ಮದಗಜ ಘರ್ಜನೆಗೆ ಭರಪೂರ ಮೆಚ್ಚುಗೆ – ಒಂದೇ ದಿನದಲ್ಲಿ 30 ಲಕ್ಷ ಜನರ ವೀಕ್ಷಣೆ

 

ಇದು ದಾಖಲೆಗಳ ದರ್ಬಾರ್‌

– ಈಗ ಎಲ್ಲೆಡೆ ಶ್ರೀಮುರಳಿ ಅಭಿನಯದ “ಮದಗಜ” ಚಿತ್ರದ್ದೇ ಸುದ್ದಿ. ಅದಕ್ಕೆ ಕಾರಣ, ಅವರ ಹುಟ್ಟು ಹಬ್ಬಕ್ಕೆ ಬಿಡುಗಡೆಯಾದ ಸಖತ್ ಟೀಸರ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದೆ. ಇನ್ನು, ಕೇವಲ 24 ಗಂಟೆಯಲ್ಲಿ 30 ಲಕ್ಷ (ಮೂರು ಮಿಲಿಯನ್) ಜನರಿಂದ ರಿಯಲ್‌ ಟೈಮ್‌ನಲ್ಲಿ ವೀಕ್ಷಣೆ ಪಡೆದು, ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಸೃಷ್ಟಿಸಿದೆ. ಸಹಜವಾಗಿಯೇ ಈ ಬೆಳವಣಿಗೆ ಚಿತ್ರತಂಡಕ್ಕೆ ಖುಷಿ ತಂದಿದೆ. ೨೪ ಗಂಟೆಯಲ್ಲೆ ವೇಗವಾಗಿ ಅತೀ ಹೆಚ್ಚು ವೀಕ್ಷಣೆ ಕಂಡಿರುವ ಕನ್ನಡದ ಮೊದಲ ಫಸ್ಟ್‌ ಲುಕ್‌ ಟೀಸರ್‌ ಎಂಬ ಹೆಗ್ಗಳಿಕೆಗೂ ಈ ಚಿತ್ರದ ಟೀಸರ್‌ ಪಾತ್ರವಾಗಿದೆ.

ನ್ನು, “ಉಗ್ರಂ” , “ಕೆಜಿಎಫ್‌” ಖ್ಯಾತಿಯ ಪ್ರಶಾಂತ್‌ ನೀಲ್‌ ಅವರು ಚಿತ್ರದ ಟೀಸರ್‌ ಬಿಡುಗಡೆ ಮಾಡಿ, ಶುಭಹಾರೈಸಿದ್ದರು. ಶ್ರೀಮುರಳಿ ಅಭಿನಯದ “ಮದಗಜ” ಚಿತ್ರಕ್ಕೆ ಮಹೇಶ್‌ ಕುಮಾರ್‌ ನಿರ್ದೇಶಕರು. ಉಮಾಪತಿ ನಿರ್ಮಾಣವಿದೆ. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ರವಿ ಬಸ್ರೂರು ಸಂಗೀತವಿದೆ.


ಶ್ರೀಮುರಳಿ ಅವರ ಹುಟ್ಟುಹಬ್ಬದ ದಿನ ಈ ಟೀಸರ್‌ ಬಿಡುಗಡೆಯಾದ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್‌ ಕೂಡ ಶ್ರೀಮುರಳಿ ಅವರಿಗೆ ಹೊಸ ಚಿತ್ರವನ್ನು ಅನೌನ್ಸ್‌ ಮಾಡಿದೆ. “ಬಘೀರ” ಸಿನಿಮಾ ಅನೌನ್ಸ್‌ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಕಾಣಿಕೆ ನೀಡಿದೆ. ಈ ಚಿತ್ರಕ್ಕೆ ಡಾ.ಸೂರಿ ನಿರ್ದೇಶಕರು. ವಿಜಯ್‌ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಬಜೆಟ್‌ನ ಸಿನಿಮಾ ಆಗಿದ್ದು, ಈಗಾಗಲೇ ಬಿಡುಗಡೆ ಮಾಡಿರುವ “ಬಘೀರ” ಪೋಸ್ಟರ್‌ ಕೂಡ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ಒಂದಷ್ಟ ಕುತೂಹಲವೂ ಇದೆ.

 

 

Related Posts

error: Content is protected !!