ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರಿವೀಲ್ ಮಾಡಿದರು ಯಾರಿಗೆ ಗೊತ್ತಿರದ ಒಂದು ಸತ್ಯ !
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಹಾಗೂ “ಸಾಹೇಬʼ ಖ್ಯಾತಿಯ ಯುವ ನಟ ಮನುರಂಜನ್ ಕೊನೆಗೂ ಒಂದು ವಿಷಯ ಬಹಿರಂಗ ಪಡಿಸಿದ್ದಾರೆ. ಇದುವರೆಗೂ ಅವರು ಮತ್ತು ಅವರ ಕುಟುಂಬ ಬಚ್ಚಿಟ್ಟಿದ ಸತ್ಯ ಅದು. ಆದರೂ ಅದನ್ನೀಗ ಮನುರಂಜನ್ ರಿವೀಲ್ ಮಾಡಿದ್ದಾರೆ. ಇದು ಅವರ ತಂದೆ ರವಿಚಂದ್ರನ್ ಅವರಿಗೂ ಗೊತ್ತಿಲ್ಲ, ಹಾಗೂ ಅವರ ಕುಟುಂಬಕ್ಕೂ ಗೊತ್ತಿಲ್ಲ. ಆದರೂ ಮನುರಂಜನ್, ಶನಿವಾರ ಮಾಧ್ಯಮದ ಮುಂದೆ ತುಂಬಾ ನೋವಿನಿಂದಲೇ ಇದನ್ನು ಹೇಳಿಕೊಂಡರು. ಅದಕ್ಕೆ ಕಾರಣ ಕನ್ನಡದ ಸಿನಿಮಾ ಪ್ರೇಕ್ಷಕರಲ್ಲಿ ಅವರ ಬಗ್ಗೆ ಇರುವ ಒಂದ್ರೀತಿ ತಪ್ಪು ಅಭಿಪ್ರಾಯ.” ಎಲ್ಲರೂ ನಾನು ದಪ್ಪ ದಪ್ಪ ಅಂತಾರೆ. ವರ್ಕೌಟ್ ಮಾಡುತ್ತಿದ್ದರೂ ನಾನೇಕೆ ದಪ್ಪ ಆಗಿಯೇ ಇರುತ್ತೇನೆ ಅನ್ನೋದು ಅವರಿಗೆ ಗೊತ್ತಿಲ್ಲ. ಅದು ನನ್ನ ಸಮಸ್ಯೆ ಅಲ್ಲ. ಬದಲಿಗೆ ಅದು ನನ್ನ ಆರೋಗ್ಯದ ಸಮಸ್ಯೆʼ ಎನ್ನುತ್ತಾ ಕೊಂಚ ಬೇಸರದ ಮಾತುಗಳಲ್ಲಿ ಇಷ್ಟು ದಿನ ತಾವು ಮತ್ತು ಕುಟುಂಬ ರಹಸ್ಯವಾಗಿಟ್ಟಿದ್ದ ವಿಷಯವನ್ನು ಹೇಳಿಕೊಂಡರು.
“ಇದು ಹೇಗಾಯ್ತೋ ಗೊತ್ತಿಲ್ಲ. “ಬೃಹಸ್ಪತಿʼ ಸಿನಿಮಾ ಬಂದು ಹೋದ ಮೇಲೆ ಒಂದಷ್ಟು ದಿನ ನಾನು ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಅದಕ್ಕೆ ಕಾರಣ ಆ ಸಿನಿಮಾ ನಿರೀಕ್ಷಿತ ಮಟ್ಟಕ್ಕೆ ಗೆಲುವು ಕಾಣಲಿಲ್ಲ ಎನ್ನುವುದು. ಅದೇ ಟೆನ್ಸ್ ನಲ್ಲಿ ನಾನು ಒಂದಷ್ಟು ಡಿಪ್ರೆಷನ್ ಗೆ ಹೋದೆ. ಅದಕ್ಕೆ ಕಾರಣ ಸಿನಿಮಾ ಸೋಲಿನ ಮಾನಸಿಕ ಒತ್ತಡ. ಅದರಿಂದಾಗಿಯೋ ಏನೋ ಆರೋಗ್ಯ ಸಮಸ್ಯೆ ಶುರುವಾಯ್ತು. ದೇಹದ ಎಡಭಾಗದಲ್ಲಿ ನರ ದೌರ್ಬಲ್ಯದ ಸಮಸ್ಯೆ ಬಂತು. ಅದಕ್ಕಾಗಿ ಆಸ್ಪತ್ರೆಗೆ ದಾಖಲಾದೆ. ಅಲ್ಲಿಂದ ದೇಹಕ್ಕೆ ಸ್ಯ್ಟಾರಾಯ್ಡ್ ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಯಿತು. ಹಾಗೆಯೇ ಪ್ರತಿ ಆರು ತಿಂಗಳಿಗೊಮ್ಮೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಇದೆಲ್ಲದರ ನಡುವೆಯೂ ವರ್ಕೌಟ್ ಮಾಡುತ್ತಲೇ ಇದ್ದೆ. ಆದರೂ ದೇಹದ ತೂಕದಲ್ಲಿ ಏರಿಳಿತ ಆಗುತ್ತಲೇ ಇದೆ. ಒಂದಷ್ಟು ದಿನ ಸಣ್ಣಗಾಗಿದ್ದವನು, ಏಕಾಏಕಿ ಮತ್ತೆ ದಪ್ಪ ಆಗುತ್ತಿದ್ದೆ. ಇದೆಲ್ಲ ಆರೋಗ್ಯದ ಸಮಸ್ಯೆಯಿಂದಲೇ. ಅ ಸಮಯದಲ್ಲೂ ನಾನು ʼಪ್ರಾರಂಭʼ ಚಿತ್ರ ಒಪ್ಪಿಕೊಂಡೆ. ಯಾಕೆ ಗೊತ್ತಾ? ಸಿನಿಮಾ ಮೇಲಿನ ಪ್ರೀತಿಗಾಗಿ. ಇದು ಕೆಲವರಿಗೆ ಗೊತ್ತಿಲ್ಲ. ಹಾಗಾಗಿ ನಾನು ಫಿಟ್ ಇಲ್ಲ, ದಪ್ಪ ಇದ್ದಾರೆ ಎನ್ನುತ್ತಾರೆʼ ಎಂಬ ಮಾತುಗಳೊಂದಿಗೆ ಮನುರಂಜನ್ ಕೊಂಚ ಭಾವುಕರಾದರು.
ಹಾಗಂತ ಅವರಿಗೆ ಈಗಲೂ ಆರೋಗ್ಯದ ಸಮಸ್ಯೆ ಇದೆಯಾ ಅಂತ ಅನುಮಾನಿಸಬೇಕಿಲ್ಲ. ಕ್ರೇಜಿಸ್ಟಾರ್ ಅಭಿಮಾನಿಗಳು ಗಾಬರಿ ಆಗುವ ಅಗತ್ಯವೂ ಇಲ್ಲ, ಯಾಕಂದ್ರೆ ಮನು ರಂಜನ್ ಈಗ ಕಂಪ್ಲಿಟ್ಲಿ ಫೈನ್. ಈಗಲೂ ಆರು ತಿಂಗಳೊಮ್ಮೆ ಅಸ್ಪತ್ರೆಗೆ ಹೋಗಬೇಕು, ಸ್ಟೆರಾಯ್ಡ್ ತೆಗೆದುಕೊಳ್ಳಬೇಕೆನ್ನುವುದನ್ನು ಬಿಟ್ಟರೆ ಅವರೀಗ ಸಂಪೂರ್ಣವಾಗಿಯೂ ಫಿಟ್ ಆಗಿದ್ದಾರೆ. ಅಷ್ಟು ಬೇಗ ಅದರಿಂದ ಅವರು ಹೇಗೆ ಹೊರ ಬಂದ್ರು ಅಂತೆನ್ನುವುದಕ್ಕೆ ಸಿನಿಮಾ ಮೇಲಿನ ಪ್ರೀತಿ, ಸೋಲೋ, ಗೆಲುವೋ, ಇಲ್ಲಿಯೇ ಸಾಧಿಸಬೇಕೆನ್ನುವ ವಿಶ್ವಾಸ ಮತ್ತು ಛಲವೇ ಕಾರಣವಂತೆ.” ಡಿಪ್ರೆಷನ್ ಇತ್ತು. ಅದು ಆ ಕ್ಷಣಕ್ಕೆ. ಯಾಕಂದ್ರೆ ಆ ಕ್ಷಣದಲ್ಲಿ ನನಗಾದ ನೋವು ಹಾಗಿತ್ತು. ಆದರೆ ಅದನ್ನು ಅಲ್ಲಿಗೇ ಮರೆತು ಬಿಟ್ಟೆ. ಆದರೆ ಅದರಿಂದಲೇ ಏನೋ ಉಂಟಾದ ಆರೋಗ್ಯ ಸಮಸ್ಯೆಗೆ ಒಂದಷ್ಟು ದಿನ ರೆಸ್ಟ್ ತೆಗೆದುಕೊಳ್ಳಲೇ ಬೇಕಾಯಿತು. ಹಾಗಂತ ಅದನ್ನೇನು ಹೆಚ್ಚು ದಿನಕ್ಕೆ ಮುಂದುವರೆಸಲಿಲ್ಲ. ಅದೆಲ್ಲ ಬಿಟ್ಟು ಮುಂದಕ್ಕೆ ಹೋಗಬೇಕು ಅಂತಲೇ ಆಸ್ಪತ್ರೆಯಲ್ಲಿದ್ದಾಗ ಪ್ರಾರಂಭ ಚಿತ್ರದ ಕತೆ ಕೇಳಿದೆ. ಸಿನಿಮಾ ಪಯಣ ಮತ್ತೆ ಅಲ್ಲಿಂದ ಶುರುವಾಯಿತುʼ ಎನ್ನುವ ಮನದಾಳದ ಮಾತುಗಳನ್ನು ನಟ ಮನುರಂಜನ್ ಶನಿವಾರ ಹೊಸ ವರ್ಷದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಣ್ಣದೊಂದು ಮಾಧ್ಯಮಗೋಷ್ಠಿಯಲ್ಲಿ ತಮ್ಮ ಮನದಾಳ ಮಾತು ಹಂಚಿಕೊಂಡರು.