ಯಶ್‌ ಫ್ಯಾನ್ಸ್‌ ಹಿಂಗೂ ಇದ್ದಾರಾ? ಖ್ಯಾತ ಯುಟ್ಯೂಬರ್‌ ‌ ಧ್ರುವ್‌ ರಾಠಿ ಕಕ್ಕಾಬಿಕ್ಕಿ!

ಕೆಜಿಎಫ್‌ 2 ಟೀಸರ್‌ ವಿಮರ್ಶೆ ವಿಡಿಯೋ ಡೀಲಿಟ್‌ ಮಾಡಿದ ಧ್ರುವ್‌ ರಾಠಿ ಕೊನೆಗೆ ಹೇಳಿದ್ದೇನು ಗೊತ್ತಾ?

ಕನ್ನಡದ ಸ್ಟಾರ್‌ ನಟರ ಅಭಿಮಾನಿಗಳಂದ್ರೇ ಹೀಗೇನಾ? ಈ ಪ್ರಶ್ನೆ ನಮ್ದಲ್ಲ. ಖ್ಯಾತ ಯುಟ್ಯೂಬರ್‌ ಧ್ರುವ್ ರಾಠಿ ಅವರದು. ಹಾಗೆಯೇ ” ಕೆಜಿಎಫ್‌ 2ʼ ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವ ವಿದೇಶಿ ಪ್ರೇಕ್ಷಕರದ್ದು ಕೂಡ. ಇಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಯುಟ್ಯೂಬ್‌ ನಲ್ಲಿ ಧ್ರುವ್ ರಾಠಿ ಎಂಬಾತ ʼಕೆಜಿಎಫ್‌ 2″ ಟೀಸರ್ ಕುರಿತು ಹಂಚಿಕೊಂಡ ಅಭಿಪ್ರಾಯ.

https://www.youtube.com/watch?v=eJWJQv2GSB8&t=591s

ಅದೇನು ಎನ್ನುವುದಕ್ಕಿಂತ ಈ ಯುಟ್ಯೂಬರ್‌ ಧ್ರುವ್ ರಾಠಿ ಬಗ್ಗೆ ಹೇಳಲೇಬೇಕು. ಈತ ತನ್ನ ಗಂಭೀರ ವಿಡಿಯೋಗಳ ಮೂಲಕ ಎಲ್ಲೆಡೆ ಪ್ರಸಿದ್ಧಿ ಪಡೆದವ. ಯುಟ್ಯೂಬ್‌ನಲ್ಲಿ ರಾಠಿಗೆ ಸರಿ ಸುಮಾರು 50 ಲಕ್ಷ ಸಬ್‌ಸ್ಕೈಬರ್ಸ್‌ ಇದ್ದಾರೆ. ಹಾಗೆಯೇ ಆತ ವಿಡಿಯೋ ಗಳಿಗೆ 25  ಕೋಟಿ ವಿವ್ಯೂಸ್‌ ಇವೆ. ಈತ ಮೊನ್ನೆಯಷ್ಟೇ ತನ್ನ ಯುಟ್ಯೂಬ್‌ನಲ್ಲಿ “ಕೆಜಿಎಫ್‌ 2ʼ ಚಿತ್ರದ ಟೀಸರ್‌ ಕುರಿತು ತನ್ನ ಅಭಿಪ್ರಾಯ ಹಂಚಿಕೊಂಡಿದ್ದ. ಆ ಹೊತ್ತಿಗೆ ‘ಕೆಜಿಎಫ್‌ 2’ ಚಿತ್ರದ ಟೀಸರ್‌ ದೇಶದೆಲ್ಲೆಡೆ ಸುದ್ದಿ ಆಗಿತ್ತು. ವಿದೇಶದಲ್ಲೂ ಅದು ಹವಾ ಎಬ್ಬಿಸಿತ್ತು. ಅದೇ ಗುಂಗಿನಲ್ಲಿ ಆತ “ಕೆಜಿಎಫ್‌ 2ʼ ಚಿತ್ರದ ಟೀಸರ್‌ ಅನ್ನು ಮೆಚ್ಚಿಕೊಳ್ಳುವುದರ ಜತೆಗೆ ಅಲ್ಲಿನ ಒಂದು ದೃಶ್ಯವನ್ನು ಕೊಂಚ ತಮಾಷೆ ಮಾಡಿ, ವಿಶ್ಲೇಷಿಸಿದ್ದ. ಇದು ಸೋಷಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಯಶ್‌ ಅಭಿಮಾನಿಗಳು ಕೆಂಡ ಮಂಡಲವಾಗಿದ್ದಾರೆ.

ಕೆಲವರು ಧ್ರುವ್ ರಾಠಿಯ ಯುಟ್ಯೂಬ್‌ ವಿಡಿಯೋಕ್ಕೆ ಕಾಮೆಂಟ್‌ ಹಾಕುತ್ತಾ, ತಮ್ಮ ಸಿಟ್ಟು ಹೊರ ಹಾಕಿದ್ದಾರೆ. ಕೆಲವರು ಅವನ ತಂದೆ-ತಾಯಿ ಹಾಗೂ ಗೆಳತಿಗೂ ಅವಾಚ್ಯವಾಗಿ ನಿಂದಿಸಿ ಕಾಮೆಂಟ್‌ ಹಾಕಿದ್ದು ಈಗ ದೊಡ್ಡ ಸುದ್ಧಿಮಾಡಿದೆ. ಮತ್ತೊಂದೆಡೆ ಆತನ ಗೆಳತಿಗೆ ಪೋಸ್ಟ್‌ ಮಾಡಿರುವ ಪ್ರೈವೇಟ್ ಮೆಸೇಜ್ ಗಳಲ್ಲಿ ಅತ್ಯಾಚಾರದ ಬೆದರಿಕೆಗಳೂ ಬಂದಿವೆಯಂತೆ. ಇದೆಲ್ಲದರಿಂದ ಮನನೊಂದ ಧ್ರುವ ರಾಠಿ ಕೊನೆಗೆ ತನ್ನ ವಿಡಿಯೋವನ್ನು ಸೋಷಲ್‌ ಮೀಡಿಯಾದಿಂದ ಡೀಲಿಟ್‌ ಮಾಡಿದ್ದಾರೆ. ಹಾಗೆಯೇ ಆತ ತನ್ನ ಯುಟ್ಯೂಬ್‌ ನಲ್ಲಿ ಮಾತನಾಡುತ್ತಾ, ” ಈ ರೀತಿಯ ಅವಾಚ್ಯ ಭಾಷೆಯ ಮೂಲಕ ವಿಮರ್ಶೆಕರು ಹಾಗೂ ವಿಶ್ಲೇಷಕರನ್ನು ಅವಹೇನ ಮಾಡುವುದಾದರೆ, ವಿದೇಶದಲ್ಲಿ ಕನ್ನಡಿಗರು ಹಾಗು ಕರ್ನಾಟಕದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆ ಇದೆ ಎಂದೂ ಆತ ಆತಂಕ ವ್ಯಕ್ತಪಡಿಸಿದ್ದಾನೆ.

ಇದು ನಿಜವೂ ಕೂಡ. ಯಾಕಂದ್ರೆ, ಈಗಾಗಲೇ” ಕೆಜಿಎಫ್‌ 2′ ವಿದೇಶದಲ್ಲೂ ದೊಡ್ಡ ಸುದ್ದಿ ಮಾಡಿದೆ. ಅಲ್ಲಿನ ಕನ್ನಡೇತರ ಹಾಗೂ ವಿದೇಶಿ ಪ್ರೇಕ್ಷಕರನ್ನೂ ತನ್ನತ್ತ ಸೆಳೆದಿದೆ. ಅದೇ ಕಾರಣಕ್ಕೆ ಅಮೇರಿಕಾದ ರಿಯಾಕ್ಷನ್ ವೀಡಿಯೋ ಚಾನಲ್ ವೊಂದು ಈಗಾಗಲೇ ಯಶ್‌ ಅವರ ಸಂದರ್ಶನ ಮಾಡಿದೆ. ಯಾಕಂದ್ರೆ,” ಕೆಜಿಎಫ್‌ʼ ಯೂರೋಪ್ ಹಾಗೂ ಅಮೇರಿಕಾದ ತಂತ್ರಜ್ಞರಿಗೆ ಸಡ್ಡು ಹೊಡೆಯುವಂತೆ ನಿರ್ಮಾಣವಾಗುವ ಮೂಲಕ ಭಾಷೆ, ದೇಶದ ಗಡಿಗಳನ್ನು ದಾಟಿ, ಸದ್ದು ಮಾಡಿದೆ. ‘ಕೆಜಿಎಫ್‌ 2’ಬಗ್ಗೆ ಅಂತಹದೇ ಕುತೂಹಲ ಇದೆ. ಇದು ಕನ್ನಡದ ಹೆಮ್ಮೆ. ವಿದೇಶಿ ಪ್ರೇಕ್ಷಕರಲ್ಲಿ ಕನ್ನಡ ಮತ್ತು ಕರ್ನಾಟಕದ ಬಗೆಗಿರುವ ಆಸಕ್ತಿ ಹಾಗೂ ಕುತೂಹಲ ಅದು. ಇಂತಹ ಸಂದರ್ಭದಲ್ಲಿ ಯಾವುದೋ ಸಣ್ಣ, ಟೀಕೆ ಅಥವಾ ಟಿಪ್ಪಣಿಗಳಿಗೆ ಅಭಿಮಾನಿಗಳು ಅವ್ಯಾಚ ಶಬ್ದಗಳಿಂದ ಪ್ರತಿಕ್ರಿಯಿಸುವುದಾದರೆ, ಅದು ಕನ್ನಡದ ಬಗೆಗಿವ ಗೌರವ ಕಮ್ಮಿಯಾಗಿಸುತ್ತದೆ ಎನ್ನುವ ಅರಿವು ಸ್ಟಾರ್‌ಗಳಿಗೂ ಇರಬೇಕು ಎನ್ನುತ್ತಿದ್ದಾರೆ ಚಿತ್ರೋದ್ಯಮದ ಗಣ್ಯರು.

Related Posts

error: Content is protected !!