ಬ್ಯಾಚುಲರ್ ಜೊತೆ ಮಿಲನಾ , ನಿಮಿಕಾ ಡಿಂಗುಡಾಂಗು
ಡಾರ್ಲಿಂಗ್ ಕೃಷ್ಣ , ಮಿಲನ ನಾಗರಾಜ್ ಹಾಗೂ ನಿಮಿಕಾ ರತ್ನಾಕರ್ ಅಭಿನಯದ ” ವರ್ಜಿನ್ʼ ಚಿತ್ರದ ಟೈಟಲ್ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಚಿತ್ರತಂಡ ಟೈಟಲ್ ಬದಲಾವಣಿಗೆ ಮುಂದಾಗಿದ್ದು, ಹೊಸ ವರ್ಷದ ದಿನವೇ ಚಿತ್ರದ ಹೊಸ ಟೈಟಲ್ ಅನಾವರಣಗೊಂಡಿದೆ. ಹೌದು, “ಮಿಸ್ಟರ್ ಬ್ಯಾಚುಲರ್” ಎಂಬ ಶೀರ್ಷಿಕೆಯನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಲಾಕ್ ಡೌನ್ ಸಮಯದಲ್ಲೇ ಶುರುವಾದ ಈ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣವೂ ಮುಗಿದಿದೆ.
ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಸದ್ಯಕ್ಕೆ ಈ ಚಿತ್ರದ ವಿಶೇಷತೆಗಳೇನು ಅನ್ನೋದು ರಿವೀಲ್ ಆಗಿಲ್ಲ. ಆದರೆ ಈ ಚಿತ್ರ ಟೈಟಲ್ ಮೂಲಕವೇ ದೊಡ್ಡ ವಿವಾದ ಸೃಷ್ಟಿಸಿತ್ತು. ʼವರ್ಜಿನ್ʼ ಎನ್ನುವ ಚಿತ್ರದ ಶೀರ್ಷಿಕೆಗೆ ಪ್ರೇಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ಚಿತ್ರ ತಂಡವು “ಶೀಘ್ರಮೇವ ಕಲ್ಯಾಣ ಮಸ್ತುʼ ಎನ್ನುವ ಟೈಟಲ್ ಸೆಲೆಕ್ಟ್ ಮಾಡಿಕೊಂಡಿತ್ತು. ಆ ಹೆಸರಲ್ಲೇ ಚಿತ್ರೀಕರಣ ಮುಗಿಸಿಕೊಂಡು ಬಂತು. ಅದು ಕೂಡ ಚಿತ್ರದ ಕಥೆಗೆ ಸೂಕ್ತ ಎನಿಸದ ಕಾರಣ, ಈಗ “ಮಿಸ್ಟರ್ ಬ್ಯಾಚುಲರ್” ಶೀರ್ಷಿಕೆಯನ್ನು ಪಕ್ಕಾ ಮಾಡಿದೆ. ಚಿತ್ರಕ್ಕೆ ನಾಯ್ಡು ಬಂಡಾರ ನಿರ್ದೇಶಕರು. ಪೂರಿ ಜಗನ್ನಾಥ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಾಯ್ಡು ಬಂಡಾರ ಅವರಿಗೆ ಕನ್ನಡದಲ್ಲಿ ಇದು ಮೊದಲ ಪ್ರಯತ್ನ.
ನಿರ್ಮಾಪಕರೂ ಕೂಡ ಆಂಧ್ರ ಮೂಲದವರು. ಶ್ರೀನಿವಾಸ್ ಹಾಗೂ ಡಿ. ಸ್ವರ್ಣಲತಾ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸಹ ನಿರ್ಮಾಪಕರಾಗಿ ಚಲಪತಿ, ಕಿರಣ್ ಕುಮಾರ್ ಜೊತೆಯಾಗಿದ್ದಾರೆ.
ಕದ್ರಿ ಮಣಿಕಾಂತ್ ನಿರ್ದೇಶನ ಹಾಗೂ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಚಿತ್ರಕ್ಕಿದೆ. ಇದೊಂದು ಕಾಮಿಡಿ ಡ್ರಾಮಾ, ಹಾಗೆಯೇ ಕ್ಯೂಟ್ ಲವ್ ಸ್ಟೋರಿ ಹೊಂದಿದೆ. ಇದು ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ಹೊರಬರಲಿದೆ ಎನ್ನಲಾಗುತ್ತಿದೆ.