ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಶ್ರೀಮುರಳಿ ಚಿತ್ರ- ಡಿ.17ರ ರೋರಿಂಗ್‌ ಸ್ಟಾರ್‌ ಬರ್ತ್‌ಡೇಗೆ ಹೊಸ ಚಿತ್ರ ಘೋಷಣೆ

ಅದ್ಧೂರಿ ಬಜೆಟ್‌ ಚಿತ್ರಕ್ಕೆ ನಿರ್ದೇಶಕ ಯಾರೆಂಬುದು ಗೌಪ್ಯ

ಕನ್ನಡದಲ್ಲೀಗ ಹೊಸ ಸಿನಿಮಾ ಅನೌನ್ಸ್‌ಮೆಂಟ್‌ಗಳ ಸುರಿಮಳೆ. ಹೌದು, ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್‌ ತೆಲುಗು ಸ್ಟಾರ್‌ ನಟ ಪ್ರಭಾಸ್‌ ಅಭಿನಯದ “ಸಲಾರ್‌” ಸಿನಿಮಾ ನಿರ್ಮಿಸುವ ಕುರಿತು ಅನೌನ್ಸ್‌ ಮಾಡಿತ್ತು. ಆ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ನಿರ್ದೇಶಕ ಎಂಬುದನ್ನೂ ಹೇಳಿತ್ತು. ಅದರ ಬೆನ್ನೆಲ್ಲೇ ಹೊಂಬಾಳೆ ಫಿಲ್ಮ್ಸ್‌ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ಅನೌನ್ಸ್‌ ಮಾಡುವುದಾಗಿ ಹೇಳಿಕೊಂಡಿದೆ. ಹೌದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್‌, ಡಿಸೆಂಬರ್‌ ೧೭ರಂದು ೧೧.೫೯ಕ್ಕೆ ಹೊಸ ಸಿನಿಮಾ ಘೋಷಣೆ ಮಾಡುವುದಾಗಿ ಹೇಳಿಕೊಂಡಿದೆ. ಎಲ್ಲವೂ ಸರಿ, ಹೊಂಬಾಳೆ ಫಿಲ್ಮ್ಸ್‌ ಯಾಕೆ ಡಿಸೆಂಬರ್‌ ೧೭ರಂದು ಹೊಸ ಸಿನಿಮಾ ಅನೌನ್ಸ್‌ ಮಾಡಲಿದೆ, ಅದಕ್ಕೆ ಕಾರಣ ಏನು? ಈ ಪ್ರಶ್ನೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಹೊಂಬಾಳೆ ಫಿಲ್ಮ್ಸ್‌ ಮೂಲಕ ಇದುವರೆಗೆ ಆರು ಚಿತ್ರಗಳು ತಯಾರಾಗಿದ್ದು, ಇತ್ತೀಚೆಗೆ ಏಳನೇ ಸಿನಿಮಾ “ಸಲಾರ್‌” ಚಿತ್ರವನ್ನು ಘೋಷಣೆ ಮಾಡಿತ್ತು. ಈಗ ಎಂಟನೇ ಸಿನಿಮಾ ಘೋಷಣೆಗೆ ಡಿಸೆಂಬರ್‌ ೧೭ರಂದು ನಿಗದಿ ಮಾಡಲಾಗಿದೆ. ಎಲ್ಲವೂ ಸರಿ, ಈ ಸಿನಿಮಾಗೆ ನಾಯಕ ಯಾರು? ಯಾಕೆ ಡಿಸೆಂಬರ್‌ ೧೭ರಂದೇ ಹೊಸ ಚಿತ್ರ ಅನೌನ್ಸ್‌ ಮಾಡಲಿದ್ದಾರೆ? ಈ ಪ್ರಶ್ನೆಗೆ ಸರಿಯಾದ ಉತ್ತರವಿಲ್ಲ. ಕೆಲವು ಕಡೆ ಪುನೀತ್‌ ರಾಜಕುಮಾರ್‌ ಅವರ ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅವರ ಸಿನಿಮಾ ಘೋಷಣೆ ಮಾಡಿದರೂ ಅಚ್ಚರಿ ಇಲ್ಲ ಬಿಡಿ.


ಆದರೆ, ಡಿಸೆಂಬರ್‌ ೧೭ರಂದು ಬೆಳಗ್ಗೆ ೧೧.೫೯ಕ್ಕೆ ಹೊಂಬಾಳೆ ಫಿಲ್ಮ್ಸ್‌ ಅನೌನ್ಸ್‌ ಮಾಡಲಿರುವ ಹೊಸ ಸಿನಿಮಾಗೆ ಮೂಲಗಳ ಪ್ರಕಾರ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರು ಹೀರೋ ಎನ್ನಲಾಗುತ್ತಿದೆ. ಯಾಕೆಂದರೆ, ಡಿಸೆಂಬರ್‌ ೧೭ರಂದು ಶ್ರೀಮುರಳಿ ಅವರ ಹುಟ್ಟುಹಬ್ಬ. ಅಂದೇ ಹೊಂಬಾಳೆ ಫಿಲ್ಸ್ಮ್‌ ಶ್ರೀಮುರಳಿ ಅವರ ಹೊಸ ಸಿನಿಮಾವವನ್ನು ಅನೌನ್ಸ್‌ ಮಾಡಲಿದ್ದಾರೆ ಎಂಬ ಜೋರು ಸುದ್ದಿಯೂ ಇದೆ.
ಎರಡು ದಿನಗಳ ಹಿಂದಷ್ಟೇ,  “ಸಿನಿಲಹರಿ” ಕೂಡ ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ತ್ರಿಬಲ್‌ ಧಮಾಕ ಶೀರ್ಷಿಕೆಯಡಿ ಸುದ್ದಿಯೊಂದನ್ನು ಪೋಸ್ಟ್‌ ಮಾಡಿತ್ತು. ಆ ಸುದ್ದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈಗ ಹೊಂಬಾಳೆ ಫಿಲ್ಮ್ಸ್‌ ಹೊಸ ಚಿತ್ರ ಅನೌನ್ಸ್‌ ‌ ಮಾಡುತ್ತಿರುವುದು ಕೂಡ ಡಿ.೧೭ಕ್ಕೆ. ಹಾಗಾಗಿ ಶ್ರೀಮುರಳಿ ಅವರ ಹುಟ್ಟಹಬ್ಬಕ್ಕೆ ಹೊಂಬಾಳೆ ಫಿಲ್ಮ್ಸ್‌ ಹೊಸ ಚಿತ್ರ ಅನೌನ್ಸ್‌ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ. ಸದ್ಯಕ್ಕೆ ನಿರ್ದೇಶಕ ಯಾರೆಂಬುದು ಗೌಪ್ಯವಾಗಿದೆ.

Related Posts

error: Content is protected !!