ನಾಳೆ ‘ಪ್ರಾರಂಭ’ ಟ್ರೇಲರ್‌ ಲಾಂಚ್‌

 

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನು ರವಿಚಂದ್ರನ್‌ ಅಭಿನಯದ ” ಪ್ರಾರಂಭ ” ಚಿತ್ರ ರಿಲೀಸ್‌ ಗೆ ರೆಡಿ ಆಗಿದೆ. ಸದ್ಯಕ್ಕೆ ರಿಲೀಸ್‌ ದಿನಾಂಕ ಇನ್ನು ಫಿಕ್ಸ್‌ ಆಗಿಲ್ಲ. ಆದರೆ ರಿಲೀಸ್‌ ಗೆ ಬರದ ಸಿದ್ಧತೆ ನಡೆಸಿರುವ ಚಿತ್ರ ತಂಡ ನಾಳೆ( ಡಿಸೆಂಬರ್‌ 11) ಚಿತ್ರದ ಅಧಿಕೃತ ಟ್ರೇಲರ್‌ ಲಾಂಚ್‌ ಮಾಡುತ್ತಿದೆ.

ಬುಧವಾರಬೆಳಗ್ಗೆ 12 ಗಂಟೆಗೆ ಆನಂದ್‌ ಆಡಿಯೋ ಯುಟ್ಯೂಬ್‌ ಚಾನೆಲ್‌ ಮೂಲಕ ಟ್ರೇಲರ್‌ ಲಾಂಚ್‌ ಆಗುತ್ತಿದೆ. ʼಪ್ರಾರಂಭʼ ಹಲವು ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿದ ಸಿನಿಮಾ. ನಟ ರವಿಚಂದ್ರನ್‌ ಹಿರಿಯ ಪುತ್ರ ಮನು ರವಿಚಂದ್ರನ್‌ ಅಭಿನಯದ ಸಿನಿಮಾ ಎನ್ನುವುದರ ಜತೆಗೆ ಮನು ಕಲ್ಯಾಡಿ ನಿರ್ದೇಶನದ ಸಿನಿಮಾ ಎನ್ನುವುದು ಕೂಡ ಇದರ ಕುತೂಹಲದ ಅಂಶಗಳಲ್ಲಿ ಒಂದು.

ಈಗಾಗಲೇ ವಿಭಿನ್ನ ಕಾರಣಕ್ಕೆ ಸುದ್ದಿ ಮಾಡಿದ ಚಿತ್ರ ಇದು. ಈಗ ಟ್ರೇಲರ್‌ ಕೂಡ ಕುತೂಹಲ ಮೂಡಿಸಿದೆ. ಚಾಲೆಜಿಂಗ್‌ ಸ್ಟಾರ್‌ ದರ್ಶನ್‌ ಚಿತ್ರದ ಟ್ರೇಲರ್‌ ಗೆ ಧ್ವನಿ ನೀಡಿದ್ದು, ಇನ್ನೇನು ಲಾಂಚ್‌ಗೆ ಕಾತರ ಹೆಚ್ಚಿದೆ.

Related Posts

error: Content is protected !!