ಪ್ರೇಕ್ಷಕನ ಡಿಯರ್ ಆಗ್ತಾನಾ ಈ ಸತ್ಯ?

ಸತ್ಯ ಮೇಲೆ ಸಂತೋಷ್ ಇಟ್ಟಿದ್ದಾರೆ ಬೆಟ್ಟದಷ್ಟು ನಿರೀಕ್ಷೆ !

 

ವರ್ಚಸ್ ಅನ್ನೋದಿದ್ರೂ ನಟ-ನಟಿಯರಿಗೆ ಸಕ್ಸಸ್ ಅನ್ನೋದು ಅತೀ ಮುಖ್ಯ. ಯಾಕಂದ್ರೆ ಅವರ ಆಸ್ತಿತ್ವ ಸಕ್ಸಸ್ ಎನ್ನುವುದರ ಮೇಲೆಯೇ ನಿಂತಿದೆ. ಅದರಲ್ಲೂ ಸಿನಿ ದುನಿಯಾಕ್ಕೆ ಹೊಸದಾಗಿ ಬಂದವರಿಗೆ ಇದು  ತುಂಬಾನೆ ಇಂಫಾರ್ಟೆಂಟ್. ಸದ್ಯಕ್ಕೆ ಒಬ್ಬ ಭರವಸೆಯ ನಟನಾಗಿ ಅಂತಹದೇ ಸಕ್ಸಸ್ ಎದುರು ನೋಡುತ್ತಿರುವ ನಟರ ಪೈಕಿ ಕಿರುತೆರೆಯ ನಿರೂಪಕ ಹಾಗೂ ಮಾಜಿ ಬಿಗ್ ಬಾಸ್ ಕಂಟೆಸ್ಟೆಂಟ್ಆರ್ಯನ್ ಸಂತೋಷ್  ಕೂಡ ಒಬ್ಬರು. ಕಟ್ಟು ಮಸ್ತ್ ದೇಹದೊಂದಿಗೆ ನೋಡುವುದಕ್ಕೂ ಹ್ಯಾಂಡ್ ಸಮ್ ಆಗಿರುವ ಆರ್ಯನ್ ಸಂತೋಷ್ , ಹೀರೋ ಆಗುವುದಕ್ಕೇನು ಯಾವುದರಲ್ಲೂ ಕಮ್ಮಿ ಇಲ್ಲ. ಹಾಗೆ ನೋಡಿದರೆ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಅನೇಕ ಚಾಕ್ ಲೇಟ್ ಹೀರೋಗಳ ಹಾಗೆ ಸಂತೋಷ್ ಕನ್ನಡದಲ್ಲಿ ಒಬ್ಬ ಚಾಕ್ ಲೇಟ್ ಹೀರೋ. ಆದರೂ ಯಾಕೆ ತಮ್ಮನ್ನು ಕನ್ನಡದ ಪ್ರೇಕ್ಷಕರು ದೊಡ್ಡದೊಂದು ಬ್ರೇಕ್ ಸಿಗುವ ಹಾಗೆ ಒಪ್ಪಿಕೊಂಡಿಲ್ಲ, ಅಪ್ಪಿಕೊಂಡಿಲ್ಲ ಎನ್ನುವ ಕೊರಗು ಅವರನ್ನು ಕಾಡುತ್ತಲೇ ಇದೆ. ಹಾಗೊಂದು ಸಕ್ಸಸ್ ಸಿಗಲೇ ಬೇಕು ಅಂತ ಅವರು ಪಡುತ್ತಿರುವ ಶ್ರಮ ಕೂಡ ಅಷ್ಟಿಷ್ಟಲ್ಲ, ಆದರೆ ಈ ಸಲ ಅದು ಮಿಸ್ ಆಗಬಾರದು ಅಂತಲೇ ಪಣ ತೊಟ್ಟಿದ್ದಾರೆ. ಅದಕ್ಕಾಗಿಯೇ ” ಡಿಯರ್ ಸತ್ಯ’ ಚಿತ್ರವನ್ನು ತಾವೇ ಹೆಚ್ಚಿನ ಮುತುವರ್ಜಿ ವಹಿಸಿಕೊಂಡು, ತೆರೆಗೆ ತರಲು ಸಿದ್ಧತೆ ನಡೆಸಿದ್ದಾರಂತೆ.

ಅದ್ದೂರಿ ಮೇಕಿಂಗ್ ಸಿನಿಮಾ..

ಅಂದ ಹಾಗೆ, ಪರ್ಪಲ್ ರಾಕ್ ಹಾಗೂ  ವಿಂಟರ್ ಬ್ರಿಡ್ಜ್ ಬ್ಯಾನರ್ ನಲ್ಲಿ ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಹಾಗೂ ಆಜೇಯ್ ರಾವ್ ನಿರ್ಮಾಣ ಮಾಡಿದ ಚಿತ್ರ ” ಡಿಯರ್ ಸತ್ಯ’. ಸಿನಿಮಾ ಜಗತ್ತಿನ ಜತೆಗಿನ ನಂಟು ಹಾಗೂ ಅದರ ಮೇಲಿರುವ ಪ್ಯಾಷನ್ ಕಾರಣಕ್ಕೆ ಕನ್ನಡಕ್ಕೆ ಒಂದೊಳ್ಳೆ ಸಿನಿಮಾ ಕೊಡಬೇಕೆನ್ನುವ ಮಹಾದಾಸೆ ಇಟ್ಕೊಂಡೇ ತಂಡ ಈ ಸಿನಿಮಾ ಮಾಡಿದೆಯಂತೆ. ಹಾಗಾಗಿ ಸಿನಿಮಾವನ್ನು ಕತೆಗೆ ತಕ್ಕಂತೆ ಆದ್ದೂರಿಯಾಗಿಯೇ ತೆರೆಗೆ ತಂದಿರುವುದಾಗಿ ನಿರ್ಮಾಪಕರು ಹೇಳುತ್ತಿರುವುದು ಮಾತ್ರವಲ್ಲ, ಟ್ರೇಲರ್ ಹಾಗೂ ಹಾಡುಗಳ ದೃಶ್ಯಗಳಲ್ಲಿ ಅದರ ಮೇಕಿಂಗ್ ಕಾಣುತ್ತಿದೆ. ‍ಇತ್ತೀಚೆಗಷ್ಟೇ ನಡೆದ ಅದರ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಬಂದಿದ್ದು, ಈ ತಂಡ ಸಿನಿಮಾ ಮೇಲಿಟ್ಟಿರುವ ಕಾಳಿಜಿಯಿಂದಲೇ ಅಂತೆ. ಜತೆಗೆ ನಟ ಸಂತೋಷ್ ಹಾಗೂ ನಿರ್ಮಾಪಕ ಯತೀಶ್ ಆವರ ಪರಿಚಯದ ಕಾರಣಕ್ಕೂ ಹೌದು. ಅದೇನೋ ಗೊತ್ತಿಲ್ಲ, ನಟ ಸಂತೋಷ್ ಅವರಿಗೆ ಆರಂಭದಿಂದಲೂ ರಾಜ್ ಕುಟುಂಬದ ಆಶೀರ್ವಾದ ಇದ್ದೇ.

ಸಂತುಗಿದೆ ರಾಜ್ ಕುಟುಂಬದ ಆಶೀರ್ವಾದ..

ಸಂತೋಷ್ ಹೀರೋ ಆಗಿ ಲಾಂಚ್ ಆದ ನೂರು ಜನ್ನಕ್ಕೂ ಚಿತ್ರದ ಆಡಿಯೊ ಲಾಂಚ್ ಸೇರಿದಂತೆ ಆದರ ಪ್ರಚಾರದಲ್ಲೂ ಶಿವಣ್ಣ ಹಾಗೂ ಪುನೀತ್ ಬೆಂಬಲವಾಗಿ ನಿಂತಿದ್ದರು. ಅದೇ ರೀತಿ ಇವತ್ತು ಕೂಡ ರಾಜ್ ಕುಟುಂಬ ಸಂತೋಷ್ ಸಿನಿಮಾಕ್ಕೆ ಬೆಂಬಲಕ್ಕೆ ಬಂದಿದೆ. ‘ಡಿಯರ್ ಸತ್ಯ’ ಚಿತ್ರ ಟೀಸರ್ ಲಾಂಚ್ ಗೆ ಶಿವಣ್ಣ ಬಂದಿದ್ದರು. ಆ ನಂತರವೀಗ ಇದರ ಆಡಿಯೋ ಲಾಂಚ್ ಗೆ ಪುನೀತ್ ರಾಜ್ ಕುಮಾರ್ ಬಂದಿದ್ದರು. ಇದೊಂದು ತಮ್ಮ ಸೌಭಾಗ್ಯ ಅಂದರು ಸಂತೋಷ್ ಆರ್ಯನ್. ಅವತ್ತಿನ ಸಮಾರಂಭದಲ್ಲಿ ಅದನ್ನು ಸಂತೋಷ್ ನೆನಪಿಸಿಕೊಳ್ಳುವುದೇ ವಿಶೇಷ.”  ಶಿವಣ್ಣ ಅವರ’ ಓಂ’ ಚಿತ್ರ ಬಂದಾಗ ಅಲಸೂರಿನ ಚಿತ್ರ ಮಂದಿರದಲ್ಲಿ ಬ್ಲಾಕ್ ನಲ್ಲಿ ಟಿಕೆಟ್ ತೆಗೆದುಕೊಂಡು ಸಿನಿಮಾ ನೋಡಿದ್ದೆ. ಅವತ್ತೇ ನಾನು ಶಿವರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಮುಂದೆ ನಾನೂ ಕೂಡ ಸಿನಿ ದುನಿಯಾಕ್ಕೆ ಬರುತ್ತೇನೆ, ನನ್ನ ಸಿನಿಮಾಕ್ಕೆ ಶಿವಣ್ಣ ಬಂದು ಆಶೀರ್ವಾದ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ. ಆದರೆ ಅದು ಅಯಿತು. ಡಿಯರ್ ಸತ್ಯ ಟೀಸರ್ ಆನ್ನು ಅವರೇ ಲಾಂಚ್ ಮಾಡಿದ್ದರು. ಈಗ ಪುನೀತ್ ಅವರು ಆಡಿಯೋ ಲಾಂಚ್ ಮಾಡಿಕೊಟ್ಟಿದ್ದಾರೆ. ದೊಡ್ಮನೆ ಆಶೀರ್ವಾದ ಇದೇ ಆದ್ಮೇಲೆ ನನಗೆ ಗೆಲ್ಲವುದೇನು ಕಷ್ಟ ಆಗದು ಅಂತ ಅತೀವ ವಿಶ್ವಾಸ ವ್ಯಕ್ತಪಡಿಸಿದರು ಆರ್ಯನ್ ಸಂತೋಷ್.

ಡಿಯರ್ ಸತ್ಯ ಗೆಲ್ಲಲ್ಲೇ ಬೇಕಿದೆ…

ಹೌದು, ಆರ್ಯನ್ ಸಂತೋಷ್ ಗೆಲ್ಲಲೇ ಬೇಕಿದೆ. ಕಿರುತೆರೆಯಲ್ಲಿ ನಿರೂಪಕರಾಗಿ, ಆನಂತರ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆಲ್ಲುವ  ಅವರ ಪ್ರಯತ್ನ ಒಂದಷ್ಟು ಫನ ಕೊಟ್ಟರೂ, ಹೀರೋ ಆಗಿ ಅವರಿಗೆ ‍ಇನ್ನು ದೊಡ್ಡದೊಂದು ಬ್ರೇಕ್ ಬೇಕಿದೆ. ಆ ಬ್ರೇಕ್ ಗಾಗಿ ಅವರು ಕಾಯುತ್ತಿದ್ದಾರೆ. ನೂರು ಜನ್ನಕ್ಕೂ ದೊಡ್ಡ ನಿರೀಕ್ಷೆ ಮೂಡಿಸಿದ್ದರೂ, ಅಲ್ಲಿ ಸಂತೋಷ್ ಅವರಿಗೆ ಅದೃಷ್ಟ ಕೈ ಕೊಟ್ಟಿತು. ಮುಂದೆ ಅಭಿರಾಮ್, ಇಷ್ಟ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ, ಸಂತೋಷ್ ಅರ್ಯನ್ ಜನರಿಗೆ ಇನ್ನು ಅಷ್ಟಾಗಿ ಹಿಡಿಸದೆ ಹೋದರು. ಈಗ ಅದೆಲ್ಲವನ್ನು ಮರೆಸಬೇಕು, ದೊಡ್ಡದೊಂದು ಬ್ರೇಕ್ ಪಡೆದುಕೊಳ್ಳಬೇಕು ಅಂತಲೇ ಡಿಯರ್ ಸತ್ಯದಲ್ಲಿ ಆಭಿನಯಿಸಿದ್ದಾರಂತೆ. ಈ ಸಿನಿಮಾದಲ್ಲಿ ಸಂತೋಷ್ ಆರ್ಯನ್ ಅವರ ಮಾಸ್ ಹಾಗೂ ಕ್ಲಾಸ್ ಲುಕ್ ಎಲ್ಲವೂಇದೆ. ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗುವುದು ನೂರಕ್ಕೂ ನೂರರಷ್ಟು ಗ್ಯಾರಂಟಿ ಅಂತಾರೆ ಆರ್ಯನ್ ಸಂತೋಷ್ . ಉಳಿದಂತೆ  ಶಿವಗಣೇಶ್ ನಿರ್ದೇಶನದ ಡಿಯರ್ ಸತ್ಯ ಚಿತ್ರ ಫೆಬ್ರವರಿಗೆ ತೆರೆಗೆ ಬರುವ ಸಾಧ್ಯತೆಗಳಿವೆ. ಸಂತೋಷ್ ಅವರಿಗೆ ಇಲ್ಲಿ ನಟಿ ಅರ್ಚನಾ ಕೊಟ್ಟಿಗೆ ನಾಯಕಿ ಆಗಿದ್ದಾರೆ.

Related Posts

error: Content is protected !!