ಬ್ಯಾಕ್ ಗ್ರೌಂಡ್ ಡಾನ್ಸರ್ ಈಗ ಹೀರೋ, ಕುದುರೆ ಮೇಲೆ ಬರುತ್ತಿದ್ದಾನೆ ಮೈಸೂರು ಹುಡುಗ

ಚರಿತ್‌ ಎನ್ನುವ ತನ್ನದೇ ಹೆಸರಿನ ಚಿತ್ರಕ್ಕೆ ಆತನೇ ನಾಯಕ

 

ಈತ ಮೈಸೂರು ಹುಡುಗ. ಹೆಸರು ಚರಿತ್. ಬೆಳ್ಳಿತೆರೆಗೆ ಈಗ ಹೀರೋ ಆಗಿ ಎಂಟ್ರಿ ಆಗುತ್ತಿದ್ದಾರೆ. ಅತ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಚೊಚ್ಚಲ ಚಿತ್ರದ ಫಸ್ಟ್‌ ಲುಕ್‌ ನಾಳೆ ರಿವೀಲ್‌ ಆಗುತ್ತಿದೆ. ಮೈಸೂರು ಹುಡುಗ ಅಲ್ಬಾ, ಆ ಪ್ರೀತಿಯ ಕಾರಣಕ್ಕೆ ಮಜಾ ಟಾಕೀಸ್ ಖ್ಯಾತಿಯ ಟಾಕಿಂಗ್‌ ಸ್ಟಾರ್‌ ಸೃಜನ್‌ ಲೋಕೇಶ್‌, ಚರಿತ್‌ ಅಭಿನಯದ ಚೊಚ್ಚಲ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಲಾಂಚ್‌ ಮಾಡುವ ಮೂಲಕ ಆತನನ್ನು ಸಿನಿಮಾ ಜಗತ್ತಿಗೆ ಹೀರೋ ಆಗಿ ಪರಿಚಯಿಸುತ್ತಿದ್ದಾರೆ. ಆ ಮೂಲಕ ಕನ್ನಡದ ಅನೇಕ ಸ್ಟಾರ್‌ ಗಳ ಹಾಗೆ ಅರಮನೆ ನಗರಿಯ ಮತ್ತೊಬ್ಬ ಚೆಲುವ ಹೀರೋ ಆಗಿ ಸ್ಯಾಂಡಲ್‌ವುಡ್‌ ಗೆ ಎಂಟ್ರಿಯಾಗುತ್ತಿರುವುದು ವಿಶೇಷ.

ಏಳು ವರ್ಷದ ಅನುಭವಿ ಈ ಚರಿತ್

ಚರಿತ್‌ ಮೈಸೂರು ಹುಡುಗ ಅಂದ್ಮೇಲೆ ಹೆಚ್ಚೇನು ಹೇಳಬೇಕಿಲ್ಲ. ಯಾಕಂದ್ರೆ ಮೈಸೂರಿಗೂ ಕನ್ನಡ ಚಿತ್ರರಂಗಕ್ಕೂ ಅವಿನಾಭಾವ ನಂಟು. ಲೋಕೇಶ್‌, ಅಶ್ವತ್ಥ್‌, ಅಂಬರೀಶ್‌, ವಿಷ್ಣುವರ್ಧನ್‌ ಸೇರಿದಂತೆ ಕನ್ನಡ ಚಿತ್ರ ರಂಗ ಪ್ರಜ್ಬಲಿಸುವಂತೆ ಮಾಡಿದ ಘಟಾನುಘಟಿ ಕಲಾವಿದರೆಲ್ಲ ಮೈಸೂರಿನವರೆ. ಅಷ್ಟೇ ಯಾಕೆ, ಈಗಲೂ ಸ್ಯಾಂಡಲವುಡ್‌ ನಲ್ಲಿ ಸ್ಟಾರ್‌ ಆಗಿ ಮಿಂಚುತ್ತಿರುವವರಲ್ಲಿ ಮೈಸೂರಿನವರದ್ದೇ ಸಿಂಹಪಾಲು. ಅಲ್ಲಿನ ಮಣ್ಣಿವ ಗುಣ ಅದು. ಅದೇ ನಂಟಿನ ಪ್ರಭಾವದೊಂದಿಗೆ ಹೀರೋ ಆಗಲೇಬೇಕೆಂದು ಸಿನಿಮಾ ಜಗತ್ತಿಗೆ ಬಂದಿರುವ ಯುವ ಪ್ರತಿಭೆ ಚರಿತ್‌ ಗೆ ಯಾವುದೇ ಹಿನ್ನೆಲೆ ಇಲ್ಲ. ಅವರದೊಂದು ಕೃಷಿ ಕುಟುಂಬ. ಅಪ್ಪ-ಅಮ್ಮ ಕೃಷಿಕರು. ಒಂದಷ್ಟು ಜಮೀನಿದೆ. ಅದೇ ಅವರ ಜೀವನೋಪಾಯದ ಮೂಲ. ಅದರೂ ಹೀರೋ ಅಗುವ ಕನಸು ಹೊತ್ತು ಬೆಂಗಳೂರಿಗೆ ಬಂದ ಈ ಸಿಕ್ಸ್‌ ಪ್ಯಾಕ್‌ ಹುಡುಗನಿಗೆ ಏಳು ವರ್ಷದ ಸಿನಿ ದುನಿಯಾದ ಜತೆಗಿನ ನಂಟಿದೆ. ಹಾಗೆಯೇ ಹೀರೋ ಆಗಲೇಬೇಕೆಂದು ಅಷ್ಟು ವರ್ಷಗಳಲ್ಲಿಒಂದಷ್ಟು ನಟನೆಗೆ ಪೂರಕವಾದ ತರಬೇತಿ ಪಡೆದಿದ್ದಾನೆನ್ನುವುದು ಪ್ಲಾಸ್‌ ಪಾಯಿಂಟ್.

ಹೀರೋ ಆಗುತ್ತಿರುವುದು ಸುಮ್ನೆ ಅಲ್ಲ..

ಅದೇ ಅನುಭವದ ಮೂಲಕ ಚಿಕ್ಕಂದಿನ ತಮ್ಮ ಕನಸು ನನಸಾಗಿಸಿಕೊಳ್ಳುತ್ತಿರುವ ಚರಿತ್‌, ಮೂಲಕ ” ಸಿನಿಲಹರಿ” ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳಿಗೆ ತಮ್ಮನ್ನು ತಾವು ಪರಿಚಯಿಸಿಕೊಳ್ಳುವುದು ಹೀಗೆ; ʼ ನಂದು ಮೈಸೂರು. ರೈತ ಕುಟುಂಬದಿಂದ ಬಂದವನು. ಅಪ್ಪ -ಅಮ್ಮ ಇಬ್ಬರು ಕೃಷಿಕರು. ಆದರೂ ನಂಗೆ ಬಾಲ್ಯದಿಂದಲೂ ಹೀರೋ ಆಗ್ಬೇಕೆನ್ನುವ ಹುಚ್ಚು. ಅದ್ಯಾಕೆ ಬಂತೋ ಗೊತ್ತಿಲ್ಲ. ಬಹುಶ:, ಮೈಸೂರಿನ ಮಣ್ಣಿನ ಗುಣವೂ ಇರಬಹುದು. ಅದೇ ಕಾರಣಕ್ಕೆ ಓದು ಒಂದು ಹಂತಕ್ಕೆ ಮುಗಿದ ನಂತರ ಹೀರೋ ಆಗುವ ಕನಸು ಹೊತ್ತು ಬೆಂಗಳೂರಿಗೆ ಬಂದೆ. ಆದರೆ ಹೀರೋ ಆಗ್ಬೇಕು ಅನ್ನೋದು ಕನಸು ಕಂಡಷ್ಟು ಸುಲಭ ಅಲ್ಲ ಅನ್ನೋದು ಇಲ್ಲಿಗೆ ಬಂದ್ಮೇಲೆ ಗೊತ್ತಾಯಿತು. ಅದಕ್ಕೂ ಒಂದಷ್ಟು ಸಿದ್ಧತೆ ಬೇಕು, ಶ್ರದ್ಧೆ ಇರಬೇಕು ಅಂತ ಇಲ್ಲಿ ಪರಿಚಯವಾದವರು ಹೇಳಿದರು. ಅಲ್ಲಿಂದ ನನ್ನ ಕೆಲಸ ಶುರುವಾಯಿತು. ಇಲ್ಲಿಗೆ ಬಂದ ಆರಂಭದಲ್ಲೆ ಹೆಸರಾಂತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಟೆಂಟ್‌ ಶಾಲೆಯಲ್ಲಿ ಆಕ್ಟಿಂಗ್‌ ಟ್ರೈನಿಂಗ್‌ ಮುಗಿಸಿದೆ. ಮುಂದೇನು ಅಂತ ಯೋಚಿಸುತ್ತಿದ್ದಾಗ ಒಂದಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚಿದೆ. ಅದರ ಜತೆಗೆ ನಂಗೆ ಡಾನ್ಸ್‌ ಗೊತ್ತಿದ್ರಿಂದ ೧೫ ಕ್ಕೂ ಹೆಚ್ಚು ಚಿತ್ರಗಳಲ್ಲಿ ಬ್ಯಾಕ್‌ ಗ್ರೌಂಡ್‌ ಡಾನ್ಸರ್‌ ಆಗಿ ಕೆಲಸ ಮಾಡಿದೆ. ಅಲ್ಲಿ ಸಂಪಾದಿಸಿಕೊಂಡ ಹಣದಲ್ಲಿ ಜಿಮ್ ಗೆ ಹೋಗಿ ವರ್ಕೌಟ್‌ ಮಾಡಿದೆ. ಇಷ್ಟಾಗಿಯೂ ನಂಗೆ ನಿತ್ಯ ಕಾಡುತ್ತಿದ್ದದ್ದು ಒಂದೇ ಹೀರೋ ಆಗಬೇಕೆನ್ನುವ ಕನಸು. ಹೇಗಾದ್ರೂ ಮಾಡಿ, ಅದನ್ನು ನನಸಾಗಿಸಿಕೊಳ್ಳಬೇಕೆನ್ನುವ ನನ್ನ ಹಣಾಹಣಿ ಪ್ರಯತ್ನದಲ್ಲಿ ಫೈನಲಿ ಈಗ ಶುರುವಾಗುತ್ತಿರುವುದು ಚರಿತ್‌ ಎನ್ನುವ ಹೊಸ ಸಾಹಸ !

ಚರಿತ್’ ಗೆ ಗೆಳೆಯರು ಕೊಟ್ಟರು ಸಾಥ್

ಇದು ಚರಿತ್‌ ಮಾತು. ಸಿನಿಮಾ ಎಂಬುದು ಮಾಯೆ. ಅದು ಬೆನ್ನು ಬಿದ್ದರೆ ಅದನ್ನು ಟಚ್‌ ಮಾಡುವ ತನಕ ನೆಮ್ಮದಿಯಿಂದ ಇರುವುದಕ್ಕೆ ಬಿಡುವುದಿಲ್ಲ. ಚರಿತ್‌ ಕೂಡ ಹಾಗೆಯೇ ಅದರ ಬೆನ್ನು ಬಿದ್ದವರು. ಫೈನಲಿ ಈಗ ಹೀರೋ ಆಗುತ್ತಿದ್ದಾರೆ. ಗೆಳೆಯರ ಜತೆ ಸೇರಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಕೃಷ್ಣ ಎನ್ನುವವರು ಇದರ ನಿರ್ದೇಶಕರು. ಈ ಹಿಂದೆ ಇವರು ʼಅಥರ್ವʼ ಹೆಸರಿನ ಚಿತ್ರಕ್ಕೆ ಅಯಕ್ಷನ್‌ ಕಟ್‌ ಹೇಳಿದ್ದರು. ಹಾಗೆಯೇ ಮೂಲಕ ಕೃಷಿಕರಾದ ಭರತ್‌ ಎನ್ನುವವರು ಚಿತ್ರದ ನಿರ್ಮಾಪಕರು. ಅವರಿಗೆ ಒಂದಷ್ಟು ಗೆಳೆಯರು ಕೂಡ ಸಾಥ್‌ ನೀಡಿದ್ದಾರಂತೆ. ಇನ್ನು ತನ್ವಿಕ್‌ ಎನ್ನುವವರು ಚಿತ್ರದ ಛಾಯಾಗ್ರಾಹಕ.

ಮೂರು ವರ್ಷಗಳ ಭರ್ಜರಿ ಟ್ರೈನಿಂಗ್

ಇದು ೨೦೧೫ರಲ್ಲೇ ಶುರುವಾದ ಪ್ರಾಜೆಕ್ಟ್.‌ ತಡವಾಗಿ ಶುರುವಾಗುತ್ತಿದೆ. ಅದಕ್ಕೆ ಕಾರಣ ಸಿನಿಮಾದ ಸಿದ್ಧತೆ. ʼ ಬೆಸಿಕಲಿ ಇದು ಹಾರ್ಸ್‌ ರೈಡಿಂಗ್‌ ಜತೆಗೆ ಸ್ಫೋರ್ಟ್‌ ಬೆಸ್‌ ಸಿನಿಮಾ. ಅದಕ್ಕೆ ಸಾಕಷ್ಟು ಸಿದ್ದತೆ ಬೇಕಿತ್ತು. ಮೊದಲು ಹಾರ್ಸ್‌ ರೈಡಿಂಗ್.‌ ಒಂದೂವರೆ ವರ್ಷ ಅದನ್ನು ಕಲಿತುಕೊಂಡೆ. ಆಮೇಲೆ ಡಾನ್ಸ್‌ ಟ್ರೈನಿಂಗ್‌ ಮಾಡಿದೆ. ಆಮೇಲೆ ಮತ್ತೆ ಬಾಡಿ ಬಿಲ್ಡಿಂಗ್‌ ಮಾಡ್ಬೇಕು ಅಂದ್ರು, ಅದನ್ನು ಕಲಿತುಕೊಳ್ಳುವುದಕ್ಕೆ ಒಂದಷ್ಟು ಸಮಯ ಬೇಕಾಯಿತು. ಫೈನಲಿ ಎಲ್ಲಾ ಮುಗಿಸಿಕೊಂಡು ಈಗ ಸಿನಿಮಾ ಶುರು ಮಾಡುತ್ತಿದ್ದೇವೆʼ ಎನ್ನುತ್ತಾ ಒಂದೆಡೆ ಹೀರೋ ಆಗುತ್ತಿರುವ ಬಗೆಗಿನ ಖುಷಿ, ಮತ್ತೊಂದೆಡೆ ಅದಕ್ಕಾಗಿ ಪಟ್ಟ ಪರಿಶ್ರಮ ನೆನಪಿಸಿಕೊಂಡು ನಗು ಹಾಗೂ ಆತಂಕ ಹೊರ ಹಾಕಿದರು ಚರಿತ್.‌ ಸದ್ಯಕ್ಕೆ ಸಿನಿಮಾಕ್ಕೆ ಹೀರೋ ಮಾತ್ರ ಫಿಕ್ಸ್‌ ಅಗಿದ್ದಾರೆ. ಹೀರೋ ಯಿನ್‌ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಬಾಕಿಯಿದೆಂತೆ. ನಾಳೆ ಚಿತ್ರದ ಅಧಿಕೃತ ಪೋಸ್ಟರ್‌ ಲಾಂಚ್‌ ಆಗುವ ಮೂಲಕ ಶೂಟಿಂಗ್‌ ಸೇರಿದಂತೆ ಉಳಿದ ಕೆಲಸಗಳಿಗೆ ಪ್ಲಾನ್‌ ರೆಡಿಯಾಗಲಿದೆಂತೆ. ಆದಷ್ಟು ಬೇಗ ಸಿನಿಮಾ ಶುರುವಾಗಲಿ, ಚರಿತ್‌ ಸಕ್ಸಸ್‌ ನಟ ಆಗಲಿ ಎನ್ನುವುದು ‘ಸಿನಿಲಹರಿ ‘ಹಾರೈಕೆ.

Related Posts

error: Content is protected !!