ಮುಹೂರ್ತ ಮುಗಿಸಿದ ಫಾರ್ ರಿಜಿಸ್ಟ್ರೇಷನ್ ಚಿತ್ರ

ಕ್ಲಾಪ್ ಮಾಡಿ ಶುಭ ಹಾರೈಸಿದ ನಟ ನಿಖಿಲ್ ಕುಮಾರ ಸ್ವಾಮಿ

ಬಾಲ್ಯದಲ್ಲಿನ ಗೆಳೆತನ ಯಾರು, ಎಷ್ಟು ವರ್ಷ ಕಾಪಿಟ್ಟುಕೊಂಡು ಬರುತ್ತಾರೋ ಗೊತ್ತಿಲ್ಲ, ಆದರೆ ಇಲ್ಲೊಂದಷ್ಟು ಗೆಳೆಯರು ಬಾಲ್ಯದಲ್ಲಿನ‌ ಪ್ರೀತಿಗೆ ಬೆಲೆ ಕೊಟ್ಟು ಸಿನಿಮಾ ನಿರ್ಮಾಣದಲ್ಲಿ ಒಂದಾಗಿದ್ದಾರೆ. ಆಚಿತ್ರದ ಹೆಸರು ‘ಫಾರ್ ರಿಜಿಸ್ಟ್ರೇಷನ್‌’.ಇದೊಂದು ವಿಭಿನ್ನ ಶೀರ್ಷಿಕೆ ಯ ಚಿತ್ರ. ಇದರ ಕತೆ ಕೂಡ ಅಷ್ಟೆ ವಿಶೇಷವಾಗಿದೆ. ಬೆಂಗಳೂರಿನ‌ ವಸಂತನಗರದಲ್ಲಿನ ಅಂಬಾಭವಾನಿ ದೇವಸ್ಥಾನದಲ್ಲಿ ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ಮುಗಿಯಿತು.
ನಟ ನಿಖಿಲ್ ಕುಮಾರಸ್ವಾಮಿ ಅತಿಥಿಯಾಗಿ ಆಗಮಿಸಿ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ನಿರ್ಮಾಪಕ ನವೀನ್ ಕುಮಾರ್ ಅವರ ಪುತ್ರ ನಿಶ್ಚಲ್ ಕ್ಯಾಮರಾ ಸ್ವೀಚ್ ಆನ್ ಮಾಡಿದರು. ನಿಶ್ಚಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎನ್. ನವೀನ್ ರಾವ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ‘ದಿಯಾ’ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ ಹಾಗೂ ಲವ್ ಮಾಕ್ಟೆಲ್ ಖ್ಯಾತಿಯ ನಾಯಕಿ ಮಿಲನಾ‌ ನಾಗರಾಜ್ಬಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಇಷ್ಟರಲ್ಲಿಯೇ ಚಿತ್ರೀಕರಣ ಶುರುವಾಗಲಿದೆಯಂತೆ.


ಚಿತ್ರಕ್ಕೆ ನವೀನ್ ದ್ವಾರಕಾನಾಥ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅವರು ಸಿನಿಮಾ‌ಕುರಿತು ಮಾತನಾಡುತ್ತಾ, ‘ಕಳೆದ ಒಂದೂವರೆ ವರ್ಷದ ಹಿಂದೆಯೇ ಈ ಸಿನಿಮಾ ಮಾಡುವ ಬಗ್ಗೆ ಚರ್ಚೆ ಶುರುವಾಗಿತ್ತು. ಅದೇ ರೀತಿ ಇದೀಗ ಈ ಸಿನಿಮಾ ಸೆಟ್ಟೇರಿದೆ ‘ ಎಂದರು. ಟೈಟಲ್ ಕುರಿತು ಸ್ಪಷ್ಟನೆ ನೀಡಿದ ನವೀನ್, ‘ಇತ್ತೀಚಿನ ದಿನಗಳಲ್ಲಿ ಏನೇ ಕೆಲಸ ಮಾಡಬೇಕೆಂದರೂ ನಾವು ಅದಕ್ಕೆ ಸಂಬಂಧಪಟ್ಟಂತೆ ನೋಂದಣಿ ಮಾಡಿಸಲೇಬೇಕು. ಇಲ್ಲಿಯೂ ಅದರ ಸುತ್ತ ಕಥೆ ಸಾಗಲಿದೆ ‘ ಎಂದರು.
ಚಿತ್ರಕ್ಕೆ ಒಟ್ಟು 30 ದಿನಗಳ ಶೂಟಿಂಗ್ ಯೋಜನೆ ಇದೆಯಂತೆ. ಸಕಲೇಶಪುರ, ಮಂಗಳೂರು, ಉಡುಪಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ‌ನಡೆಸಲು‌ತಂಡ ಯೋಜನೆ ಹಾಕಿಕೊಂಡಿದೆ. ಚಿತ್ರಕ್ಕೆ ನವೀನ್ ರಾವ್ ಬಂಡವಾಳ ಹಾಕುತ್ತಿದ್ದಾರೆ‌. ‘ದಿಯಾ’ ಚಿತ್ರದ ಖ್ಯಾತಿಯ ನಟ ಪೃಥ್ವಿ ಅಂಬರ ನಾಯಕ, ಲವ್ ಮಾಕ್ಟೆಲ್ ಖ್ಯಾತಿಯ ನಟಿ ಮಿಲನಾ‌ನಾಗರಾಜ್ ನಾಯಕಿ. ಚಿತ್ರಕ್ಕೆ ತಬಲ‌ನಾಣಿ‌ಸಂಭಾಷಣೆ ಬರೆದು ಪ್ರಮುಖ‌ಪಾತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಹಾಗೆಯೇ ಸುಧಾರಾಣಿ, ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ,ರಾಘು ರಾಮನಕೊಪ್ಪ ಚಿತ್ರದ ತಾರಾಗಣದಲ್ಲಿದ್ದಾರೆ.

ಚಿತ್ರಕ್ಕೆ ವಿವೇಕ್ ಛಾಯಾಗ್ರಹಣ ಮಾಡುತ್ತಿದ್ದು, ಈ ಮೊದಲು ಕಿರುಚಿತ್ರ ಮಾಡಿದ ಅನುಭವ ಅವರಿಗಿದೆ. ಇದು ಅವರ ಮೊದಲ ಪೂರ್ಣಪ್ರಮಾಣದ ಸಿನಿಮಾ. ಹರೀಶ್ ಸಂಗೀತ ಸಂಯೋಜನೆಯ ಜವಾಭ್ದಾರಿ ಹೊತ್ತಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿವೆ. ಅವರಿಗೂ ಇದು ಮೊದಲ ಸಿನಿಮಾ. ಚೇತನ್ ಕುಮಾರ್, ಕವಿರಾಜ್ ನಾಗಾರ್ಜುನ್ ಶರ್ಮಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಇರ್ಮಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ.

Related Posts

error: Content is protected !!