ಪಿಆರ್‌ಕೆ ಬ್ಯಾನರ್‌ನಲ್ಲಿ ಮತ್ತೆ ದಾನಿಶ್‌ ಸೇಠ್ -ಒನ್‌ ಕಟ್‌-ಟೂ ಕಟ್‌ ಸಿನ್ಮಾ ಶುರು ಗುರು‍

ದಾನಿಶ್‌ ಸೇಠ್‌ ಅಭಿನಯದ 3 ನೇ ಸಿನಿಮಾ

ದಾನಿಶ್‌ ಸೇಠ್‌ ಅಂದಾಕ್ಷಣ ನೆನಪಾಗೋದೇ “ಹಂಬಲ್‌ ಪೊಲಿಟಿಷಿಯನ್‌ ನೋಗರಾಜ್‌” ಚಿತ್ರ. ದಾನಿಶ್‌ ಸೇಠ್‌ ಬಹುಮುಖ ಪ್ರತಿಭೆ. “ಮ್ಯಾನ್‌ ಆಫ್‌ ವಾಯ್ಸಸ್‌” ಖ್ಯಾತಿಯ ದಾನಿಶ್‌, ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯಗೊಂಡವರು. ಕೊರೊನಾ ಸಮಯದಲ್ಲಂತೂ ಅವರು ಹಲವು ಪಾತ್ರಗಳ ಮೂಲಕ ಗಮನಸೆಳೆದಿದ್ದುಂಟು. ಈ ಪೈಕಿ ಅವರ ಗೋಪಿ ಪಾತ್ರ ಕೂಡ ಹೈಲೈಟ್‌ ಆಗಿತ್ತು. ಇದೀಗ ಈ ಪಾತ್ರವನ್ನೇ ಇಟ್ಟುಕೊಂಡು ಒಂದು ಸಿನಮಾ ರೆಡಿಯಾಗುತ್ತಿದೆ ಎಂಬುದೇ ಈ ಹೊತ್ತಿನ ವಿಶೇಷ. ಅಂದಹಾಗೆ, ಅದೊಂದು ಅಮಾಯಕ ಗೋಪಿ ಕುರಿತಾದ ಚಿತ್ರ. ದಾನಿಶ್ ಸೇಠ್ ಅವರೇ ಸೃಷ್ಟಿ ಮಾಡಿರುವ ಗೋಪಿ ಪಾತ್ರ ಒಂದು ಅಮಾಯಕ ಹುಡುಗನ ಸುತ್ತ ನಡೆಯುವ ಕಥೆ. ಪಾತ್ರದ ಬಗ್ಗೆ ಹೇಳುವುದಾದರೆ, ಅವನಿಗೆ ಅಶ್ಲೀಲ ಚಿತ್ರಕ್ಕೂ ಸಾಮಾನ್ಯ ಚಿತ್ರಕ್ಕೂ ವ್ಯತ್ಯಾಸವೇ ಗೊತ್ತಿಲ್ಲ. ಗೋಪಿ ತುಂಬಾನೇ ಮುಗ್ಧ ಸ್ವಭಾವದ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾನೆ.

ಅದೊಂದು ವಿಭಿನ್ನ ಕಥೆ ಹೊಂದಿದೆ. ಈ ಚಿತ್ರ ಪಿಆರ್‌ಕೆ ಪ್ರೊಡಕ್ಷನ್‌ ಮೂಲಕ ತಯಾರಾಗುತ್ತಿದೆ. ಪುನೀತ್ ರಾಜ್‌ಕುಮಾರ್ ಅವರ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು, ವಮ್ಸಿಧರ ಭೋಗರಾಜು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ “ಒನ್ ಕಟ್, ಟೂ ಕಟ್” ಎಂದು ಹೆಸರಿಡಲಾಗಿದೆ. ದಾನಿಶ್‌ ಸೇಠ್‌ ಅಭಿನಯಿಸಿದ್ದ “ಫ್ರೆಂಚ್ ಬಿರಿಯಾನಿ” ಸಿನಿಮಾವನ್ನು ಪಿಆರ್‌ಕೆ ಸಂಸ್ಥೆ ನಿರ್ಮಾಣ ಮಾಡಿತ್ತು. ಅಮೆಜಾನ್‌ನಲ್ಲಿ ಬಿಡುಗಡೆಯಾಗಿದ್ದ ಆ ಸಿನಿಮಾ ಎಲ್ಲರ ಗಮನ ಸೆಳೆದಿತ್ತು. ಈ ಚಿತ್ರವನ್ನು ಪನ್ನಗಾಭರಣ ನಿರ್ದೇಶಿಸಿದ್ದರು. ಸದ್ಯಕ್ಕೆ ದಾನಿಶ ಸೇಠ್‌ ಅವರು ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ” ಚಿತ್ರದಲ್ಲೂ ನಟಿಸುತ್ತಿದ್ದಾರೆ. “ಒನ್ ಕಟ್, ಟೂ ಕಟ್” ದಾನಿಶ್‌ ಸೇಠ್‌ ಅವರ ಮೂರನೇ ಚಿತ್ರ.

 

Related Posts

error: Content is protected !!