ನಾರಾಯಣ್ ಹೊಸ ಚಿತ್ರದ ಟೈಟಲ್ ಲಾಂಚ್ ಮಾಡಿದ ದರ್ಶನ್

ಆದಿತ್ಯ ನಟನೆಯ ಚಿತ್ರಕ್ಕೆ 5 ಡಿ ಎಂಬ ಹೆಸರು ಫಿಕ್ಸ್

 

ಕನ್ನಡ ಚಿತ್ರರಂಗದಲ್ಲೀಗ ಹೊಸ ಸಿನಿಮಾಗಳ ಪರ್ವ. ಕಳೆದ ಹತ್ತು ತಿಂಗಳಿನಿಂದಲೂ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಚಿತ್ರರಂಗ ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಹೊಸಬರ ಚಿತ್ರಗಳು ಸೆಟ್ಟೇರುತ್ತಿವೆ. ಹಾಗೆಯೇ ಸ್ಟಾರ್ಸ್ ಸಿನಿಮಾಗಳೂ ಮುಹೂರ್ತದ ಜೊತೆಗೆ ತಮ್ಮ ಹೊಸ ಚಿತ್ರಗಳನ್ನು ಘೋಷಿಸುತ್ತಿವೆ.

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಈಗ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅವರ ಸಿನಿಮಾಗೆ ಆದಿತ್ಯ ಹೀರೋ ಅನ್ನೋದೇ ವಿಶೇಷ.
ಅಂದಹಾಗೆ, ನಾರಾಯಣ್ ಮತ್ತು ಆದಿತ್ಯ ಅವರ ಕಾಂಬಿನೇಷನ್ ಸಿನಿಮಾಗೆ “5ಡಿ ” ಎಂದು ನಾಮಕರಣ ಮಾಡಿದ್ದಾರೆ.

 

ಜನವರಿ 1ರಂದು ತಮ್ಮ ನೂತನ ಸಿನಿಮಾದ ಟೈಟಲ್ ಲಾಂಚ್ ಮಾಡುವ ಮೂಲಕ ಹೊಸ ಚಿತ್ರ ಮಾಡುವ ಕುರಿತು ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿತು.
ಚಿತ್ರದ ಪೋಸ್ಟರ್ ವಿಭಿನ್ನವಾಗಿದೆ. ಪೋಸ್ಟರ್ ಒಳಗೆ ಒಂದು ಕೈ, ಅದರೊಳಗೆ ಒಂದಷ್ಟು ಮುಖಗಳು ಆಂಗ್ಲದಲ್ಲಿ ಬರೆದ ‘ಡಿ’ ಎಂಬ ಅಕ್ಷರ ಅನ್ನೋದರ ಹಿಂದೆ ಅಡಗಿರುವ ವಿಶೇಷತೆಗಳು ಸಾಕಷ್ಟಿದೆ.
ಇನ್ನು ಈ ಚಿತ್ರವನ್ನು ಸ್ವಾತಿ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

ಬಹಳ ದಿನಗಳ ಬಳಿಕ ನಾರಾಯಣ್ ಆಕ್ಷನ್‌ ಕಟ್ ಹೇಳುತ್ತಿರುವ ಸಿನಿಮಾ ಇದು. ನಾರಾಯಣ್ ಯಾವುದೇ ಸಿನಿಮಾ‌ ಮಾಡಿದರೂ ಅಲ್ಲೊಂದು ವಿಶೇಷತೆ ಇದ್ದೇ ಇರುತ್ತೆ. ಇಲ್ಲೂ ಆ ವಿಶೇಷತೆ ನಿರೀಕ್ಷಿಸಬಹುದು. ಈ ಚಿತ್ರದಲ್ಲಿ ಆದಿತ್ಯ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ. ನಾರಾಯಣ್ ಸೆಂಟಿಮೆಂಟ್ ಹಾಗೂ ಹಾಸ್ಯ ಪ್ರಧಾನ ಸಿನಿಮಾಗಳಿಗೆ ಸೈ ಎನಿಸಿಕೊಂಡವರು. ಹಾಗಂತ ಮಾಸ್ ಸಿನಿಮಾಗಳಿಂದ ದೂರ ಇದ್ದಾರೆ ಅಂದುಕೊಳ್ಳುವಂತಿಲ್ಲ. ಕನ್ನಡ ಚಿತ್ರರಂಗಕ್ಕೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಎಸ್.ನಾರಾಯಣ್, ಈಗ ಮೊದಲ‌ ಸಸ್ಪೆನ್ಸ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಈ ಚಿತ್ರಕ್ಕೆ ಆದಿತ್ಯ ನಾಯಕರಾದರೆ, ಅದಿತಿ ಪ್ರಭುದೇವ ನಾಯಕಿ. ಟೈಟಲ್ ಲಾಂಚ್ ಮಾಡಿ ಮಾತನಾಡಿದ ದರ್ಶನ್ ಹೇಳಿದ್ದಿಷ್ಟು,’ಕಳೆದ ವರ್ಷ ಎಲ್ಲರೂ ಸಾಕಷ್ಟು ಸಮಸ್ಯೆ ಎದುರಿಸಿದ್ದುಂಟು. ಈ ವರ್ಷದ ಮೊದಲ ದಿನ ನಾರಾಯಣ್ ಸರ್ ಸಿನಿಮಾ ಮಾಡಿದ್ದಾರೆ. ಆದಿತ್ಯ ಗೆ ಒಳ್ಳೆಯದಾಗಲಿ. ಮೊದಲ ಬಾರಿಗೆ ಸಸ್ಪೆನ್ಸ್ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ಮಾಡುವ ‌ಮೂಲಕ ನಮ್ಮವರಿಗೆ ಕೆಲಸ ಕೊಡುತ್ತಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

ನಾರಾಯಣ್ ಮಾತನಾಡಿ, ‘ ಲಾಕ್ ಡೌನ್ ದಿನಗಳನ್ನು ಚೆನ್ನಾಗಿ ಬಳಸಿಕೊಂಡೆ ಒಳ್ಳೆಯ ಕಥೆ ಬರೆಯೋಕೆ ಕಾರಣವಾಯ್ತು. ನಾಲ್ಕು ಸ್ಕ್ರಿಪ್ಟ್ ಆಗಿದೆ. ಇವತ್ತು ಶುರುವಾಗಿದೆ. ಹೊಸ ಉತ್ಸಾಹವಿದೆ. ಸ್ವಾತಿ ಕುಮಾರ್ ನಿರ್ಮಾಣವಿದೆ. ರವಿಕುಮಾರ್ ಕಥೆ ಜೊತೆಗೆ ಆದಿತ್ಯ ಹೆಸರು ಹೇಳಿದರು. ‘ಚಂದ್ರ ಚಕೋರಿ’ ಕಥಾ ನಾಯಕ ಇವರೇ ಆಗಬೇಕಿತ್ತು. ಸ್ಕ್ರಿಪ್ಟ್ ವೇಳೆ ಆದಿತ್ಯ ಬರೋರು ಹೋಗೊರು. ಆದರೆ ಬೇರೆ ಸಿನಿಮಾಗೆ ಓಕೆ ಆಗಿದ್ದರು. ಬಹಳ ವರ್ಷಗಳ ಬಳಿಕ ಈಗ ಕೆಲಸ‌ಮಾಡ್ತಾ ಇದೀನಿ. ಖುಷಿ ಆಗಿದೆ. ಬಾಬು ಸರ್ ಪುತ್ರ ಎಂಬ ಹೆಮ್ಮೆ. ಪರಿಪೂರ್ಣ ಕಲಾಕುಟುಂಬ ಇದು. ಅದಿತಿ ಅಚಾನಕ್ ಆಗಿ ನಾಯಕಿಯಾಗಿ ಸಿಕ್ಕರು. ರೌಡಿ ಪಾತ್ರವದು. ದರ್ಶನ್ ಅವರು ಮೊದಲ ಸಲ ಬಂದು ತೃಪ್ತಿಯಿಂದ ಬಂದು ಹಾರೈಸಿದ್ದಾರೆ. ಬಹು ಭಾಷೆಯಲ್ಲಿ ಈ ಚಿತ್ರ ತಯಾರಾಗಲಿದೆ. ಹಲವು ಲುಕ್ ಇಲ್ಲಿರಲಿವೆ. ಹಂತ ಹಂತವಾಗಿ ಹೊರಬರಲಿವೆ ಎಂದರು.

 

ಆದಿತ್ಯ ಮಾತನಾಡಿ, ‘5ಡಿ ಒಂದೊಳ್ಳೆಯ ಸಿನಿಮಾ. ಬಹಳ ವರ್ಷಗಳ ಹಿಂದೆ ಮಾಡಲು ಆಗಲಿಲ್ಲ. ಮತ್ತೆ ಮಾಡುವ ಪ್ಲಾನ್ ಇತ್ತು ಆಗಲಿಲ್ಲ. ನಾರಾಯಣ್ ಸರ್ ಹೇಳಿದರು. ಕಥೆ ಕೇಳಲಿಲ್ಲ. ನಿಜವಾಗಲೂ ಅದ್ಭುತ ಕಥೆ ಮಾಡಿದ್ದಾರೆ. ಸಿನಿಮಾ ಜರ್ನಿಯಲ್ಲಿ ಈ ರೀತಿಯ ಜಾನರ್ ಕಥೆ ಮಾಡಿಲ್ಲ. ಕೆಲವರು ನಾರಾಯಣ್ ಹೆದರಿಸಿರಬೇಕಲ್ಲಾ ಅಂದ್ರು, ನಾರಾಯಣ್ ಸರ್ ಜೊತೆ ಕೆಲಸ‌ ಮಾಡಿದ್ದೇನೆ. ಮೊದಲು ಭಯ ಇತ್ತು ಆಮೇಲೆ ಸರಿ ಹೋಯ್ತು. ಆರ್ಟಿಸ್ಟ್ ಗಳನ್ನು ಚೆನ್ನಾಗಿ ಪಳಗಿಸುತ್ತಾರೆ. ತಂದೆ ಹೇಳಿದಂಗೆ ನಿರ್ದೇಶಕನ ನಟ ಆಗಿ ಕೆಲಸ‌ ಮಾಡ್ತೀನಿ.

ನಾನು ಬೊಂಬೆ ಅವರು ಹೇಳಿದಂತೆ ಕುಣಿತೀನಿ.‌ಡಿ ಫಾರ್ ದಾಸ, ಡಿ ಫಾರ್ ಡೆಡ್ಲಿ, ಡಿ ಅಂದರೆ ‌ದರ್ಶನ್, ಡಿ ಆಂದರೆ ದುಶ್ಯಂತ್ ಹಾಗಾಗಿ ‘5ಡಿ’ ಅಂದರು ಆದಿತ್ಯ. ಕುಮಾರ್ ಛಾಯಾಗ್ರಹಣವಿದೆ. ಬೆಂಗಳೂರು ಸೇರಿದಂತೆ ಇತರೆಡೆ ಚಿತ್ರೀಕರಣ ನಡೆಯಲಿದೆ.  ಜ್ಯೋತಿ ರೈ, ರಾಜೇಂದ್ರಸಿಂಗ್ ‌ಬಾಬು, ಮಾಲೂರು ಶ್ರೀನಿವಾಸ್. ಇದ್ದರು

Related Posts

error: Content is protected !!