ಮಾರ್ಚ್‌ನಲ್ಲಿ ಸಲಗ ಅಬ್ಬರ, ಸಾಧ್ಯತೆಯ ಸುಳಿವು ಕೊಟ್ಟ ಶ್ರೀಕಾಂತ್


ದುನಿಯಾ ವಿಜಯ್‌ ನಿರ್ದೇಶನದ ಜತೆಗೆ ನಾಯಕರಾಗಿ ಅಭಿನಯಿಸಿರುವ ʼಸಲಗʼ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದೆ. ಕನ್ನಡದ ಸಿನಿಪ್ರೇಕ್ಷಕರ ಪಾಲಿಗೆ ಇದೊಂದು ಬಹುನಿರೀಕ್ಷಿತ ಚಿತ್ರ. ದೊಡ್ಡ ತಾರಾಗಣದ ಜತೆಗೆ ಬಿಗ್‌ ಬಜೆಟ್‌ ಸಿನಿಮಾ. ಹಾಗೆಯೇ ನಟ ದುನಿಯಾ ವಿಜಯ್‌ ನಿರ್ದೇಶನದ ಮೊದಲ ಸಿನಿಮಾ. ಜತೆಗೆ ಒಂದಲ್ಲ ಒಂದು ಕಾರಣಕ್ಕೆ ದಿನ ನಿತ್ಯವೂ ಸುದ್ದಿ ಮಾಡುತ್ತಾ ಬರುತ್ತಿದೆ.

 

ದುನಿಯಾ ವಿಜಯ್‌ ಅಭಿಮಾನಿಗಳಂತೂ ತುದಿಗಾಲಲ್ಲೆ ನಿಂತಿದ್ದಾರೆ. ಅದೆಲ್ಲ ಕಾರಣಕ್ಕೆ ಈ ಸಿನಿಮಾ ಕನ್ನಡದ ಸಿನಿಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ರಿಲೀಸ್‌ ದಿನವನ್ನೆ ಎದುರು ನೋಡುವಂತೆ ಮಾಡಿದೆ.

Mಸದ್ಯಕ್ಕೆ ಈ ಚಿತ್ರದ ರಿಲೀಸ್‌ ದಿನಾಂಕ ಫಿಕ್ಸ್‌ ಅಗಿಲ್ಲ. ಚಿತ್ರ ತಂಡದ ಮೂಲಗಳ ಪ್ರಕಾರ ಫೆಬ್ರವರಿ ಕೊನೆಯಲ್ಲಿ ಈ ಚಿತ್ರ ತೆರೆಗೆ ಬರಲಿದೆ ಎನ್ನುವ ಮಾತುಗಳು ಇವೆ. ಆದರೆ ನಿರ್ಮಾಪಕ ಶ್ರೀಕಾಂತ್‌ ಪ್ರಕಾರ ಸಲಗ ತೆರೆಗೆ ಬರುವುದಕ್ಕೆ ಇನ್ನಷ್ಟು ದಿನ ಕಾಯಲೇ ಬೇಕಿದೆ. ” ಸದ್ಯಕ್ಕೆ ನಾವಿನ್ನು ರಿಲೀಸ್‌ ಬಗ್ಗೆ ಡಿಸೈಡ್‌ ಮಾಡಿಲ್ಲ. ಈಗ ಟೈಮ್‌ ಬೇರೆ ಸರಿಯಿಲ್ಲ. ಚಿತ್ರ ಮಂದಿರಗಳು ಒಪನ್‌ ಆಗಿವೆ, ಹೊಸಬರ ಸಿನಿಮಾ ರಿಲೀಸ್‌ ಅಗುತ್ತಿವೆ ಎನ್ನುವುದು ನಿಜವಾದರೂ, ರಾಜ್ಯದ ಎಷ್ಟೋ ಕಡೆಗಳಲ್ಲಿ ಈಗಲೂ ಚಿತ್ರ ಮಂದಿರಗಳು ಬಾಗಿಲು ತೆಗೆದಿಲ್ಲ. ಇನ್ನೊಂದು ಬಗೆಯಲ್ಲಿ ಚಿತ್ರ ಮಂದಿರಗಳ ವಾಸ್ತವ ಪರಿಸ್ಥಿತಿ ಹೀಗಿದೆ. ಹಾಗಾಗಿ ಯಾವಾಗ ಬಂದರೆ ಸೂಕ್ತ ಎನ್ನುವುದು ನಮಗೂ ಗೊಂದಲವಿದೆʼ ಎನ್ನುತ್ತಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್.‌

ಸಲಗ ಮಾತ್ರವಲ್ಲ ಸದ್ಯ ರಿಲೀಸ್ ಗೆ ರೆಡಿಯಿರುವ ಸ್ಟಾರ್ ಸಿನಿಮಾಗಳ ಪರಿಸ್ಥಿತ ಇದಕ್ಕಿಂತ ಭಿನ್ನವಾಗಿಲ್ಲ. ಎಲ್ಲರೂ ವಾತಾವರಣ ಪೂರ್ಣ ಪ್ರಮಾಣದಲ್ಲಿ ತಿಳಿಯಾಗುವುದನ್ನೇ ಕಾಯುತ್ತಿದ್ದಾರೆ. ಕೊರೋನಾ ಆತಂಕ ದೂರವಾಗಬೇಕು, ಆ ಮೂಲಕ ರಾಜ್ಯದ ಉದ್ದಗಲಕ್ಕೂ ಚಿತ್ರಮಂದಿರಗಳು ಒಪನ್‌ ಅಗಬೇಕು, ಆಗಲೇ ಚಿತ್ರ ರಿಲೀಸ್‌ ಆದರೆ ಸೂಕ್ತ ಅಂತ ಎಲ್ಲರೂ ಕಾಯುತ್ತಿದ್ದಾರೆ. ಸಲಗ ಕೂಡ ಅದೇ ಹಾದಿಯಲ್ಲಿದೆ.

Related Posts

error: Content is protected !!