‘ಧನ್ಯವೀಣಾ’ ಆತ್ಮ ಕಥನ ಬಿಡುಗಡೆ ಯಲ್ಲಿ ತಮ್ಮ ಇಂಗಿತ ಹೊರ ಹಾಕಿದ ಗಜ ಖ್ಯಾತಿಯ ಮಲಯಾಳಂ ನಟಿ
ಮಲಯಾಳಂ ನಟಿ ನವ್ಯ ನಾಯರ್ ಕನ್ನಡಕ್ಕೇನು ಅಪರಿಚಿತರಲ್ಲ. ದರ್ಶನ್ ಅಭಿನಯದ ಗಜಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿ ಮೂರ್ನಾಲ್ಕು ಸ್ಟಾರ್ ಸಿನಿಮಾಗಳಿಗೆ ನಾಯಕಿಯಾದರು. ಕನ್ನಡಕ್ಕೆ ಹೊಂದಿಕೆಯಾಗುವ ಮುದ್ದುಮುಖ ಅವರದ್ದಾಗಿದ್ದರೂ, ಅದ್ಯಾಕೋ ಅವರಿಗೆ ಮುಂದೆ ಅಷ್ಟೇನು ಅವಕಾಶ ಸಿಗಲಿಲ್ಲ. ಮುಂದೆ ಅವರು ಮಲಯಾಳಂ ನಲ್ಲೇ ಬ್ಯುಸಿಯಾದರು ಅನ್ನೋದು ಬಹುತೇಕರಿಗೂ ಗೊತ್ತಿರುವ ವಿಚಾರ.
ಅವರು ತಮ್ಮ ಚಿತ್ರ ರಂಗದ ಅನುಭವ ಕುರಿತು ಆತ್ಮಕಥನ ಹೊರ ತಂದಿದ್ದಾರೆ. ಮಲಯಾಳಂನಲ್ಲಿ ಬರೆದಂಥ ಆ ಕೃತಿಯ ಹೆಸರು ‘ನವ್ಯ ರಸಂಗಳ್: ಈಗ ಅದೇ ಪುಸ್ತಕದ ಸಾರವನ್ನು ಗ್ರಹಿಸಿ ಪ್ರಾಧ್ಯಾಪಕಿ ಜಾನೆಟ್ ಐ.ಜೆ ಕನ್ನಡ ಭಾಷೆಗೆ ತರ್ಜುಮೆ ಮಾಡಿದ್ದು, ಅದನ್ನು ಜಿ.ಎಸ್. ಯುಧಿಷ್ಟರ ನಿರೂಪಣೆ ಮಾಡಿದ್ದಾರೆ. ಅದರ ಹಸರು ‘ಧನ್ಯವೀಣಾ’ . ಶನಿವಾರ ಶುಕ್ರವಾರ( ಜ.8 ) ಈ ಪುಸ್ತಕ ಲೋಕಾರ್ಪಣೆ ಗೊಂಡಿತು.
ಪತ್ರಕರ್ತೆ ಹಾಗೂ ‘ ಓ ಮನಸೇ’ ಸಂಪಾದಕಿ ಭಾವನಾ ಬೆಳಗೆರೆ , ಪುಸ್ತಕ ಲೋಕಾರ್ಪಣೆ ಮಾಡಿದರು. ಸಮಾರಂ ಭದಲ್ಲಿ ನಟಿ ನವ್ಯಾ ನಾಯರ್, ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯಾಧ್ಯಕ್ಷರಾದ ಪ್ರಶಾಂತ್ಕಲ್ಲೂರು, ರಾಷ್ಟಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಪುಸ್ತಕದ ನಿರೂಪಕ ಜಿ.ಎಸ್.ಯುಧಿಷ್ಟಿರ ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನವ್ಯ ನಾಯರ್, ‘ ಕನ್ನಡ
ಚಿತ್ರರಂಗದ ಬಗ್ಗೆ ನನಗೆ ಒಳ್ಳೇ ಅನುಭವಗಳಿವೆ. ಇಲ್ಲಿ ಉತ್ತಮ ವಾತಾವರಣವಿದೆ. ಉತ್ತಮ ಅವಕಾಶಗಳು ಬಂದರೆ ಕನ್ನಡದಲ್ಲಿ ನಟಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ’ ಎಂದರು. ಹಾಗೆಯೇ ಮಲಯಾಳಂನಲ್ಲಿ ತಾವು ಎಂಟು ವರ್ಷಗಳ ಬಳಿಕ ಮತ್ತೆಬಣ್ಣ ಹಚ್ಚಿದ್ದೇನೆ. ಆ ಚಿತ್ರದ ಹೆಸರು ‘ಉರುಪಿ’. ಇದೊಂದು ನಾಯಕಿ ಪ್ರಧಾನ ಚಿತ್ರ ಎಂಬುದಾಗಿ ಅವರು ಹೇಳಿಕೊಂಡರು.