ಬೆಳ್ಳಿತೆರೆ ಮೇಲೆ ಹೊಸಬರ ಚಂದ ಮಾಮ, ರವಿ ಕಂಡ ಕನಸು, ಅಭಿಮಾನಿ‌ ಕಣ್ಣಲ್ಲಿ ನನಸು !

80 ರ ದಶಕದ ಕತೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಮಧು ವೈ.ಜಿ. ಹಳ್ಳಿ

ಬಣ್ಣದ ಲೋಕದಲ್ಲಿ ‘ಚಂದಮಾಮ’ ಅಂದ್ರೆ ಕ್ರೇಜಿಸ್ಟಾರ್ ರವಿಚಂದ್ರನ್ ನೆನಪಾಗ್ತಾರೆ. ಯಾಕಂದ್ರೆ, ಹಿಂದೊಮ್ಮೆ ಅವರು ಅದೇ ಹೆಸರಲ್ಲೊಂದು ಸಿನಿಮಾ ಶುರು ಮಾಡಿದ್ದರು. ಅದ್ಯಾಕೋ ಅದು ಅರ್ಧದಲ್ಲೆ ನಿಂತು ಹೊಯಿತು . ಆದರೇನಂತೆ, ಈಗ ಹೊಸಬರ ತಂಡವೊಂದು ಬೆಳ್ಳಿ ತೆರೆಯ ಮೇಲೆ ಪ್ರೇಕ್ಷಕರಿಗೆ ‘ಚಂದ ಮಾಮ’ ನನ್ನು ತೋರಿಸಲು ಕೈ ಹಾಕಿದೆ. ಅವರ ಪ್ರಯತ್ನ ವೇ ‘ಚಂದಮಾಮ’ ಚಿತ್ರ.

ಮಧು ವೈ.ಜಿ. ಹಳ್ಳಿ ನಿರ್ದೇಶನದ ಚಿತ್ರವಿದು. ಶ್ರೀ ಸಾಯಿ ಭೂಮಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಯೋಚಿತಾ ಫಿಲ್ಮ್ ಪ್ರೊಡಕ್ಷನ್ ಸಾತ್ ನೀಡಿದೆ. ಚಿಕ್ಕಮಗಳೂರು ಮೂಲದ ತ್ರಿವೇಣಿ ಗಾಂಧಿ, ಹುಬ್ಬಳ್ಳಿ ಯ ಅಸ್ಲಾಂ ಖಾನ್ ಹಾಗೂ ಚಿಕ್ಕಬಳ್ಳಾಪುರ ಮೂಲದ ಸತೀಶ್ ( ಎಚ್ ಎಮ್ ಮಾರ್ಕೆಟ್‌) ಬಂಡವಾಳ ಹಾಕಿ ‘ಚಂದ ಮಾಮ’ ನನ್ನು ಸೃಷ್ಟಿಸುತ್ತಿದ್ದಾರೆ. ಸದ್ದಿಲ್ಲದೆ ‌ಸೆಟ್ಟೇರಿರುವ ಈ ಚಿತ್ರಕ್ಕೀಗ ಅರ್ಧದಷ್ಟು ಚಿತ್ರೀಕರಣವೂ‌ ಮುಗಿದಿದೆ. ಇನ್ನೇನೂ ಪ್ರಚಾರ ಆರಂಭಿಸುವ ಅದರ ಮೊದಲ ಹಂತವಾಗಿ ‘ ಸಂಕ್ರಾಂತಿ ‘ ಹಬ್ಬಕ್ಕೆ ಚಿತ್ರ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದೆ.‌ ನಟ ರವಿಚಂದ್ರನ್ ಅವರ ಹಿರಿಯ ಪುತ್ರ ಹಾಗೂ ನಟ ಮನು ರಂಜನ್ ಪೋಸ್ಟರ್ ಲಾಂಚ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ಚಿತ್ರ ತಂಡ ಪೋಸ್ಟರ್ ಲಾಂಚ್ ಗೆ ನಟ ರವಿಚಂದ್ರನ್ ಅವರ ಪುತ್ರನನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ , ನಿರ್ದೇಶಕ ಮಧು ವೈ .ಜಿ ಹಳ್ಳಿ ಅವರು ರವಿಚಂದ್ರನ್ ಅವರ ಪಕ್ಕಾ ಆಭಿಮಾನಿ ಆಗಿದ್ದು. ಅದೇ ಕಾರಣ ಕ್ಕಾಗಿಯೇ ಚಂದ ಮಾಮ ಸಿನಿಮಾ ಕೂಡ ಶುರು ವಾಗಿದ್ದಂತೆ. ಹಾಗಂತ ಹೇಳುತ್ತಾರೆ ನಿರ್ದೇಶಕ ಮಧು. ‘ ನನಗಿದು ಚೊಚ್ಚಲ ಸಿನಿಮಾ. ಆದರೂ ಚಿತ್ರೋದ್ಯ ಮದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿದ ಅನುಭವ ಇದೆ. ಆ ಮೂಲಕವೇ ಸ್ವತಂತ್ರ ವಾಗಿ ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂದಾಗ ನನಗೆ ಹೊಳೆದ ಮೊದಲ ಶೀರ್ಷಿಕೆ ಯೇ ಚಂದ ಮಾಮ.‌ಅದಕ್ಕೆ ಕಾರಣ ರವಿ ಚಂದ್ರನ್ ಸರ್. ಅವರು ಶುರು ಮಾಡಿ, ಅರ್ಧದಲ್ಲೇ ಕೈ ಬಿಟ್ಟಿದ್ದ ಪ್ರಾಜೆಕ್ಟ್ ಅದು.‌ಅದನ್ನೇ ಮುಂದುವರೆಸೋಣ ಅಂತ ಅದೇ ಹೆಸರಲ್ಲಿ ಈ ಸಿನಿಮಾ‌ ಮಾಡುತ್ತಿದ್ದೇನೆ’ ಎನ್ಜುತ್ತಾರೆ ನಿರ್ದೇಶಕ ಮಧು ವೈ.ಜಿ. ಹಳ್ಳಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನವರಾದ ಮಧು ವೈ. ಜಿ. ಹಳ್ಳಿ ಕಿರುತೆರ ಹಾಗೂ ಹಿರಿತೆರೆ ಎರಡರಲ್ಲೂ ಸಹಾಯಕ ನಿರ್ದೇಶಕರಾಗಿ, ಬರಹಗಾರರಾಗಿ ಕೆಲಸ‌ ಮಾಡಿದ್ದಾರಂತೆ. ಧಾರಾವಾಹಿ ನಿರ್ದೇಶನ ಮಾಡಿದ ಅನುಭವ ಕೂಡ ಇದೆಯಂತೆ. ಅದೇ ಅನುಭವದಲ್ಲಿ ತಾವೇ ಒಂದು‌ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಸಿನಿಮಾ ನಿರ್ದೇಶನಕ್ಕೆ ಮುಂದಾದಾಗ, ನಿರ್ಮಾಪಕರಾದ ತ್ರಿವೇಣಿ ಗಾಂಧಿ, ಅಸ್ಲಾಂ ಖಾನ್ ಹಾಗೂ ಸತೀಶ್ ಬೆಂಬಲದಿಂದ ಸಿನಿಮಾ ಸೆಟ್ಟೇರಿ ಅರ್ಧದಷ್ಟು ಚಿತ್ರೀಕರಣ ಮುಗಿಸಿದೆ ಆಂತಾರೆ‌‌ ನಿರ್ದೇಶಕ ಮಧು.

ನಿರ್ಮಾಪಕರು, ನಿರ್ದೇಶಕರ ಹಾಗೆಯೇ ಚಿತ್ರದ ತಾರಾಗಣದಲ್ಲೂ ಬಹುತೇಕ ಹೊಸಬರೇ ಇದ್ದಾರೆ. ರಂಗಭೂಮಿ ಕಲಾವಿದರಾದ ಹುಬ್ಬಳ್ಳಿ ಹುಡುಗ ಆಕಾಶ್ ನಾಯಕರಾಗಿ ಕಾಣಿಸಿಕೊಂಡರೆ, ಮಲಯಾಳಂ ನಟಿ ದೀಪಾ ನಾಯರ್ ಈ ಚಿತ್ರದ ನಾಯಕಿ. ಅವರೊಂದಿಗೆ ಪತ್ರಕರ್ತ ಅಪ್ಜಲ್ ಸೇರಿದಂತೆ ದೊಡ್ಡ ತಂಡವೇ ಚಿತ್ರದಲ್ಲಿದೆ. ಹಾಗೆಯೇ ಶ್ರೀ‌ಪುರಾಣಿಕ್ ಕುಂದಾಪುರ ಛಾಯಾಗ್ರಹಣ, ಕೀರ್ತಿ ಚಂದ್ರ ವರ್ಮ ಅವರ ಸಂಗೀತ ಚಿತ್ರಕ್ಕಿದೆ. ಈಗಾಗಲೇ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಸುತಮುತ್ತ ಚಿತ್ರೀಕರಣ ನಡೆಸಿರುವ ಚಿತ್ರ ತಂಡ, ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣ ಶುರು ಮಾಡಲಿದೆಯಂತೆ.

Related Posts

error: Content is protected !!