ಲಂಕೆಗೆ ಖಳನಟಿ ಈ ನಾಯಕಿ ,ʼಸಿಲಿಕಾನ್‌ ಸಿಟಿʼ ಬೆಡಗಿ, ತೆರೆ ಮೇಲೆ ವಿಲನ್‌ ಆದ ಸ್ಟಾರ್‌ ನಟಿ !

ಗ್ಲಾಮರಸ್‌ ನಟಿ ಕಾವ್ಯ ಶೆಟ್ಟಿ ಈಗ ಬೆಳ್ಳಿ ತೆರೆಗೆ ವಿಲನ್‌ 

ಗ್ಲಾಮರಸ್‌ ನಟಿ ಕಾವ್ಯ ಶೆಟ್ಟಿ ಒಂದಷ್ಟು ಗ್ಯಾಪ್‌ ನಂತರ ಮತ್ತೆ ತೆರೆ ಮೇಲೆ ಬರಲು ರೆಡಿ ಆಗಿದ್ದಾರೆ. ೨೦೧೮ರಲ್ಲಿ ಸಂಹಾರ ಚಿತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಂಡವರು, ಮತ್ತೇಲ್ಲೂ ಸದ್ದು ಮಾಡಿರಲಿಲ್ಲ. ಈಗ “ಲಂಕೆʼ ಹೆಸರಿನ ಚಿತ್ರದ ಮೂಲಕ ಹೊಸ ಅವತಾರದೊಂದಿಗೆ ತೆರೆ ಬರಲು ರೆಡಿ ಅಗಿದ್ದಾರೆ ಕಾವ್ಯ ಶೆಟ್ಟಿ. ಹೌದು, ಇಷ್ಟು ದಿನ ನಾಯಕಿಯಾಗಿ ತೆರೆ ಮೇಲೆ ಗ್ಲಾಮರಸ್‌ ಪಾತ್ರಗಳ ಮೂಕಕ ಮಿಂಚಿದ್ದ ಕಾವ್ಯ ಶೆಟ್ಟಿ, ಈಗ ತೆರೆ ಮೇಲೆ ವಿಲನ್‌ ಆಗಿ ಕಾಣಿಸಿಕೊಂಡಿದ್ದಾರಂತೆ. “ಲಂಕೆʼ ಚಿತ್ರ ಅದೇ ಕಾರಣಕ್ಕೆ ತಮಗೆ ವಿಶೇಷ ಎನ್ನುತ್ತಾರೆ.


ಅಂದ ಹಾಗೆ ಇದು ಲೂಸ್‌ ಮಾದ ಯೋಗೇಶ್‌ ನಾಯಕರಾಗಿ ಅಭಿನಯಿಸಿದ ಚಿತ್ರ. ಸಂಚಾರಿ ವಿಜಯ್‌ ಕಾವ್ಯ ಶೆಟ್ಟಿ, ಬಿಗ್‌ ಬಾಸ್‌ ಖ್ಯಾತಿಯ ಕೃಷಿ ತಾಪಂಡ, ಏಸ್ತರ್‌ ನರೋನಾ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಕಳೆದ ವರ್ಷವೇ ಸೆಟ್ಟೇರಿ ಚಿತ್ರೀಕರಣ ಮುಗಿಸಿದ ಚಿತ್ರ ಇದು. ಸದ್ಯಕ್ಕೀಗ ಟೈಟಲ್‌ ಲಾಂಚ್‌ ಮಾಡುವ ಮೂಲಕ ಸುದ್ದಿ ಮಾಡಿದೆ. ಇದೇ ವೇಳೆ, ಗ್ಲಾಮರಸ್‌ ನಟಿ ಕಾವ್ಯ ಶೆಟ್ಟಿ ಅವರ ಪಾತ್ರದ ವಿಶೇಷತೆಯೂ ಇಲ್ಲಿ ರಿವೀಲ್‌ ಆಗಿದೆ. ಇದೇ ಮೊದಲ ತಾವು ತೆರೆ ಮೇಲೆ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿರುವುದನ್ನು ಅವರೇ ರಿವೀಲ್‌ ಮಾಡಿದ್ದಾರೆ.

” ನನ್ನ ಮಟ್ಟಿಗೆ ಇದೊಂದಉ ವಿಶೇಷವಾದ ಪಾತ್ರ, ಫಸ್ಟ್‌ ಟೈಮ್‌ ವಿಲನ್‌ ಆಗಿ ಕಾಣಸಿಕೊಳ್ಳುತ್ತಿದ್ದೇನೆ. ಲಂಕೆಯಲ್ಲಿ ಒಂಥರ ನಾನು ರಾವಣ. ನಿಜಕ್ಕು ಅದು ಹೇಗಿದೆ ಅನ್ನೋದು ಚಿತ್ರ ನೋಡಿದಾಗ ಗೊತ್ತಾಗಲಿದೆʼ ಎಂದರು ಕಾವ್ಯ ಶೆಟ್ಟಿ. ಹಾಗೆ ನೋಡಿದರೆ ನೆಗೆಟಿವ್‌ ಶೇಡ್‌ ಪಾತ್ರ ಅನ್ನೋದು ಹೊಸದಲ್ಲ. ನಾಗತಿ ಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಇಷ್ಟಕಾಮ್ಯ ಚಿತ್ರದಲ್ಲಿಯೇ ಅವರ ಪಾತ್ರಕ್ಕೆ ನೆಗೆಟಿವ್‌ ಶೇಡ್‌ ಇತ್ತು. ಈಗ ಇನ್ನೊಂದು ಬಗೆಯಂತೆ. ಅದು ಹೇಗೆ ಅನ್ನೋದಕ್ಕೆ ಚಿತ್ರ ನೋಡಬೇಕಂತೆ. ರಾಮ್‌ ಪ್ರಸಾದ್‌ ನಿರ್ದೇಶನದ ಈ ಚಿತ್ರಕ್ಕೆ ಪಟೇಲ್‌ ಶ್ರೀನಿವಾಸ್‌ ಹಾಗೂ ಸುರೇಖಾ ನಿರ್ಮಾಣ ಮಾಡಿದ್ದಾರೆ.

Related Posts

error: Content is protected !!