ನಾಟ್‌ ಪ್ರೀಪೇರ್‌, ನಂಗೇನು ಗೊತ್ತಿಲ್ಲ ! ಹಾಗಿದ್ಮೇಲೆ ಈ ನಟ-ನಟಿಯರು ಅಲ್ಲಿಗ್ಯಾಕೆ ಬರ್ಬೇಕು?

ಲಂಕೆ  ಟೈಟಲ್‌  ಲಾಂಚ್‌ ನಲ್ಲೂ ಒಬ್ಬ ನಟಿಯ ಮಾತು ಮುಗಿದಿದ್ದೇ  ಹೀಗೆ…

ಎಲ್ಲಿಗೆ ? ತಕ್ಷಣ ಹೀಗೊಂದು ಪ್ರಶ್ನೆ ನಿಮ್ಮಲ್ಲೂ ಕಾಡಬಹುದು. ವಿಷಯ ಇನ್ನೇನೂ ಅಲ್ಲ. ಇಲ್ಲಿ ಹೇಳ ಹೊರಟಿದ್ದು ಸಿನಿಮಾ ಪ್ರಚಾರ ಕಾರ್ಯಕ್ರಮ ಅಥವಾ ಸಿನಿಮಾ ಸಂಬಂಧಿತ ಪ್ರೆಸ್‌ಮೀಟ್‌ಗಳಲ್ಲಿನ ಅವಾಂತರಗಳ ಕುರಿತು. ಅದ್ಹೇಂಗೆ ಅಂತ ವಿವರಿಸಿ ಹೇಳುವುದಕ್ಕೂ ಮುಂಚೆ ಈ ʼಪ್ರೆಸ್‌ಮೀಟ್‌ʼ ಎನ್ನುವುದರ ಬಗ್ಗೆ ಒಂದಷ್ಟು ಮಾಹಿತಿ ಅಗತ್ಯ. ಇದೆಲ್ಲ ಸಿನಿಮಾ ಮಂದಿಗೆ, ರಾಜಕಾರಣಿಗಳಿಗೆ, ಸಾರ್ವಜನಿಕ ಕ್ಷೇತ್ರಗಳಲ್ಲಿರುವವರೆಗೆ ಗೊತ್ತು. ಅದರಾಚೆ ತೀರಾ ಸಾಮಾನ್ಯ ಜನರಿಗೆ ಹೆಚ್ಚಾಗಿ ಮಾಹಿತಿ ಇರೋದಿಲ್ಲ ಅನ್ನೋದು ಅಷ್ಟೇ ಸತ್ಯ. ಆ ದೃಷ್ಟಿಯಿಂದ ʼ ಪ್ರೆಸ್‌ಮೀಟ್‌ʼ ಬಗ್ಗೆ ವಿವರಿಸುವುದಾದರೆ, ಇದೊಂದು ಮಾಧ್ಯಮ ಹಾಗೂ ಪ್ರಚಾರ ಬಯಸುವವರ ಮುಖಾಮುಖಿ. ಆ ಮೂಲಕ ಜನರಿಗೆ ತಲುಪುವ ಪ್ರಯತ್ನ.

ವಿಶೇಷವಾಗಿ ಸಿನಿಮಾ ಮಂದಿಗೆ ಈ ರೀತಿಯ ಪ್ರಚಾರ ಅತ್ಯಗತ್ಯ. ತಾವು ಮಾಡಿದ ಸಿನಿಮಾದ ಕುರಿತು ಮಾಹಿತಿ ನೀಡಿ, ಅವರನ್ನು ಚಿತ್ರಮಂದಿರಕ್ಕೆ ಕರೆತರಬೇಕಾದ್ರೆ ಮಾಧ್ಯಮದವರೊಂದಿಗಿನ ಸಿನಿಮಾದವರ ಮುಖಾಮುಖಿ ಬೇಕೇ ಬೇಕು. ಹಾಗಂತ ಈ ಪ್ರೆಸ್‌ಮೀಟ್‌ ಕರೆಯೋದು ಅಂದ್ರೆ ಅಷ್ಟು ಸುಲಭ ಅಲ್ಲ. ಈ ಕಾಲಮಾನಕ್ಕೆ ಇದೊಂದು ದುಬಾರಿಯ ಮೀಟ್ !‌ ಆದರೂ, ಕಷ್ಟಪಟ್ಟು ಸಿನಿಮಾ ಮಾಡಿದ ನಿರ್ಮಾಪಕ ಅದನ್ನು ಜನರ ಬಳಿಗೆ ಒಯ್ಯಬೇಕಾದರೆ ಈಗ ಪ್ರಚಾರ ಅನ್ನೋದು ಅಷ್ಟೆ ಅಗತ್ಯ. ಅದಕ್ಕಾಗಿ ಅವರು ಒಂದು ಪ್ರೆಸ್‌ಮೀಟ್‌ ಆಯೋಜಿಸಬೇಕಾದ್ರೆ, ಅದಕ್ಕೊಂದು ಸುಸಜ್ಜಿತವಾದ ಜಾಗ ಫಿಕ್ಸ್‌ ಮಾಡ್ಬೇಕು. ಅದಕ್ಕೆ ಹಲವು ದಿನಗಳಿಂದ ಸಿದ್ಧತೆ ನಡೆಸಬೇಕು. ಸಿನಿಮಾ ಕಲಾವಿದರೆಲ್ಲರನ್ನು ಒಂದೆಡೆ ಸೇರಿಸಬೇಕು, ಇದಕ್ಕೆಲ್ಲ ಲಕ್ಷಾಂತರ ರೂ. ಖರ್ಚು ಮಾಡಬೇಕು, ಇದೆಲ್ಲ ಹೆಣಗಾಟದರ ನಡುವೆ ನಿರ್ಮಾಪಕ ಸುಸ್ತಾಗಿ ಮಾತನಾಡದೆ ಮೌನವಹಿಸುವಾಗ, ನಿರ್ದೇಶಕರು ಸೇರಿ ಕಲಾವಿದರೇ ಆ ಚಿತ್ರದ ಬಗ್ಗೆ ಮಾಧ್ಯಮಕ್ಕೆ ಸಮಗ್ರ ಸುದ್ದಿ ನೀಡಬೇಕು. ಅದು ಬಿಟ್ಟು, ಗ್ಲಾಮರಸ್‌ ಆಗಿ ಬಂದು ವೇದಿಕೆಯ ಮೇಲೆ ಕುಳಿತು, ಮೋಜಿನಲ್ಲಿ ಚುಯಿಂಗ್‌ ಗಮ್‌ ಜಿಗಿಯುತ್ತಾ ಕೈಗೆ ಮೈಕ್‌ ಹಿಡಿದು ಮಾತನಾಡುವಾಗ ” ನಾಟ್‌ ಪ್ರೀಪೇರ್‌, ನಂಗೇನು ಗೊತ್ತಿಲ್ಲʼ ಅಂತ ಮೈಕ್‌ ಕೆಳಗಿಟ್ಟರೆ, ಅಷ್ಟೇಲ್ಲ ಖರ್ಚು ಮಾಡಿ ಸುದ್ದಿಗೋಷ್ಠಿ ಕರೆಯುವ ನಿರ್ಮಾಪಕರ ಕತೆಯೇನು?

ಒಂದು ಪ್ರೆಸ್‌ಮೀಟ್‌ ಆಯೋಜಿಸಬೇಕಾದ್ರೆ, ಅದಕ್ಕೊಂದು ಸುಸಜ್ಜಿತವಾದ ಜಾಗ ಫಿಕ್ಸ್‌ ಮಾಡ್ಬೇಕು. ಅದಕ್ಕೆ ಹಲವು ದಿನಗಳಿಂದ ಸಿದ್ಧತೆ ನಡೆಸಬೇಕು. ಸಿನಿಮಾ ಕಲಾವಿದರೆಲ್ಲರನ್ನು ಒಂದೆಡೆ ಸೇರಿಸಬೇಕು, ಇದಕ್ಕೆಲ್ಲ ಲಕ್ಷಾಂತರ ರೂ. ಖರ್ಚು ಮಾಡಬೇಕು, ಇದೆಲ್ಲ ಹೆಣಗಾಟದರ ನಡುವೆ ನಿರ್ಮಾಪಕ ಸುಸ್ತಾಗಿ ಮಾತನಾಡದೆ ಮೌನವಹಿಸುವಾಗ, ನಿರ್ದೇಶಕರು ಸೇರಿ ಕಲಾವಿದರೇ ಆ ಚಿತ್ರದ ಬಗ್ಗೆ ಮಾಧ್ಯಮಕ್ಕೆ ಸಮಗ್ರ ಸುದ್ದಿ ನೀಡಬೇಕು.

ಅ ಬಗ್ಗೆ ಎಷ್ಟು ಜನ ಕಲಾವಿದರು ಯೋಚಿಸುತ್ತಾರೋ ಇಲ್ಲವೋ ಗೊತ್ತಿಲ್ಲ, ಇತ್ತೀಚೆಗೆ ಸಿನಿಮಾ ಸುದ್ದಿಗೋಷ್ಠಿಗಳಲ್ಲಿ “ನಾಟ್‌ ಪ್ರೀಪೇರ್‌, ನಂಗೇನು ಗೊತ್ತಿಲ್ಲʼ ಎನ್ನುವ ಮಾತು ತುಂಬಾ ಕಾಮನ್‌ ಅಗಿದೆ. ಅತ್ಯಂತ ದುಬಾರಿ ಎನಿಸುವ ಸ್ಟಾರ್ ಹೊಟೇಲ್‌ ಗಳಲ್ಲಿನ ಸುದ್ದಿಗೋಷ್ಠಿಗಳಲ್ಲೂ ಕೆಲವರು ಸಿನಿಮಾದಲ್ಲಿನ ತಮ್ಮ ಪಾತ್ರ, ಸಿನಿಮಾದ ವಿಶೇಷತೆ ಕುರಿತು ಮಾತನಾಡುವ ಬದಲಿಗೆ ನಾಟ್‌‌ ಪ್ರೀಪೆರ್‌ ಅಂತ ಮಾತು ಮುಗಿಸಿ ಬಿಡುತ್ತಾರೆ. ಇಲ್ಲವೇ ಬರೀ ಥ್ಯಾಂಕ್ಸ್‌ ಗಿವಿಂಗ್‌ ಗಷ್ಟೇ ತಮ್ಮ ಮಾತು ಮೀಸಲಿರಿಸಿ, ಮೈಕ್‌ ಕೆಳಗಿಟ್ಟು ಕ್ಯಾಮೆರಾ ಕಡೆ ಮುಖ ಮಾಡುತ್ತಾರೆ. ಮಂಗಳವಾರದ ಸಂಜೆ ಕರೆದಿದ್ದ ʼಲಂಕೆʼ ಸಿನಿಮಾ ಟೈಟಲ್‌ ಲಾಂಚ್‌ ಕಾರ್ಯಕ್ರಮದಲ್ಲೂ ಒಬ್ಬ ನಟಿ ಮಾತು ಇದೇ ಆಗಿತ್ತು. ಸದ್ಯಕ್ಕೆ ಇಲ್ಲಿ ಅವರ ಹೆಸರು ಬೇಡ. ಮುಂದಿನ ದಿನವೂ ಅವರು ಹೀಗೆ ಮಾಡಿದರೆ, ಅವರ ಹೆಸರು ಬಹಿರಂಗ. ಅವರನ್ನ ಬಿಟ್ಟು ಬಿಡಿ, ಕೊನೆ ಪಕ್ಷ ನಿರ್ದೇಶಕರು, ನಿರ್ಮಾಪಕರಿಗೂ ಬುದ್ಧಿ ಬೇಡವೇ? ಹಾಗಂತ ಅನೇಕ ಸುದ್ದಿ ಗೋಷ್ಠಿಗಳಲ್ಲಿ ಆಕ್ಷೇಪಗಳು ಕೇಳಿಬಂದಿದ್ದ ಸತ್ಯ.

Related Posts

error: Content is protected !!