ಜೆಕೆ ಸಿನಿಮಾಕ್ಕೆ ಕಿಚ್ಚ ಸುದೀಪ್ ಸಾಥ್!

ಡಿಸೆಂಬರ್ 21 ಕ್ಕೆ ʼ ಐರಾವನ್‌ ʼ  ಟೀಸರ್ ಲಾಂಚ್

ಜೆಕೆ ಅಲಿಯಾಸ್‌ ಜಯರಾಂ ಕಾರ್ತಿಕ್‌ ಅಭಿನಯದ ʼಐರಾವನ್‌ʼ ಚಿತ್ರಕ್ಕೆ ನಟ ಕಿಚ್ಚ ಸುದೀಪ್‌ ಸಾಥ್‌ ನೀಡಿದ್ದಾರೆ. ಸದ್ಯಕ್ಕೆ ಸುಮಾರು ೪೫ ದಿನಗಳ ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಈಗ ಟೀಸರ್‌ ಲಾಂಚ್‌ ಮಾಡಲು ಮುಂದಾಗಿದೆ.

ಡಿಸೆಂಬರ್‌ ೨೧ಕ್ಕೆ ಟೀಸರ್‌ ಲಾಂಚ್‌ಗೆ ದಿನಾಂಕ ಫಿಕ್ಸ್‌ ಆಗಿದೆ. ಅವತ್ತು ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್‌ ಚಿತ್ರ ತಂದೊಂದಿಗೆ ಟೀಸರ್‌ ಲಾಂಚ್‌ ಮಾಡಲು ಒಪ್ಪಿಕೊಂಡಿದ್ದಾರೆ.

ಟೀಸರ್‌ ಲಾಂಚ್‌ ಮಾಡಿಕೊಡುವ ಸಂಬಂಧ ಚಿತ್ರ ತಂಡ ಇತ್ತೀಚಿಗೆ ನಟ ಕಿಚ್ಚ ಸುದೀಪ್‌ ಅವರನ್ನು ಭೇಟಿ ಮಾಡಿತ್ತು, ಆ ಸಂದರ್ಭದಲ್ಲಿ ಚಿತ್ರ ತಂಡದೊಂದಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಸಂತಸದಲ್ಲಿ ಮಾತನಾಡಿದ ಸುದೀಪ್‌, ಟೀಸರ್‌ ಲಾಂಚ್‌ ಮಾಡುವುದಾಗಿ ಭರವಸೆ ನೀಡಿದರು ಎನ್ನುವ ವಿಚಾರವನ್ನು ಚಿತ್ರ ತಂಡ ಮಾಧ್ಯಮದ ಜತೆಗೆ ಹಂಚಿಕೊಂಡಿದೆ.

ನಿರಂತರ ಪ್ರೊಡಕ್ಷನ್‌ ಮೂಲಕ ನಿರಂತರ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಈಗ ಅರ್ಧದಷ್ಟು ಚಿತ್ರೀಕರಣ ಮುಗಿದಿದೆ. ಈಗಾಗಲೇ ಅರ್ಧದಷ್ಟು ಬೆಂಗಳೂರು, ಮಂಗಳೂರು ಮುಂತಾದ ಕಡೆ ಸುಮಾರು 45 ದಿನಗಳ ಚಿತ್ರೀಕರಣ ನಡೆದಿದೆ.

ಉಳಿದಂತೆ ರಾಮ್ಸ್‌ ರಂಗ ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರವಿದು. ಈಗಾಗಲೇ ಅವರು ಹಲವು ಚಿತ್ರಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ರಾಮ್ಸ್ ರಂಗ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಸಸ್ಪೆನ್ಸ್‌ ಥ್ಲಿಲ್ಲರ್‌ ಕಥೆ ಆಧಾರಿತ ಚಿತ್ರವಿದು. ಎಸ್.ಪದೀಪ್‌ ಸಂಗೀತ ನಿರ್ದೇಶನ ನೀಡಿದ್ದಾರೆ.

Related Posts

error: Content is protected !!