ಇದು ಎಂಆರ್‌ ಅಲ್ಲ, ಡಿಆರ್‌! ಮುತ್ತಪ್ಪ ರೈ ಸಿನಿಮಾ ಮಾಡೋರು ಯಾರು?

 

ಮುತ್ತಪ್ಪ ರೈ  ಟೈಟಲ್‌  ವಿವಾದ-ಸಿನಿಮಾ ಗೊಂದಲಕ್ಕೆ ತೆರೆ?

ಎಂಆರ್…‌
ಕನ್ನಡ ಚಿತ್ರರಂಗದಲ್ಲಿ ಒಂದು ಮಟ್ಟಿಗೆ ಸಂಚಲನ ಮೂಡಿಸಿದ ಹೆಸರಿದು. ವಿಷಯವಿಷ್ಟೇ, ಇತ್ತೀಚೆಗಷ್ಟೇ ನಿರ್ದೇಶಕ ರವಿಶ್ರೀವತ್ಸ ಅವರು, ಮುತ್ತಪ್ಪ ರೈ ಅವರ ಕುರಿತ “ಎಂಆರ್”‌ ಸಿನಿಮಾ ಮಾಡುವುದಾಗಿ ಅನೌನ್ಸ್‌ ಮಾಡಿದ್ದರು. ಅಷ್ಟೇ ಅಲ್ಲ, ಮುಹೂರ್ತ ಕೂಡ ನಡೆಸಿದ್ದರು. ನಿರ್ಮಾಪಕ ಶೋಭರಾಜಣ್ಣ ಅವರ ಪುತ್ರನನ್ನು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಪರಿಚಯಿಸಿದ್ದರು. ಆದರೆ, ದಿಢೀರನೆ, ನಿರ್ಮಾಪಕ ಪದ್ಮನಾಭ್‌ ಅವರು, “ಎಂಆರ್‌” ಸಿನಿಮಾವನ್ನು ನಾನು ಮಾಡುತ್ತಿದ್ದೇನೆ. ಬೇರೆ ಯಾರೂ ಮಾಡುವಂತಿಲ್ಲ. ಆ ರೈಟ್ಸ್‌ ನನ್ನ ಬಳಿ ಇದೆ. ಈ ಹಿಂದೆಯೇ, ರೈಟ್ಸ್‌ ಪಡೆದಿದ್ದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದರು.

ಅದೊಂದು ರೀತಿ ಗೊಂದಲವೂ ಮೂಡಿಸಿತ್ತು. ಅದಕ್ಕೆ ಉತ್ತರವಾಗಿ, ರವಿಶ್ರೀವತ್ಸ ಅವರು ಸಹ ಒಂದು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಚಿತ್ರ “ಎಂಆರ್‌” ಅಲ್ಲ, “ಡಿಆರ್”‌ ಎಂದು ಹೇಳಿಕೊಂಡಿದ್ದಾರೆ. ಹಿಂದೆ “ಎಂಆರ್‌” ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದ ಟೀಮ್‌ ಮತ್ತು ಕಲಾವಿದರೇ ಇಲ್ಲೂ ಕೆಲಸ ಮಾಡಲಿದ್ದಾರೆ. ಆದರೆ, ಇದು ಬ್ಯಾಂಕಾಕ್‌, ಮಂಗಳೂರು ಸುತ್ತಮುತ್ತಲ ಕಥೆಯಲ್ಲ. ಹಳೆಯ ತಂಡದ ಜೊತೆಗೆ ಈಗ “ಡಿಆರ್‌” ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದಲ್ಲದೆ, ಪೋಸ್ಟರ್‌ವೊಂದನ್ನು ರಿಲೀಸ್‌ ಮಾಡಿದ್ದಾರೆ. ಆದರೆ, ಇದು ಮುತ್ತಪ್ಪ ರೈ ಅವರದೇ ಕಥೆನಾ? ಇದಕ್ಕೆ ಉತ್ತರವಿಲ್ಲ. ಆದರೂ ಇದು ಮುತ್ತಪ್ಪ ರೈ ಅವರ ಕುರಿತಾದ ಕಥೆಯೇ ಎಂದು ಹೇಳಲಾಗುತ್ತಿದೆ. ನಿರ್ದೇಶಕರು ಮಾತ್ರ, ಅದನ್ನು ರಿವೀಲ್‌ ಮಾಡದೆ, ಇದು ಎಂಆರ್‌ ಅಲ್ಲ, ಡಿಆರ್‌ ಎಂದಷ್ಟೇ ಹೇಳಿದ್ದಾರೆ.


ರವಿ ಶ್ರೀವತ್ಸ ಅವರ “ಎಂಆರ್” ಸಿನಿಮಾ ಸ್ಟಾಪ್ ಆಗಿದೆ. ಈಗವರು ಹೊಸ ಸಿನಿಮಾ ಶುರು ಮಾಡಿದ್ದು, ಹೊಸ ಟೈಟಲ್ ಪೋಸ್ಟರ್‌ ಲಾಂಚ್‌ ಮಾಡಿದ್ದಾರೆ. ಚಿತ್ರಕ್ಕೆ ದೀಕ್ಷಿತ್‌ ಹೀರೋ. ತಮ್ಮ ಸಿನಿಮಾ ಕುರಿತು ಅವರು ಹೇಳಿದ್ದಿಷ್ಟು. “ನೋವಾಗುತ್ತೆ, ತುಂಬಾ ಒಳ್ಳೆಯ ವೆಲ್‌ ಕಮ್‌ ಸಿಗುತ್ತೆ. ಅಂತ ಅಂದುಕೊಂಡಿದ್ದೆ. ನಂಗೆ ಗೊತ್ತಾಗಿದೆ‌. ಖಂಡಿತವಾಗ್ಲೂ ದೊಡ್ಡ ಮಟ್ಟಕ್ಕೆ ಹೆಸರು‌ಮಾಡ್ತೀವಿ” ಎಂದಿದ್ದಾರೆ.
ನಿರ್ಮಾಪಕ ಶೋಭಾ ರಾಜಣ್ಣ ಅವರು ಮಾತನಾಡಿ, “ಸಕ್ಸಸ್‌ ಆಗುತ್ತೆ ಅಂತಾಲೇ ಈ ಚಿತ್ರ ಮಾಡಬೇಕು ಅಂತ ಹೊರಟಿದ್ದೇವೆ. ಇಷ್ಟು ವರ್ಷ ಇಂಡಸ್ಟ್ರಿಯಲ್ಲಿದ್ದೇನೆ. ಯಾರೂ ನಿರ್ಮಾಪಕರಿಗೆ ಟಾರ್ಚರ್ ಕೊಡ್ಬೇಡಿ. ನಿಮ್ಮ ಮಕ್ಕಳ ಚಿತ್ರವಾಗಿದ್ದರೆ ಏನು ಮಾಡ್ತಾ ಇದ್ರಿ. ಅವರು ಮಾಡಲಿ, ಅವರು ಮಾಡಿದ ಬಳಿಕ ನಾವು ಮಾಡ್ತೀವಿ.


ಚಿತ್ರದಲ್ಲಿ ನಟಿಸುತ್ತಿರುವ ಪ್ರಶಾಂತ್ ಸಂಬರಗಿ ಮಾತನಾಡಿ,”ಇವತ್ತಿಗೂ ನಾವು ಲೀಗಲ್ ಆ್ಯಬಿಟ್‌ನಲ್ಲಿಯೇ ಇದ್ದೇವೆ‌ . ಮುತ್ತಪ್ಲ ರೈ ಪಾಪಿಗಳ ಲೋಕ ಆರು ತಿಂಗಳು ಓಡಾಡಿದ್ದೇನೆ ಎನ್ನುವ ಕಾರಣಕ್ಕೆ ಇದನ್ನ ಮಾಡಬಹುದು. ನಾವು ಅವರ ಬಗ್ಗೆ ರಿಸರ್ಚ್ ಮಾಡಿದ್ದೇವೆ. ಅವರನ್ನು ದೂರ ಇಟ್ಟಿದ್ದರು. ನಾವು ಅವರ ಬಗ್ಗೆ ಡೀಟೈಲ್‌ ಸ್ಟಡಿ ಮಾಡಿದ್ದೇವೆ ಎಂದರು.
ಚಂದ್ರ ಚೂಡ್ ಮಾತನಾಡಿ,” ಯಾವುದೇ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯ, ಸಿನಿಮಾ ಮಾಡಲು ಅಪ್ಪಣ ಬೇಕಿಲ್ಲ. ಶಾಂತವೇರಿ ಗೋಪಾಲ ಗೌಡ ಅವರ ಪ್ರಕರಣದಲ್ಲಿ ಹಿಂದೆ ಇದ್ದ ಇಂಜೆಕ್ಷನ್ ಆರ್ಡರ್ ಕ್ಯಾನ್ಸಲ್ ಆಗಿದೆ. ಕಾನೂನಾತ್ಮಕವಾಗಿ ಪರಿವರ್ತಿಸಲು ವ್ಯಕ್ತಿಗಳ ಅಪ್ಪಣೆ ಬೇಕಿಲ್ಲ. ದೊಣ್ಣೆ ನಾಯಕ‌ನ ಅನುಮತಿಯೂ ಬೇಕಿಲ್ಲ ಎಂದರು.
ನಿರ್ದೇಶಕ ರವಿ ಶ್ರೀವತ್ಸ ಮಾತನಾಡಿ, “ನಾಲ್ಕು ಸಿನಿಮಾಗಳು ಬ್ಯಾನ್ ಆದ ಜಾಗ ಇದು. ಕಟ್ಸ್ ಕೊಟ್ಟಿದ್ದು ಇಲ್ಲಿಯೇ. ನಾನು ಎಂಆರ್‌ ಬಗ್ಗೆ ಸ್ಟಡಿ ಮಾಡಿದ್ದೇನೆ. ಸಿಡ್ನಿಗೂ ಹೋಗಿ ಮಾಹಿತಿ ಕಲೆ ಹಾಕಿದ್ದೆ. ಆದರೆ ಆಗ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಆರ್‌ಜಿವಿ ಕಥೆಯಾದರೆ, ಸರ್ಕಾರಕ್ಕೆ ಡಾಕ್ಯುಂಎಂಟ್‌ ಆಗುತ್ತೆ ಎಂಬ ಭಯದಿಂದ ಮಾಡಲಾಗಲಿಲ್ಲ. ನಾನು ಸಿನಿಮಾ ಬಿಟ್ಟುಕೊಡ್ತೀನಿ. ಅವರು ಮಾಡಿ ರಿಲೀಸ್‌ ಮಾಡಿದ ಬಳಿಕ ನಾನು ಈ ಸಿನಿಮಾ ಮಾಡ್ತೀನಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಶೋಭರಾಜಣ್ಣ, ಪ್ರಶಾಂತ್‌ ಸಂಬರಗಿ, ಉಮೇಶ್‌ ಬಣಕಾರ್‌ ಇತರರು ಇದ್ದರು. ಅದೇನೆ ಇರಲಿ, ಪೋಸ್ಟರ್‌ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, “ಎಂಆರ್‌” ಶೀರ್ಷಿಕೆ ಬದಲಾಗಿ “ಡಿಆರ್”‌ ಎಂದು ಇಡಲಾಗಿದೆ ಎಂಬುದಂತೂ ಸ್ಪಷ್ಟವಾಗುತ್ತದೆ. ಎಲ್ಲದ್ದಕ್ಕೂ ಸಿನಿಮಾ ಮುಗಿದು ಹೊರಬಂದ ಮೇಲಷ್ಟೇ ಗೊತ್ತಾಗಲಿದೆ. ಹಾಗಾದರೆ, ಮುಂದಾ..? ಕಾದು ನೋಡಬೇಕು.

Related Posts

error: Content is protected !!