– ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ನಿರ್ದೇಶಕರ ಸಂಘ
– ಕಚೇರಿ ಬಾಡಿಗೆ ಕಟ್ಟದೆ ಕಳೆಯಿತು ಒಂದು ವರ್ಷ
– ಪೊಲೀಸ್ ಮೆಟ್ಟಿಲೇರಿದ ಕಟ್ಟಡ ಮಾಲೀಕ
– ಅಂತಿಮವಾಗಿ ಹೊರ ಬಿದ್ದವು ಕಚೇರಿ ಪೀಠೋಪಕರಣ
(ಇದು ಸಿನಿಲಹರಿ ಬ್ರೇಕಿಂಗ್)
ಕನ್ನಡದ ಹೆಸರಾಂತ ನಿರ್ದೇಶಕ ಪುಟ್ಟಣ ಕಣಗಾಲ್ ಹುಟ್ಟು ಹಾಕಿದ ‘ ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘ’ದ ಘನತೆ, ಗೌರವ ಇಂದು ಬೀದಿಗೆ ಬಿದ್ದಿದೆ. 2018 ರಲ್ಲಷ್ಟೇ ವಿಜಯನಗರದಿಂದ ನಾಗರಭಾವಿಗೆ ಸ್ಥಳಾಂತರ ಗೊಂಡ ಸಂಘದ ಕಚೇರಿ ಕಟ್ಟಡದ ಬಾಡಿಗೆ ಕಟ್ಟದ ಪರಿಣಾಮ, ಕಟ್ಟಡದ ಮಾಲೀಕ ಸಂಘದ ವಿರುದ್ಧ ಪೊಲೀಸ್ ಠಾಣೆಯ ಮೇಟ್ಟೆಲೇರಿದ್ದಾನಂತೆ. ಹಾಗೆಯೇ ಎರಡು ದಿನಗಳ ಹಿಂದಷ್ಟೇ ಕಚೇರಿಯಲ್ಲಿನ ಪೀಠೋಪಕರಣ ಹೊರ ಹಾಕಿ, ಸಂಘದ ಪದಾಧಿ ಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನ ಲಾಗಿದೆಯಂತೆ.
ಸಂಘದ ಹಲವು ಪದಾಧಿಕಾರಿಗಳಲ್ಲಿ ಇದು ತೀವ್ರ ಬೇಸರ ಹುಟ್ಟಿಸಿದೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವು ಇದುವರೆಗೂ ಕಾಪಾಡಿಕೊಂಡು ಬಂದಿದ್ದ ಘನತೆ, ಗೌರವ ವಿನಾಕಾರಣ ಬೀದಿಗೆ ಬಂದಿರುವುದು ತೀವ್ರ ನೋವುಂಟು ಮಾಡಿದೆ ಅಂತ ಸಂಘದ ಕೆಲವರು ಬೇಸರ ವ್ಯಕ್ತಪಡಿ ಸಿದ್ದಾರಂತೆ. ಸದ್ಯಕ್ಕೀಗ ಎಲ್ಲವೂ ತೆರೆಮರೆಯಲ್ಲೆ ನಡೆದಿದೆ. ಕೊರೋನಾ ಕಾರಣ ಸಂಘವು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದೇ ಇಷ್ಟಕ್ಕೆಲ್ಲ ಕಾರಣ ಅಂತಲೂ ಸಂಘದ ಕೆಲವು ಮೂಲಗಳು ತಿಳಿಸಿವೆ.
ಆದರೆ ಕೊರೋನಾ ಅಂತ ಲಾಕ್ ಡೌನ್ ಶುರುವಾಗಿದ್ದು ಮಾರ್ಚ್ ತಿಂಗಳಿನಿಂದ. ಚಿತ್ರೋದ್ಯಮ ಕೂಡ ಬಂದ್ ಆಗಿರುವುದು ಕೂಡ ಅಲ್ಲಿಂದಲೇ . ಆದರೆ ಸಂಘದ ಕಚೇರಿ ಬಾಡಿಗೆ, ವಾಟರ್ ಬಿಲ್, ಕರೆಂಟ್ ಬಿಲ್ ಬ್ಯಾಲೆನ್ಸ್ ಇರುವುದು ಕಳೆದ ಡಿಸೆಂಬರ್ ತಿಂಗಳಿನಿಂದಲೇ ಅಂತೆ. ಹಾಗಾದ್ರೆ ಆಗ ಕೊರೋನಾ ಇತ್ತಾ ಎನ್ನುವ ಪ್ರಶ್ನೆಯಿಂದಲೇ ಕಟ್ಟಡದ ಮಾಲೀಕ , ಸಂಘದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರಂತೆ ಎನ್ನುತ್ತಿವೆ ಮೂಲಗಳು.ಸಂಘದ ಹಾಲಿ ಅಧ್ಯಕ್ಷರ ವಿರುದ್ಧವೇ ಕಟ್ಟಡದ ಮಾಲೀಕ ದೂರು ಸಲ್ಲಿಸಿರುವ ಸಂಗತಿ ಕೂಡ ರಿವೀಲ್ ಆಗಿದೆ.
2018ರಲ್ಲಿ ಮಹತ್ತರ ಉದ್ದೇಶಗಳನ್ನು ಹೊತ್ತು ಕೊಂಡು ವಿಶಾಲವಾದ ಬಾಡಿಗೆ ಕಟ್ಟಡಕ್ಕೆ ನಿರ್ದೇಶಕರ ಸಂಘ ಸ್ಥಳಾಂತರಗೊಂಡಿತ್ತು. ಅವತ್ತು ನಟ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಬಂದು, ಸಂಘದ ಕಚೇರಿ ಉದ್ಧಾಟಿಸಿದ್ದರು. ಆದಾದ ನಂತರ ನಿರ್ದೇಶಕರ ಸಂಘಕ್ಕೆ ಪದಾಧಿಕಾರಗಳ ಆಯ್ಕೆ ನಡೆಯಿತು. ನಿರ್ದೇಶಕರ ಸಂಘಕ್ಕೆ ನಿರ್ಮಾಪಕ ಕಮ್ ನಿರ್ದೇಶಕ ಟೇಶಿ ವೆಂಕಟೇಶ್ ಅಧ್ಯಕ್ಷರಾದರು. ಅವರು ಇನ್ನೇನು ಸಂಘವನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗೋಣ ಎನ್ನುವ ಹೊತ್ತಿಗೆ ಕೊರೋನಾ ಶುರುವಾಯ್ತು. ಹಂತ ಹಂತವಾಗಿ ಮೇಲೆಳುತ್ತಿದ್ದ ನಿರ್ದೇಶಕರ ಸಂಘ ನೆಲ ಹಿಡಿಯಿತು.
ಮುಂದೆ ಕೊರೋನಾ, ನಿರ್ದೇಶಕರು ಸೇರಿ ಚಿತ್ರೋದ್ಯಮವನ್ನು ತೀವ್ರವಾಗಿ ಭಾದಿಸಿತು. ಕೆಲಸ ಇಲ್ಲದೆ ಮನೆ ಹಿಡಿದ ನಿರ್ದೇಶಕರ ಸಂಘದ ಪಧಾಧಿಕಾರಿಗಳ ನೆರವಿಗೆ ಸಂಘ ಬಂತು. ಹಾಗೆ ಮಾಡಿದ್ದೇ ಸಂಘ ಆರ್ಥಿಕ ಮುಗ್ಗಟ್ಟು ಅನುಭವಿಸಲು ಕಾರಣವಂತಂತೆ.ಆದರೆ ಕಟ್ಟಡದ ಮಾಲೀಕ ಕೇಳಬೇಕಲ್ಲ? ಬಾಡಿಗೆ ನೀಡಿಲ್ಲ ಅಂತ ಆತ ದೂರು ನೀಡಿದ್ದಾನೆ. ಪೀಠೋಪಕರಣ ಹೊರ ಹಾಕಿದ್ದಾನೆ. ಇದರಿಂದ ಸಂಘದ ಗೌರವ ಬೀದಿಗೆ ಬಿದ್ದಿದೆ ಎನ್ನುವುದು ಹೆಸರು ಹೇಳಲಿಚ್ಚಿಸದ ನಿರ್ದೇಶಕರೊಬ್ಬರ ಅಳಲು.
ಕನ್ನಡ ಚಿತ್ರರಂಗಕ್ಕೆ ದೊಡ್ಡ ಇತಿಹಾಸ ಇದೆ.ಹಾಗೆಯೇ ಅಲ್ಲಿರುವ ವಿವಿಧ ವಿಭಾಗಗಳ ಸಂಘಟನೆಗಳಿಗೂ ಅಷ್ಟೇ ಇತಿಹಾಸ, ಗೌರವ ಇದೆ. ಕರ್ನಾಟಕ ನಿರ್ಮಾಪಕರ ಸಂಘವು ತನ್ನ ಸ್ವಂತ ಕಟ್ಟಡದ ನಿರ್ಮಾಣಕ್ಕೆ ಇತ್ತೀಚೆಗಷ್ಟೇ ಶಂಕುಸ್ಥಾಪನೆ ನೆರವೇರಿಸಿದ್ದು ನಿಮಗೂ ಗೊತ್ತು. ಕಲಾವಿದರ ಸಂಘವು ಚಾಮರಾಜಪೇಟೆಯಲ್ಲಿ ಬೃಹತ್ ಭವನ ನಿರ್ಮಾಣ ಮಾಡಿದ್ದೂ ಕೂಡ ತಿಳಿದಿದ್ದೆ. ಇದೆಲ್ಲ ಸಿನಿಮಾಮಂದಿಯ ಸಾಹಸ. ಹಾಗೆಯೇ ನಿರ್ದೇಶ ಕರ ಸಂಘವು ತನ್ನ ಸ್ವಂತ ಕಟ್ಟಡ ಹೊಂದಬೇಕು ಅಂತ ಕನ್ನಡ ಚಿತ್ರ ರಂಗ ಬಯಸುವಾಗ , ಬಾಡಿಗೆ ವಿಚಾರದಲ್ಲಿ ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘದ ಗೌರವ ಬೀದಿ ಪಾಲಾಗಿರುವುದು ನಿಜಕ್ಕೂ ಅವಮಾನವೇ ಎನ್ನುವ ಮಾತು ಸಿನಿಮಾ ಮಂದಿಯಿಂದ ಹೊರ ಬಿದ್ದಿದೆ.
ಆದಷ್ಟುಬೇಗ ನಿರ್ದೇಶಕರ ಸಂಘವು ಈ ಮುಗ್ಗಟ್ಟಿನಿಂದ ಹೊರ ಬಂದು, ತನ್ನದೇ ಒಂದುಕಟ್ಟಡ ಹೊಂದಲಿ ಎನ್ನುವುದು ಸಿನಿಲಹರಿ ಹಾರೈಕೆ.ಅದೇ ಕಾಳಜಿಯಿಂದ ಈ ಬರಹ ಮಾತ್ರ