ಅಪ್ಪಟ ಕನ್ನಡಿಗರ ಪ್ರೀತಿಯ ವಾಹಿನಿ ಈಗ ಮೂರನೇ ಹೆಜ್ಜೆ
ಕನ್ನಡಿಗರ ಹೆಮ್ಮೆಯ ವಾಹಿನಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ “ಸಿರಿ ಕನ್ನಡ” ವಾಹಿನಿಯು ಇದೀಗ ಮೂರನೇ ವರ್ಷಕ್ಕೆ ಹೆಜ್ಜೆ ಇಡುತ್ತಿದೆ. ಸಿನಿಮಾ ಮತ್ತು ಮನರಂಜನೆ ವಾಹಿನಿಯಾಗಿ ಇಲ್ಲಿನ ನೆಲದಲ್ಲಿ ಚಿಗುರೊಡೆದು ಹಂತ ಹಂತವಾಗಿ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೊಸದಾಗಿ ಆರಂಭವಾದರೂ ಎವರ್ಗ್ರೀನ್ ಕ್ಲಾಸಿಕ್ ಸಿನಿಮಾಗಳು ಮತ್ತು ಸಿನಿಮಾ ಆಧಾರಿತ ಸ್ಪೆಷಲ್ ಕಾರ್ಯಕ್ರಮಗಳೊಂದಿಗೆ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ಹಾಗಾಗಿ ಪ್ರಸ್ತುತ ಸಂಪೂರ್ಣ ಮನರಂಜನಾ ವಾಹಿನಿಯಾಗಿ ತಲೆ ಎತ್ತಿ ನಿಂತಿದೆ.
ಕೋವಿಡ್ ಸಂದರ್ಭದಲ್ಲೂ ನೂತನ ಧಾರವಾಹಿಗಳು, ವಿಭಿನ್ನ ರಿಯಾಲಿಟಿ ಶೋಗಳು, ಹಬ್ಬದ ವಿಶೇಷ ಕಾರ್ಯಕ್ರಮಗಳು, ಹೊಸ ರೂಪದ ಭಕ್ತಿ ಪ್ರಧಾನ ಶೋಗಳನ್ನು ಕೊಡುತ್ತಾ ಮನ ಮನೆಗಳಿಗೆ ತಲುಪಿದೆ. ಈ ಹಂತದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತಿರಿಸಿಕೊಳ್ಳುತ್ತಾ ಇದೆ. ವೀಕ್ಷಕರು ಇಷ್ಟಪಟ್ಟಿರುವ ಮೆಗಾ ಧಾರವಾಹಿಗಳೊಂದಿಗೆ ಜನಪ್ರಿಯ ಶೋಗಳು ಹೊಸ ರೂಪದಲ್ಲಿ ನಿಮ್ಮನ್ನು ರಂಜಿಸಲಿವೆ. ಅಪಾರ ಜನಪ್ರಿಯತೆ ಪಡೆದ “ಕ್ಯಾಶ್ ಬಾಕ್ಸ್” ’ಸ್ಟಾರ್ ಆಫ್ ದಿ ವೀಕ್’ ದಲ್ಲಿ ವಿಜೇತರಿಗೆ ಇಪ್ಪತ್ತೈದು ಸಾವಿರ ಬಹುಮಾನ, ’ನಾರಿಗೊಂದು ಸೀರೆ’ ಕಾರ್ಯಕ್ರಮವು 120 ಕ್ಕೂ ಹೆಚ್ಚು ಸಂಚಿಕೆಗನ್ನು ಪೂರೈಸಿ, 500 ಕ್ಕೂ ಹೆಚ್ಚು ಸೀರೆಗಳನ್ನು ಮಹಿಳಾಮಣಿಗಳ ಬಳಿ ತರುತ್ತಿದೆ. ನಟಿ ಸುಜಾತ ನಿರೂಪಣೆಯ “ಸಿನಿ ಪಾಕ”ದಲ್ಲಿ ವೀಕ್ಷಕರಿಗೂ ಭಾಗವಹಿಸುವ ಅವಕಾಶ ಸಿಗಲಿದೆ. ರೀಲ್ ಹಿಂದಿನ ರಿಯಲ್ ಕಥೆ “ಟೂರಿಂಗ್ ಟಾಕೀಸ್” ಮತ್ತಷ್ಟು ವಿಭಿನ್ನವಾಗಿ ಮೂಡಿಬರುತ್ತದೆ ಎಂbuದು ವಾಹಿನಿಯ ಮುಖ್ಯಸ್ಥ ಸಂಜಯ್ ಶಿಂಧೆಯವರು ಸಂತಸ ಹಂಚಿಕೊಂಡಿದ್ದಾರೆ.
ಕನ್ನಡಿಗರಿಗಾಗಿಯೇ ರೂಪುಗೊಂಡ “ಸಿರಿ ಕನ್ನಡ” ನಾಡು ನುಡಿ ಸಂಸ್ಕೃತಿ ಬಿಂಬಿಸೋ, ಸ್ವಂತಿಕೆಯ ಸಂಭ್ರಮದ ಹೆಜ್ಜೆ ಇಡುತ್ತಿದೆ. ಮುಂದೆಯೂ ಕರುನಾಡಲ್ಲಿ “ನುಡಿ ಕನ್ನಡ, ನಡೆ ಕನ್ನಡ, ನೋಡ್ತಾ ಇರಿ ಸಿರಿ ಕನ್ನಡ” ಎನ್ನುವಂತಾಗಬೇಕು ಎಂಬುದೇ ವಾಹಿನಿಯ ಆಶಯವಾಗಿದೆ.