ಕನ್ನಡದ ಮಹಿಳಾ ನಿರ್ದೇಶಕರಲ್ಲಿ ಹೆಚ್ಚು ಕ್ರಿಯಾಶೀಲ ಆಗಿರುವವರು ‘ಟ್ರಂಕ್’ ಚಿತ್ರದ ಖ್ಯಾತಿಯ ನಿರ್ದೇಶಕಿ ರಿಷಿಕಾ ಶರ್ಮಾ.ಇವರು ಕನ್ನಡ ಚಿತ್ರ ರಂಗದ ಭೀಷ್ಮ ಜಿ.ವಿ. ಅಯ್ಯರ್ ಮೊಮ್ಮಗಳು. ನಟಿಯಾಗಿ ಬಂದವರು ಈಗ ನಿರ್ದೇಶನದಲ್ಲೆ ಹೆಚ್ಚು ತೊಡಗಿಸಿಕೊಂಡಿದ್ದಾರೆ. ‘ಟ್ರಂಕ್’ ನಂತರ ಅವರೀಗ ಬಿಗ್ ಬಜೆಟ್ ನ ಕಮರ್ಷಿಯಲ್ ಚಿತ್ರವೊಂದರ ನಿರ್ದೇಶನದ ಸಿದ್ದತೆಯಲ್ಲಿದ್ದಾರೆ. ಇಷ್ಟರಲ್ಲೇ ಅದರ ವಿವರ ರಿವೀಲ್ ಆಗಲಿದೆ.ಈ ನಡುವೆ ಅವರು ಇತ್ತೀಚೆಗೆ ‘ಆಕ್ಟ್ 1978 ‘ಚಿತ್ರ ನೋಡಿದ್ದರು. ಅದೊಂದು ಸದಭಿರುಚಿಯ ಚಿತ್ರವಾಗಿದ್ದರಿಂದ ಅದು ಹೆಚ್ಚೆಚ್ಚು ಜನರಿಗೆ ತಲುಪಬೇಕು, ಜನರು ಚಿತ್ರ ಮಂದಿರಕ್ಕೆ ಬಂದು ಸಿನಿಮಾ ನೋಡಬೇಕೆನ್ನುವ ಕಾಳಜಿಯೊಂದಿಗೆ ಆ ಸಿನಿಮಾದ ಕುರಿತು ಸಿನಿಲಹರಿ ಜತೆಗೆ ಒಂದಷ್ಟು ಅನಿಸಿಕೆ ಹಂಚಿಕೊಂಡಿದ್ದು, ಅದರ ಪೂರ್ಣ ವಿವರ ಇಲ್ಲಿದೆ.
…………
ನಿರ್ದೇಶಕಿ ರಿಷಿಕಾ ಶರ್ಮಾ ಬರೀತಾರೆ……
ಕನ್ನಡಕ್ಕೆ ಒಂದು ಹೆಮ್ಮೆ ಹಾಗೆ ಒಂದು ಅದ್ಭುತ ಸಿನಿಮಾ Act – 1978. ಚಿತ್ರಕ್ಕೆ ಚಿತ್ರದ ಕಥಾ ವಸ್ತು ಬೆನ್ನೆಲುಬು ಆಗಿದ್ದರೆ, ಇದರ ಪಾತ್ರಧಾರಿಗಳು, ಛಾಯಾಗ್ರಹಣ, ಕಲರ್ ಟೋನ್, ಹಿನ್ನೆಲೆ ಸಂಗೀತ ಇವೆಲ್ಲವೂ ಚಿತ್ರದ ಉಸಿರಾಗಿದೆ.
ಬೇರೊಂದು ಜಗತ್ತಿಗೆ ಕರೆದು ಕೊಂಡು ಹೋಗುವ screenplay, ಕಥೆ ಸಾಗಿದಷ್ಟು ಆಳಕ್ಕೆ ಪರಿಚಯಿಸುವ ಪಾತ್ರಗಳು ಹಾಗೂ ಅದರ ದೃಷ್ಟಿ ಕೋನಗಳು, ಇದಿಷ್ಟು ವಿಷಯಗಳು ನಮ್ಮನ್ನು ಅಂದರೆ ಪ್ರೇಕ್ಷಕರನ್ನು ಚಿತ್ರದ heroin ಗೀತಾ ಪಾತ್ರದ ಸ್ವತಃ ಮುಂದೆಯೇ ನಿಂತು, ಆ ಒಂದು ದಿನ – ಬೆಳಗ್ಗೆ ನಿಂದ ಸಂಜೆಯವರೆಗೂ ಅವಳ ಜೀವನದಲ್ಲಿ ಏನು ನಡೀತು ಅನ್ನೋದನ್ನ 2 ಗಂಟೆಗಳ ಒಳಗೆ ಬಹಳ ನೈಜ್ಯವಾಗಿ ಹಾಗೆ ಅದ್ಭುತವಾಗಿ ಸೆರೆ ಹಿಡಿಯುವುದರಲ್ಲಿ ಚಿತ್ರ ತಂಡ ಯಶಸ್ವಿಯಾಗಿದೆ.
ಒಬ್ಬ ಸಾಮಾನ್ಯ ಗರ್ಭಿಣಿ ಮಹಿಳೆ ಹಾಗೂ ಕುಟುಂಬಸ್ಥ ಅವರಿಗೆ ಸರ್ಕಾರಿ ನೌಕರರಿಂದ ಅನ್ಯಾಯ ಆದಾಗ, ಆ ನೌಕರರಿಗೆ ಗೀತಾ ಅವಳ ಪರಿಸ್ಥಿತಿ ಅರ್ಥ ಮಾಡಿಸೋಕೆ, ಅವರಿಗೆ ಒಂದು ಪಾಠ ಕಲಿಸುವುದಕ್ಕೆ ಕೃಷಿ ಇಲಾಖೆ ಕಚೇರಿಯನ್ನು ಈಕೆ ಹ್ಯೂಮನ್ ಬಾಂಬ್ ಹಾಕಿಕೊಂಡು ಸೆರೆ ಹಿಡಿಯುತ್ತಾಳೆ. ಹೇಗೆ ಸೆರೆ ಹಿಡಿದ್ರು? ಮುಂದೆ ಆಕೆಗೆ ನ್ಯಾಯ ಸಿಗತ್ತಾ? ಅನ್ನೋದು ಚಿತ್ರದ ಕಥೆ.
ಕಥೆಯ ಪಾತ್ರಧಾರಿ ಗೀತಾ ಪಾತ್ರದಲ್ಲಿ ಯಜ್ಞಾ ಶೆಟ್ಟಿ, ಕುಟುಂಬಸ್ಥರ ಪಾತ್ರದಲ್ಲಿ ಬಿ. ಸುರೇಶ್, ಪೊಲೀಸ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ನೌಕರರ ಪಾತ್ರದಲ್ಲಿ ನಂದ ಗೋಪಾಲ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನುಳಿದ ಪಾತ್ರಗಳು ಕೂಡಾ ಮನ ಸೆಳೆಯುವಂತೆ ಅಭಿನಯಿಸಿದ್ದಾರೆ.
ಇಂತಹ ಪ್ರಯತ್ನವನ್ನ ಕನ್ನಡಕ್ಕೆ ಚಿತ್ರೀಕರಿಸಿ ಕೊಟ್ಟ ಚಿತ್ರದ ಕ್ಯಾಪ್ಟನ್ ನಿರ್ದೇಶಕ ಮಂಸೋರೆ ಅವರಿಗೆ ಹಾಟ್ಸ್ ಆಫ್. ಕನ್ನಡದಲ್ಲಿ ಇಂತಹದ್ದು ಒಂದು ಸಿನಿಮಾ ಅಚ್ಚುಕಟ್ಟಾಗಿ ಮಾಡಬಹುದು ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಚಿತ್ರದಲ್ಲಿ emotions with entertainment ಒಂದಕ್ಕೊಂದು ಸಾಥ್ ಕೊಡೋದ್ರಲ್ಲಿ ಯಶಸ್ವಿಯಾಗಿದೆ.
ಕನ್ನಡ ಪ್ರೇಕ್ಷಕರೆ ನಿಮ್ಮಲ್ಲಿ ಒಂದು ವಿನಂತಿ 🙏 (Movie Lovers) with all safety measures to avoid #COVID19 spread, request you all to please do support #kannadafilms by watching this classic in theatre. ನಿಮ್ಮ ಪ್ರೋತ್ಸಾಹ ಇರಲಿ 🙏