ಶ್ರೀಮುರಳಿ ಹುಟ್ಟು ಹಬ್ಬಕ್ಕೆ ತ್ರಿಬಲ್ ಧಮಾಕ! ಮದಗಜ ಟೀಸರ್ ಜೊತೆ ಎರಡು ಬಿಗ್ ಪ್ರಾಜೆಕ್ಟ್ ಅನೌನ್ಸ್

 ಫ್ಯಾನ್ಸ್ ಗೆ  ಸರ್ಪ್ರೈಸ್  ಕೊಡ್ತಾರೆ ರೋರಿಂಗ್ ಸ್ಟಾರ್

ಸಿನಿ ಲಹರಿ ಎಕ್ಸ್ ಕ್ಲ್ಯೂಸ್

ಶ್ರೀಮುರಳಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ‘ಉಗ್ರಂ’ ಮೂಲಕ ತಮ್ಮ ಇಮೇಜ್ ಬದಲಿಸಿಕೊಂಡವರು. ಅಲ್ಲಿಂದ ಇಲ್ಲಿಯವರೆಗೂ ಅದೇ ಇಮೇಜ್ ಉಳಿಸಿಕೊಂಡು ಬಂದಿದ್ದಾರೆ. ಅವರೀಗ ಮತ್ತಷ್ಟು ಹೊಸ ಪ್ರಾಜೆಕ್ಟ್‌ ಗಳಲ್ಲಿ ಬಿಝಿಯಾಗಲಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ.

ಶ್ರೀಮುರಳಿ ಹುಟ್ಟು ಹಬ್ಬದ ಖುಷಿಯಲ್ಲಿದ್ದಾರೆ. ಡಿಸೆಂಬರ್ 17ರಂದು ಅವರ ಹುಟ್ಟು ಹಬ್ಬ. ಅದರ ಹಿನ್ನೆಲೆಯಲ್ಲಿ ಶ್ರೀಮುರಳಿ ಅವರ ಮೂರು ವಿಶೇಷತೆಗಳಿವೆ. ಅದು ಬೇರೇನೂ ಅಲ್ಲ. ಶ್ರೀಮುರಳಿ ಅವರ ಎರಡು ಹೊಸ ಪ್ರಾಜೆಕ್ಟ್ ಗಳು ಅನೌನ್ಸ್ ಆಗಲಿವೆ. ‘ಉಗ್ರಂ’, ‘ಮಫ್ತಿ’, ‘ಭರಾಟೆ’, ಎಂಬ ಅದ್ಧೂರಿ ಮತ್ತು ಯಶಸ್ವಿ ಸಿನಿಮಾಗಳನ್ನು ಕೊಟ್ಟಿರುವ ಶ್ರೀಮುರಳಿ ಅವರು, ಈಗ ‘ಮದಗಜ’ ಎಂಬ ಬಹು ನಿರೀಕ್ಷೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅದರ ಬೆನ್ನಲ್ಲೇ ಎರಡು ದೊಡ್ಡ ಬ್ಯಾನರ್ ಗಳಲ್ಲಿ ತಯಾರಾಗುತ್ತಿರುವ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಈ ಕುರಿತು ಅವರ ಹುಟ್ಟು ಹಬ್ಬದ ದಿನದಂದು ಅನೌನ್ಸ್ ಆಗಲಿವೆ. ಆ ಎರಡು ಸಿನಿಮಾಗಳು ಬಿಗ್ ಬ್ಯಾನರ್ ಮೂಲಕ ತಯಾರಾಗಲಿವೆ ಎಂಬುದು ವಿಶೇಷ. ಅವರ ಹುಟ್ಟು ಹಬ್ಬದ ಮುನ್ನವೇ ಹೊಸ ಪ್ರಾಜೆಕ್ಟ್ ಗಳು  ಘೋಷಣೆಯಾಗುತ್ತಿವೆ. ಆದರೆ, ಯಾವ ಬ್ಯಾನರ್, ಯಾವ ನಿರ್ದೇಶಕರ ಸಿನಿಮಾಗಳು ಅನ್ನೋದು ಗೌಪ್ಯ. ಇನ್ನು  ಶ್ರೀಮುರಳಿ ಅವರ  ‘ಮದಗಜ’ ಚಿತ್ರದ ಟೀಸರ್ ಕೂಡ ಅವರ ಹುಟ್ಟುಹಬ್ಬದಂದು ರಿಲೀಸ್ ಆಗಲಿದೆ. ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಟೀಸರ್ ರಿಲೀಸ್ ಮಾಡಲಿದ್ದಾರೆ.

ಅದೇನೆ ಇರಲಿ, ‘ಮದಗಜ’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಬಾರಿಯ ಡಿಸೆಂಬರ್17ರ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಹುಟ್ಟುಹಬ್ಬಕ್ಕೆ ತ್ರಿಬಲ್‌ ಧಮಾಕ. ಈಗಾಗಲೇ ಫಸ್ಟ್ ಲುಕ್ ಟೀಸರ್ ನ ವಿಡಿಯೊ ತುಣುಕು ರಿಲೀಸ್ ಆಗಿದ್ದು, ಎಲ್ಲೆಡೆ, ನಿರೀಕ್ಷೆ ಹುಟ್ಟಿಸಿದೆ.ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ನಿರ್ಮಿಸುತ್ತಿದ್ದಾರೆ.

Related Posts

error: Content is protected !!