ಜನವರಿ 8 ರಂದು ಕೆಜಿಎಫ್-2 ಟೀಸರ್‌ ರಿಲೀಸ್‌ ಯಶ್‌ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ಗಿಫ್ಟ್‌

ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಿಸಿದ ಟೀಸರ್‌ ಸುದ್ದಿ

“ಕೆಜಿಎಫ್”‌ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿದ ಚಿತ್ರ. ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಚಿತ್ರ ಅಂದರೆ ತಪ್ಪಿಲ್ಲ. “ಕೆಜಿಎಫ್‌-೨” ಚಿತ್ರ ಕೂಡ ತುಂಬಾ ನಿರೀಕ್ಷೆ ಹುಟ್ಟಿಸಿದೆ. ಇದುವರೆಗೆ ಬರೀ ಫಸ್ಟ್‌ ಲುಕ್‌ ನೋಡಿದ್ದ ಫ್ಯಾನ್ಸ್‌ಗೆ ಈಗ ಹೊಂಬಾಳೆ ಫಿಲ್ಮ್ಸ್‌ ಹೊಸ ಸುದ್ದಿ ಹೊರಹಾಕಿದೆ. ಹೌದು, ಜನವರಿ 8ರಂದು “ಕೆಜಿಎಫ್-‌2” ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಜನವರಿ 8ರಂದು 10.08ಕ್ಕೆ ಟೀಸರ್‌ ಬಿಡುಗಡೆಯಾಗಲಿದೆ. ಅಂದು ಹೊಂಬಾಳೆ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಈ ಟೀಸರ್‌ ಹೊರಬರುತ್ತಿದೆ.

ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಚಿತ್ರವನ್ನು ವಿಜಯ್‌ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಯಶ್‌ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಇದ್ದಾರೆ. ಈ ಬಾರಿ ಬಾಲಿವುಡ್‌ ನಟ ಸಂಜಯ್‌ ದತ್‌ ಪ್ರಮುಖ ಆಕರ್ಷಣೆ. ಅಷ್ಟೇ ಅಲ್ಲ, ರವೀನಾ ಟಂಡನ್‌ ಕೂಡ ಇದ್ದಾರೆ. ಪ್ರಕಾಶ್‌ರಾಜ್‌ ಸೇರಿದಂತೆ ಹಲವರು ಇಲ್ಲಿ ನಟಿಸಿದ್ದಾರೆ.  ಚಿತ್ರಕ್ಕೆ ಭುವನ್ ಗೌಡ ಕ್ಯಾಮೆರಾ ಹಿಡಿದರೆ, ರವಿಬಸ್ರೂರು ಸಂಗೀತ ನೀಡಿದ್ದಾರೆ.

ಅಂದಹಾಗೆ, ಯಶ್‌ ಅವರು ತಮ್ಮ ಫೇಸ್‌ಬುಕ್‌ ಖಾತೆ, ಟ್ವಿಟ್ಟರ್‌ನಲ್ಲೂ ಜನವರಿ ೮ರಂದು ಟೀಸರ್‌ ಬಿಡುಗಡೆಯಾಗುವ ವಿಷಯ‌ ಹಂಚಿಕೊಂಡಿದ್ದಾರೆ. ಅದೇನೆ ಇರಲಿ, ತುಂಬಾ ದಿನಗಳಿಂದ ಫ್ಯಾನ್ಸ್‌ ಕಾತುರದಿಂದಲೇ ಕಾಯುತ್ತಿದ್ದ ಟೀಸರ್‌ ಅಂತೂ ಬಿಡುಗಡೆಯಾಗುವ ಸೂಚನೆ ನೀಡಿದ್ದು, ದಿನವನ್ನೂ ನಿಗದಿಪಡಿಸಿದೆ. ಇನ್ನೇನಿದ್ದರೂ, ಜನವರಿ ೮ರ ತನಕ ಫ್ಯಾನ್ಸ್‌ ಕೆಜಿಎಫ್-‌೨ ಚಿತ್ರದ ಜಪ ಮಾಡುವುದು ಖಚಿತ.

Related Posts

error: Content is protected !!