ರೋರಿಂಗ್‌ ಮದಗಜನ ಅಬ್ಬರ ಶುರು – ತೆಲುಗು ಟೀಸರ್‌ಗೆ ಭರಪೂರ ಮೆಚ್ಚುಗೆ

ಗಂಟೆಗಳಲ್ಲೇ ಲಕ್ಷಾಂತರ ವೀಕ್ಷಣೆ- ಶ್ರೀಮುರಳಿ ಫ್ಯಾನ್ಸ್‌ ಫಿದಾ

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ “ಮದಗಜ” ತೆಲುಗಿನಲ್ಲೂ ತಯಾರಾಗುತ್ತಿದೆ ಎಂಬ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಈಗ ತೆಲುಗಿನಲ್ಲೂ “ರೋರಿಂಗ್‌ ಮದಗಜ” ಹೆಸರಲ್ಲಿ ರೆಡಿಯಾಗುತ್ತಿದ್ದು, ಹೊಸ ವರ್ಷಕ್ಕೆ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ ಕೆಲವೇ ಕ್ಷಣಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಣೆ ಪಡೆದಿದೆ. ಸುಮಾರು ೧೫ ಸಾವಿರಕ್ಕೂ ಹೆಚ್ಚು ಜನರಿಂದ ಮೆಚ್ಚುಗೆ ಸಿಕ್ಕಿದೆ. ಸಾವಿರಾರು ಪಾಸಿಟಿವ್‌ ಕಾಮೆಂಟ್ಸ್‌ ಕೂಡ ಬಂದಿದೆ. ಇದರಿಂದಾಗಿ ಸಿನಿಮಾ ತಂಡ ಮತ್ತಷ್ಟು ಹುಮ್ಮಸ್ಸಿನಲ್ಲಿದೆ. ಅಷ್ಟೇ ಅಲ್ಲ, ಶ್ರೀಮುರಳಿ ಅವರೇ ತೆಲುಗಿನಲ್ಲೂ ಆ ಟೀಸರ್‌ಗೆ ವಾಯ್ಸ್‌ ನೀಡಿದ್ದಾರೆ. ಟೀಸರ್‌ನಲ್ಲಿರುವ ವಾಯ್ಸ್‌ ಸಖತ್‌ ಆಗಿದ್ದು, ಫ್ಯಾನ್ಸ್‌ ಖುಷಿಗೆ ಈಗ ಪಾರವೇ ಇಲ್ಲ.


ಮಹೇಶ್‌ ಕುಮಾರ್‌ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್‌ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ರವಿಬಸ್ರೂರ್‌ ಸಂಗೀತವಿದೆ. ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ಜಗಪತಿಬಾಬು ಕೂಡ ನಟಿಸಿದ್ದಾರೆ. ಈ ಹಿಂದೆ ಬಿಡುಗಡೆಯಾದ ಕನ್ನಡದ “ಮದಗಜ” ಚಿತ್ರದ ಟೀಸರ್‌ ನೋಡಿ ಮೆಚ್ಚುಗೆ ಸೂಚಿಸಿದ್ದ ಜಗಪತಿಬಾಬು, ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೂ ಶುಭಕೋರಿದ್ದರು.


ಸದ್ಯ ಶ್ರೀಮುರಳಿ “ಮದಗಜ” ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಈಗ ತೆಲುಗಿನ “ರೋರಿಂಗ್‌ ಮದಗಜ” ಚಿತ್ರದ ಟೀಸರ್‌ ಹೊರಬಂದಿದೆ. ಸಂಕ್ರಾಂತಿಗೆ ಮತ್ತೊಂದು ವಿಶೇಷತೆ ಈ ಚಿತ್ರದಿಂದ ಹೊರಬರಲಿದೆ. ತಮಿಳಿನಲ್ಲೂ “ಮದಗಜ” ಮೂಡಿಬರಲಿದೆ ಎಂಬುದೇ ಆ ವಿಶೇಷ. ಸಂಕ್ರಾಂತಿ ಹಬ್ಬಕ್ಕೆ ಸರ್‌ಪ್ರೈಸ್‌ ಕೊಡುವ ಉತ್ಸಾಹದಲ್ಲಿದೆ ಚಿತ್ರತಂಡ.

ಉಮಾಪತಿ, ನಿರ್ಮಾಪಕ
ಮಹೇಶ್‌ ಕುಮಾರ್‌, ನಿರ್ದೇಶಕ

Related Posts

error: Content is protected !!