊಂಡೆ. ಅಲ್ಲಿ ಸಾಕಷ್ಟು ಕಲಿತುಕೊಳ್ಳಲು ಸಾಧ್ಯವಾಯಿತು. ಅದೀಗ ನನಗೆ ಸಾಕಷ್ಟು ಸುಲಭವಾಗಿದೆ ಎಂಬುದು ಅವರ ಮಾತು. ಮೊದಲ ಚಿತ್ರ “ಸದ್ದು” ಮಾಡುತ್ತಿದ್ದಂತೆಯೇ ನನಗೆ ಒಂದರ ಮೇಲೊಂದು ಚಿತ್ರಗಳಲ್ಲಿ ನಟಿಸುವ ಅವಕಾಶ ಒದಗಿ ಬಂತು. ಆ ಚಿತ್ರದ ನಂತರ ನಾನು “ಬ್ರಹ್ಮಪುತ್ರ” ಚಿತ್ರದಲ್ಲಿ ನಟಿಸಿದೆ. ಅದಾದ ನಂತರ “ಸನ್ಮಾನ್ಯ” ಸಿನಿಮಾ ಹುಡುಕಿ ಬಂತು. ಅಲ್ಲಿಂದ ನಾನು “ಜಲ್ಲಿಕಟ್ಟು”, “ಒಂದು ದಿನ ಒಂದು ಕ್ಷಣ”,” ಆಕಾಶವಾಣಿ” ಚಿತ್ರಗಳಲ್ಲಿ ನಟಿಸಿದ್ದೇನೆ. ಸದ್ಯಕ್ಕೆ “ಜಲ್ಲಿಕಟ್ಟು”, ತೆಲುಗಿನ “ಇಪ್ಪುಡುನುಂಚಿ ಆರಂಭ”, “ಬ್ರಹ್ಮ ಪುತ್ರ”, “ಆಕಾಶವಾಣಿ”, “ಧ್ರುಗಾಂತ” ಚಿತ್ರಗಳು ಬಿಡುಗಡೆಯಾಗಬೇಕಿದೆ” ಎಂದು ವಿವರ ಕೊಡುತ್ತಾರೆ ನಿಖಿತಾ ಸ್ವಾಮಿ.
ಟಕಿಲಾ ನಶೆಯಲ್ಲಿ
ಇನ್ನು, ಹೊಸಬರ ಚಿತ್ರಗಳಲ್ಲಿ ನಟಿಸುತ್ತಿದ್ದರೂ, ನನಗೆ ಹಿರಿಯ ನಿರ್ದೇಶಕರ ಜೊತೆ ನಟಿಸುವ ಅವಕಾಶವೂ ಸಿಕ್ಕಿದೆ. ಹೌದು, “ಟಕಿಲಾ” ಎಂಬ ಚಿತ್ರದಲ್ಲೂ ನಾನು ನಟಿಸುತ್ತಿದ್ದೇನೆ. ಈ ಸಿನಿಮಾಗೆ ಪ್ರವೀಣ್‌ನಾಯಕ್‌ನಿರ್ದೇಶಕರು. ಇದು ನಾಗಚಂದ್ರ ನಿರ್ಮಾಣದ ಚಿತ್ರ. ಈ ಸಿನಿಮಾಗೆ ಧರ್ಮ ಕೀರ್ತಿರಾಜ್‌ಹೀರೋ. ಅವರಿಗೆ ನಾನು ನಾಯಕಿಯಾಗಿ ನಟಿಸಿದ್ದೇನೆ. ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ಈಗ ಚಿತ್ರ ನಿರ್ಮಾಣದ ಸಾಹಸಕ್ಕೆ ಮುಂದಾಗಿದ್ದಾರೆ ಎಂಬುದು ವಿಶೇಷ.
“ಟಕಿಲಾ” ಎಂಬ ಪದ ಕೇಳುತ್ತಿದ್ದಂತೆಯೇ, ಎಲ್ಲರಿಗೂ ಹಾಗೊಮ್ಮೆ ಪಬ್‌ನೆನಪಾಗುತ್ತದೆ. ಹೌದು, ಶೀರ್ಷಿಕೆ ಹೀಗಿದ್ದಾಕ್ಷಣ, ಸಿನಿಮಾದಲ್ಲೂ ಆ ನಶೆಯೇ ತೇಲಾಡುತ್ತದೆ ಅಂತೇನಿಲ್ಲ. “ಟಿಕಿಲಾ” ಅಂದರೇನೆ ನಶೆ. ಆದರೆ, ಅದನ್ನು ಈ ಚಿತ್ರದಲ್ಲಿ ಮನರಂಜನೆಯ ಮೂಲಕ ಪ್ರೇಕ್ಷಕರಿಗೆ ನೀಡಲು ಹೊರಟಿದ್ದಾರೆ ಎಂಬುದು ಅವರ ಮಾತು.
“ಟಕಿಲಾ” ಈ ತಿಂಗಳ ಅಂತ್ಯದಲ್ಲಿ ಶುರುವಾಗಲಿದೆ. ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್‌ಕೆಲಸಗಳು ಮುಗಿದಿವೆ. ಇದೊಂದು ಲವ್, ಸೆಂಟಿಮೆಂಟ್ ಹಾಗೂ ಥ್ರಿಲ್ಲರ್ ಕಥಾ ಹಂದರದ ಚಿತ್ರ. ಅಂದಹಾಗೆ, ನಿರ್ದೇಶಕ ಕೆ. ಪ್ರವೀಣ್‌ನಾಯಕ್‌ಅವರಿಗೆ ಇದು ನಾಲ್ಕನೇ ಚಿತ್ರ. ಈಗಾಗಲೇ ಅವರು ʼಜಡ್ʼ, ʼಹೂಂ ಅಂತೀಯಾ, ಉಹೂಂ ಅಂತೀಯಾʼ ಹಾಗೂ ʼಮೀಸೆ ಚಿಗುರಿದಾಗʼ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಅದೇ ಅನುಭವದಲ್ಲೀಗ “ಟಕಿಲಾ” ಚಿತ್ರಕ್ಕೆ ಕೈ ಹಾಕಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ಪ್ರವೀಣ್‌ನಾಯಕ್‌ಹೊತ್ತಿದ್ದಾರೆ. ಚಿತ್ರಕ್ಕೆ ಪಿ.ಕೆ.ಎಚ್.ದಾಸ್‌ಛಾಯಾಗ್ರಹಣವಿದೆ. ಟಾಪ್‌ಸ್ಟಾರ್‌ರೇಣು ಸಂಗೀತವಿದೆ. ಗಿರೀಶ್‌ಸಂಕಲನವಿದೆ. ಪ್ರಶಾಂತ್‌ಕಲಾನಿರ್ದೇನವಿದೆ. ಚಿತ್ರದಲ್ಲಿ ಸುಮನ್, ಜಯರಾಜ್, ಸುಷ್ಮಿತಾ, ಪ್ರವೀಣ್‌ನಾಯಕ್‌ಇದ್ದಾರೆ. ಬೆಂಗಳೂರು, ನೆಲಮಂಗಲ, ದೇವರಾಯನ ದುರ್ಗ ಹಾಗೂ ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.