ಸುಮ್‌ ಸುಮ್ನೆ ಅಲ್ಲ , ಈ ಸುಮನ್ , ಸಾನ್ವಿ  ಸಿನಿ‌ ಕೆರಿಯರ್ ಗೆ ಸಾಥ್ ಕೊಟ್ಟ  ಗ್ರೇಟ್ ಮದರ್‌ !

ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ , ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಅವರಿಗೆ ಮಗಳಾದ್ರೂ ಅಂದ್ರೆ ತಮಾಷೆನಾ?

ಸಿನಿಮಾದ ಮಟ್ಟಿಗೆ ಟ್ಯಾಲೆಂಟ್ ಅಥವಾ ಗ್ಲಾಮರ್ ಎರಡು ಇದ್ದಾಕ್ಷಣ ಸಕ್ಸಸ್ ಸಿಗುತ್ತೆ ಅನ್ನೋದು ಶುದ್ದ ಸುಳ್ಳು.‌ಎರಡೂ ಇದ್ದೂ ಅವಕಾಶ ಇಲ್ಲದೆ ಸೈಡ್ ಗೆ ಸರಿದವರು ಇಲ್ಲಿ ಸಾಕಷ್ಟು ನಟಿಯರಿದ್ದಾರೆ‌. ಅವರೆಡು ಇದ್ದಾಗಿಯೂ ಇಲ್ಲಿ ಅದೃಷ್ಟ ಎನ್ನುವುದು ಇರಬೇಕು. ಜತೆಗೆ ಸರಿಯಾದ ಮಾರ್ಗದರ್ಶನವೂ ಮುಖ್ಯ. ಅವೆಲ್ಲವೂ ಒಟ್ಟಿಗೆ ಸೇರಿಕೊಂಡಾಗ ಸ್ಟಾರ್ ಪಟ್ಟ ಸಿಗುತ್ತೆ ಎನ್ನುವುದಕ್ಕೆ ಬೆಸ್ಟ್ ಎಕ್ಸಾಂಪಲ್ ಕೊಡಗಿನ‌ಬೆಡಗಿ ರಶ್ಮಿಕಾ‌ಮಂದಣ್ಣ ಸಾಕ್ಷಿ‌. 

 

ಕನ್ನಡದ ಸಿನಿ ಪ್ರೇಕ್ಷಕರಿಗೆ ಒಂಥರ ಸೋಜಿಗ. ಇನ್ನೊಂಥರ  ಹೊಟ್ಟೆ ಉರಿ. ಮತ್ತೊಂದೆಡೆ ಕನ್ನಡದ ಹುಡುಗಿ ಅಲ್ಬಾ, ಇರಲಿ ಬಿಡಿ, ಆ ಮಟ್ಟಕ್ಕೆ ಬೆಳೆದಿದ್ದಾಳೆ ಅಂದ್ರೆ ಒಂಚೂರು ಖುಷಿ ಪಡೋಣ ಎನ್ನುವ ಸಮಾಧಾನ….

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಈಗ ಹೀಗೆಲ್ಲ ಲೆಕ್ಕಚಾರಕ್ಕೆ ಕಾರಣ ಆದವರು ಕಿರಿಕ್‌ ಚೆಲುವೆ ರಶ್ಮಿಕಾ ಮಂದಣ್ಣ. ಟಾಲಿವುಡ್‌ ನಲ್ಲಿ ಇಷ್ಟು ದಿನ  ಸ್ಟಾರ್‌ ಸಿನಿಮಾಗಳಿಗೆಲ್ಲ ನಾಯಕಿ ಆಗಿ ಕನ್ನಡದಲ್ಲೂ  ಭರ್ಜರಿಯಾಗಿಯೇ ಸುದ್ದಿ‌ ಮಾಡುತ್ತಿದ್ದ  ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಅಲ್ಲಿಂದ ಬಾಲಿವುಡ್‌ ಗೂ ಕಾಲಿಟ್ಟಿದ್ದಾರೆ.
ವಿಕಾಸ್‌ ಬಾಲ್‌ ನಿರ್ದೇಶನದ ‘ ಮಿಷನ್‌ ಮಜ್ನು’  ಹೆಸರಿನ ಚಿತ್ರಕ್ಕೆ  ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಬಾಲಿವುಡ್ ನಲ್ಲೂ ಖಾತೆ ತೆರೆದರೂ ಎನ್ನುವುದರ ಜತೆಗೆ, ಆ ಚಿತ್ರದಲ್ಲಿ ಅವರು,  ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆನ್ನುವುದು ದೊಡ್ಡ ಸುದ್ದಿ.

ಯಾರಿಗುಂಟು ಯಾರಿಗಿಲ್ಲ ಇಂತಹ ಅವಕಾಶ? ಪ್ರೇಕ್ಷಕರಿರಲಿ, ಸ್ವತಹಃ  ರಶ್ಮಿಕಾ ಕೂಡ ನಟಿಯಾಗಿ ಇಂತಹ ಆವಕಾಶ ಸಿಗುತ್ತೆ ಅಂತ ಕನಸು ಕಂಡಿರಲಿಲ್ಲವೋ ಏನೋ. ಆದ್ರೆ ಅದೃಷ್ಟ ಅನ್ನೋದು ಇದೆಯಲ್ಲಾ, ಅದು ಈಗ ಅವರಿಗೆ ಅಚ್ಚರಿ ಎನ್ನುವಂತ ಅವಕಾಶ ಹೊತ್ತು ತರುತ್ತಿದೆ. ಯಾರಿಗೆ ಗೋತ್ತು, ದೀಪಿಕಾ ಪಡುಕೋಣೆ ತರಹ ರಶ್ಮಿಕಾ ಮಂದಣ್ಣ ಕೂಡ ಬಾಲಿವುಡ್‌ನ‌ ಬಹುಬೇಡಿಕೆಯ ನಟಿಯಾಗಬಹುದು. ಅದೇ ಈಗ ಬಾಲಿವುಡ್‌ ಆಚೆ ಟಾಲಿವುಡ್‌, ಸ್ಯಾಂಡಲ್‌ ವುಡ್‌ ಸೇರಿದಂತೆ ಸೌತ್‌ ಸಿನಿ ದುನಿಯಾದಲ್ಲೇ ದೊಡ್ಡ ಸುದ್ದಿ ಆಗಿದೆ. ಇದೆಲ್ಲವನ್ನು ಕಂಡ  ಕನ್ನಡದ ಸಿನಿ ಪ್ರೇಕ್ಷಕರ ಪೈಕಿ ಕೆಲವರಿಗೆ  ರಶ್ಮಿಕಾ ಕನ್ನಡದ ಹುಡುಗಿ ಎನ್ನುವ ಹೆಮ್ಮೆ. ಮತ್ತೆ ಕೆಲವರಿಗೆ ಅವರೀಗ ಟಾಲಿವುಡ್ ಬೆಡಗಿ ಅಂತ ಬೇಸರ. ಇನ್ನು  ಕನ್ನಡ ಮರೆತರು ಅಂತ ಕೆಲವರಿಗೆ ಹೊಟ್ಟೆ ಉರಿ. ಅದೆಲ್ಲ ಯಾಕೆ ? ರಶ್ಮಿಕಾ ಕನ್ನಡದವರೇ ಆದರೂ,ಅವರ ಮೇಲೆ  ಯಾಕೆ ಇಂತಹ ಬೇಸರ? ಉತ್ತರ ಎಲ್ಲರಿಗೂ ಗೊತ್ತು !!

ರಶ್ಮಿಕಾ ಸಿನಿ ಜಗತ್ತಿಗೆ ಆಕಸ್ಮಿಕವಾಗಿ ಬಂದ ಹುಡುಗಿ. ಆದರೂ ಇಷ್ಟು ಬೇಗ ಇದೆಲ್ಲ ಘಟಿಸುತ್ತೆ, ಅಚ್ಚರಿಯ ಬೆಳವಣಿಗೆಗಳು ಆಗಬಹುದು, ಅತೀ ಕಡಿಮೆ ಅವದಿಯಲ್ಲೆ ದೊಡ್ಡ. ಆದರ್ ಪಟ್ಟ ಸಿಗಬಹುದು ಅಂತೆಲ್ಲ ಕನಸು ಕೂಡ ಕಂಡಿರಲ್ಲಿಲ್ಲವೋ ಏನೋ. ಆದರೆ ಅದೆಲ್ಲ ಹಣೆಬರಹ. ಮೊದಲ ಚಿತ್ರ ‘ ಕಿರಿಕ್ ಪಾರ್ಟಿ’ ಬಂತು. ಅದು ದೊಡ್ಡ ಗೆಲುವು ಕಂಡಿತು‌. ಸಾನ್ವಿ ಎನ್ನುವ ಚಳಾಸಿನ ಹುಡುಗಿ ಕೋಟ್ಯಾಂತರ ಹುಡುಗರ ಮನ ಗೆದ್ದಳು. ಅದು ರಶ್ಮಿಕಾಗೂ ದೊಡ್ಡ ಯಶಸ್ಸು ಸಿಗುವಂತೆ ಮಾಡಿತು. ರಾತ್ರೋರಾತ್ರಿ ರಶ್ಮಿಕಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದರು. ಎಲ್ಲಲ್ಲೂ ಅವರದೇ ಮಾತು ಎನ್ನುವಂತಾಯಿತು. ಇನ್ನೇನು ಕನ್ನಡದಲ್ಲಿ ರಶ್ಮಿಕಾ ಸ್ಟಾರ್ ನಟಿ ಆಗುತ್ತಾರೆನ್ನುವ
ಷ್ಟರಲ್ಲಿಯೇ ತೆಲುಗು ಆಫರ್ ಬಂತು. ವಿಜಯ್‌ ದೇವರ ಕೊಂಡ ಅಭಿನಯದ ʼಗೀತಾ ಗೋವಿದಂʼ ಚಿತ್ರಕ್ಕೆ ನಾಯಕಿಯಾದರು. ಅಲ್ಲಿಂದ ರಶ್ಮಿಕಾ ಅವರ ತಾರಾ ವರ್ಚಸ್ಸು ಬದಲಾಗಿ ಹೋಯಿತು. ಅಲ್ಲಿಂದ‌ ಮುಂದೇನಾಯ್ತು? ಎಲ್ಲವೂ ಗೊತ್ತಿರುವ ವಿಚಾರ.

ತೆಲುಗಿಗೆ ಇಷ್ಟ, ಕನ್ನಡಕ್ಕೆ ಕಷ್ಟ ಎನ್ನುವಂತಾದರೂ ರಶ್ಮಿಕಾ. ಟಾಲಿವುಡ್‌ ಎಂಟ್ರಿ ಮೂಲಕ ದುಬಾರಿಯಾದ ರಶ್ಮಿಕಾ ಅವರ ಸಂಭಾವನೆಗೆ ಬೆಚ್ಚಿ ಬಿದ್ದ ಗಾಂಧಿ ನಗರದ ಮಂದಿ, ರಶ್ಮಿಕಾ ಕನ್ನಡ ದ್ರೋಹಿ ಎನ್ನುವ ಪಟ್ಟ ಕಟ್ಟಿದರು. ಬಣ್ಣದ ಲೋಕಕ್ಕೆ ಪರಿಚಯಿಸಿದವರನ್ನೇ ಮರೆತು, ಹಣದ ಹಿಂದೆ ಹೊರಟರು ಅಂತೆಲ್ಲ ದೂರಿದರು. ಆದರೆ ಅದ್ಯಾವುದಕ್ಕೂ ತಲೆ ಕಡೆಸಿಕೊಳ್ಳದ ರಶ್ಮಿಕಾ ಮಾತ್ರ, ಟಾಲಿವುಡ್‌ ಜತೆಗೆ ಸ್ಯಾಂಡಲ್‌ವುಡ್‌ ನಲ್ಲೂ ಅಭಿನಯಿಸುತ್ತಾ ಬಂದರು. ಅದರ ಫಲವೇ ಎನ್ನುವ ಹಾಗೆ ದೊಡ್ಡ ಎತ್ತರಕ್ಕೆ ಬೆಳೆದರು. ಸೌತ್‌ ಇಂಡಸ್ಟ್ರಿಯಲ್ಲೇ ಸಂಚಲನ ಸೃಷ್ಟಿಸಿದರು. ಅಲ್ಲಿಂದೀಗ ಬಾಲಿವುಡ್ ಜರ್ನಿ.

ಹಾಗಂತ ಕನ್ನಡದ ನಟಿಯರಿಗೇನು ಬಾಲಿವುಡ್‌ಗೆ ಹೊಸದಲ್ಲ. ರಶ್ಮಿಕಾ ಮೊದಲಿಗರು ಅಲ್ಲ.ಆದರೆ  ಬಾಲಿವುಡ್‌ ಆಫರ್‌ ಗಳೇ ದೊಡ್ಡ ಆಫರ್‌ ಅಂತೆಲ್ಲ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡು ಮುಂಬೈ ಫ್ಲೈಟ್‌ ಹತ್ತಿದ ಅನೇಕ ನಟಿಯರ ಪೈಕಿ, ಕೆಲವರು ಅಲ್ಲಿಗೆ ಹೋದಷ್ಟೇ ವೇಗದಲ್ಲೇ ವಾಪಾಸ್‌ ಬೆಂಗಳೂರಿಗೆ ಬಂದಿದ್ದೂ ಇದೆ. ಕೆಲವರು ಬಹುಕಾಲ ಅಲ್ಲಿಯೇ ಇದ್ದರೂ, ದೊಡ್ಡ ಅವಕಾಶ ಸಿಗದೆ ಬೇಸತ್ತು ಹೋದರು. ಹಾಗೆ ನೋಡಿದರೆ ಇಲ್ಲಿಂದ ಅಲ್ಲಿಗೆ ಹೋಗಿ ದೊಡ್ಡ ಸಕ್ಸಸ್‌ ಕಂಡಿದ್ದು ದೀಪಿಕಾ ಪಡುಕೋಣೆ ಮಾತ್ರ. ಸದ್ಯಕ್ಕೆ ಅದೇ ರೇಂಜ್‌ ನಲ್ಲಿ ಈಗ ಗಮನ ಸೆಳೆದವರು ರಶ್ಮಿಕಾ ಮಂದಣ್ಣ. ಎಂಟ್ರಿಯಲ್ಲೇ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಜತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆಂದರೆ, ಅದೇನು ಸಣ್ಣ ಅವಕಾಶ ಅಲ್ಲ. ಮುಂದೆ ಬಾಲಿವುಡ್‌ ಗೆ  ಬಿಗ್‌ ಎಂಟ್ರಿಯ ಸೂಚನೆಯೂ ಆಗಿರಬಹುದು.

ರಶ್ಮಿಕಾ ಅವರಿಗೆ ಇದೆಲ್ಲ ಹೇಗೆ ಸಾಧ್ಯವಾಯಿತು ? ಅವರ ಬೆಳವಣಿಗೆ ಕಂಡವರಿಗೆ ಮೊದಲು ಏದುರಾಗುವ ಪ್ರಶ್ನೆ ಅದು.ಅದಕ್ಕೆ ಸಿಗುವ ಉತ್ತರ ಅವರ ಅಮ್ಮ‌ಸುಮನ್ ಮಂದಣ್ಣ. ಅದೃಷ್ಟ ಇದ್ದರೂ ಒಂದಷ್ಟು ವಿವಾದ, ಬೇಸರಗಳ ನಡುವೆಯೂ ರಶ್ಮಿಕಾ ಈ ಮಟ್ಟಕ್ಕೆ ಬೆಳೆಯುವುದಕ್ಕೆ ಅವರೇ ಮೂಲ ಕಾರಣ .ರಶ್ಮಿಕಾಗೆ ತೆಲುಗು ಆಫರ್‌ ಬಂದಾಗಿನಿಂದ ಅವರೆಲ್ಲ ಬೇಕು, ಬೇಡಗಳನ್ನು ಡಿಸೈಡ್‌ ಮಾಡೋದೇ ಅವರ ತಾಯಿ. ಅದು ಸಿನಿಮಾ‌ ಮಾಧ್ಯಮದವರಿಗೆಲ್ಲ ಗೊತ್ತು. ರಶ್ಮಿಕಾ ಅವರ ಸಂಪರ್ಕಕ್ಕೆ ಯಾರೇ ಫೋನಾಯಿಸಿದರೂ, ಮೊದಲು ಫೋನ್ ಫಿಕ್ ಮಾಡೋದೇ ಅವರ ತಾಯಿ ಸುಮನ್.

ಹಾಗೆ ನೋಡಿದರೆ ರಶ್ಮಿಕಾ ಅವರಿಗೇನು ಸಿನಿಮಾದ ದೊಡ್ಡ ಹಿನ್ನೆಲೆ ಇಲ್ಲ. ಅವರ ಕುಟುಂಬದಿಂದಲೂ ಈ ಮುಂಚೆ ಯಾರು ಸಿನಿಮಾ ಜಗತ್ತಿಗೆ ಬಂದವರಲ್ಲ. ರಶ್ಮಿಕಾನೇ ಅವರ ಫ್ಯಾಮಿಲಿಗೆ ಮೊದಲ ನಟಿ. ಇಷ್ಟಾಗಿಯೂ, ರಶ್ಮಿಕಾ ನಟಿಯಾಗಿ ಅತೀ ಕಡಿಮೆ ಅವದಿಯಲ್ಲಿ ದೊಡ್ಡ ಸಕ್ಸಸ್‌ ಕಂಡಿದ್ದು, ಬಾಲಿವುಡ್‌ ಮಟ್ಟಕ್ಕೆ ಹಾರಿದ್ದು ಎಲ್ಲವೂ ಅವರ ಟ್ಯಾಲೆಂಟ್‌ ಜತೆಗೆ ಅವರ ತಾಯಿಯ ಬೆಂಬಲವೂ ಕಾರಣ ಎನ್ನುತ್ತಿವೆ ಮೂಲಗಳು.

Related Posts

error: Content is protected !!