ವಿಜಯನಗರದಲ್ಲಿ ವಿಷ್ಣು ಪುತ್ಥಳಿ ಅನಾವರಣ- ವಿಷ್ಣು ಸೇನಾ ಸಮಿತಿ ನೇತೃತ್ವ

ಪುಣ್ಯಸ್ಮರಣೆ ದಿನ ಅಭಿಮಾನಿಗಳ ಸಂಭ್ರಮ

ಇತ್ತೀಚೆಗಷ್ಟೇ ವಿಷ್ಣುವರ್ಧನ್‌ ಅವರ ಪ್ರತಿಮೆ ಭಗ್ನಗೊಳಿಸಿದ್ದ ಸುದ್ದಿ ಕೇಳಿ ಅಪಾರ ಅಭಿಮಾನಿಗಳು ಬೇಸರಗೊಂಡಿದ್ದರು. ಇಡೀ ಚಿತ್ರರಂಗವೇ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಡಿಸೆಂಬರ್‌ ೩೦ರಂದು ವಿಷ್ಣುವರ್ಧನ್‌ ಅವರ ಹನ್ನೊಂದನೇ ಪುಣ್ಯಸ್ಮರಣೆ ಅಂಗವಾಗಿ ಡಾ.ವಿಷ್ಣುವರ್ಧನ ಕನ್ನಡ ಸೇನಾ ಸಮಿತಿ ವತಿಯಿಂದ ವಿಜಯನಗರದಲ್ಲಿ ಇಂದು ಡಾ.ವಿಷ್ಣುವರ್ಧನ್ ಅವರ ಪುತ್ಥಳಿ ಅನಾವರಣ ಮಾಡುವ

ಮೂಲಕ ಅಪಾರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ವಿಜಯನಗರ ಶಾಸಕರಾದ ಕೃಷ್ಣಪ್ಪ, ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ, ಅಧ್ಯಕ್ಷರಾದ ಮೂರ್ತಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

Related Posts

error: Content is protected !!