ಗನ್ ಹಿಡಿದ ಕೈ ಗೆ ವಚನ ರಚಿಸುವ ಶಕ್ತಿ ಇದೀಯಾ?
ಗನ್ ಹಿಡಿದ ಕೈಗೆ ವಚನ ಬರೆಯುವ ಶಕ್ತಿ ಇದೀಯಾ? ಈ ಪ್ರಶ್ನೆ ಮೂಡಿದ್ದು ‘ಅಲ್ಲಮಪ್ರಭು ‘ಹೆಸರಿನ ಚಿತ್ರಕ್ಕೆ ಎನ್ ಕೌಂಟರ್ ದಯಾನಾಯಕ್ ಚಿತ್ರದ ಖ್ಯಾತಿಯ ನಟ ಸಚಿನ್ ಸುವರ್ಣ ನಾಯಕರಾಗಿರುವ ಕಾರಣ. ಹೌದು, ನಟ ಸಚಿನ್ ಸುವರ್ಣ ಮತ್ತೆ ಸ್ಯಾಂಡಲ್ ವುಡ್ ನತ್ತ ಮರಳಿದ್ದಾರೆ. ಹಾಗೆ ಬಂದವರು ಅವರೀಗ
ಅಲ್ಲಮನಾಗಿ ಕಾಣಿಸಿಕೊಂಡಿದ್ದಾರೆ.ವ್ಯೂಮಕಾಯ ಸಿದ್ದ ‘ಅಲ್ಲಮ ಪ್ರಭು ‘ ಎನ್ನುವುದು ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮೂರನೇ ಚಿತ್ರದ ಹೆಸರು.
‘ ಎನ್ ಕೌಂಟರ್ ದಯಾನಾಯಕ್ ‘ ಹಾಗೂ’ ಶ್ರೀ ಮೋಕ್ಷ ‘ಚಿತ್ರದ ನಂತರ ‘ ವ್ಯೂಮಕಾಯ ಸಿದ್ದ ಶ್ರೀ ಅಲ್ಲಮಪ್ರಭು’ ಚಿತ್ರದಲ್ಲಿ ಅವರು ಅಲ್ಲಮನಾಗಿ ಅಭಿನಯಿಸುತ್ತಿದ್ದಾರೆ. ಇದು ಡಿ.ಕೆ.ಶಿವರಾಜ್ ನಿರ್ದೇಶನದ ಚಿತ್ರ. ಮಹಾವೀರ ಪ್ರಭು ಹಾಗೂ ಮಾಧವಾನಂದ ಈ ಚಿತ್ರದ ನಿರ್ಮಾಪಕರು. ಇವರಿಗಿದು ಮೊದಲ ಸಿನಿಮಾ.ಮ ಹನ್ನೇರಡನೇ ಶತಮಾನದ ಶರಣ ಅಲ್ಲಮಪ್ರಭು ಮೇಲಿನ ಅಭಿಮಾನ ಹಾಗೂ ಭಕ್ತಿಯ ಕಾರಣಕ್ಕೆ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.ಈ ಚಿತ್ರದಕ್ಕೆ ಸಚಿನ್ ಸುವರ್ಣ ನಾಯಕರಾಗಿರುವುದು ವಿಶೇಷ.
‘ಸುಮಾರು ಏಳೆಂಟು ತಿಂಗಳಹಿಂದೆಯೇ ಫಿಕ್ಸ್ ಆದ ಪಾತ್ರ.ಕೊರೋನಾ ಮುಂಚೆಯೇ ನಿರ್ಮಾಪಕ ಮಹಾವೀರ ಪ್ರಭು ಅವರು ಭೇಟಿ ಮಾಡಿಚಿತ್ರದ ಬಗ್ಗೆ ಹೇಳಿದರು. ಪಾತ್ರದ ಬಗ್ಗೆಯೂ ವಿವರಿಸಿದರು. ಪಾತ್ರ ಒಪ್ಪಿಕೊಂಡೆ. ಆ ಪಾತ್ರಕ್ಕೆ ಹೇಗೆಲ್ಲ ಸಿದ್ದಯೆ ಮಾಡಿಕೊಂಡೆ, ಹೇಗೆಲ್ಲ ಅಭಿನಯಿಸಲಿದ್ದೇನೆ ಅನ್ನೋದು ಸಿನಿಮಾಕಂಪ್ಲೀಟ್ ಆದ್ಮೇಲೆ ಹೇಳುತ್ತೇನೆ’ಎಂದರು ಸಚಿನ್ ಸುವರ್ಣ. ಶುಕ್ರವಾರ ಸಂಜೆ ಈ ಚಿತ್ರಕ್ಕೆ ಮುಹೂರ್ತ ನಡೆಯಿತು. ಮುಹೂರ್ತ ಸಂದರ್ಭಕ್ಕೆ ಅನೇಕ ಮಠಾಧೀಶರು ಸಾಕ್ಷಿ ಯಾದರು.