ಕನ್ನಡದ ನಟರಂದ್ರೆ ಬರೀ ‌ಲೋಕಲ್ ಸ್ಟಾರಾ?

ಯಶ್ ಅವರನ್ನೇ ಹಾಕಿ ಕೊಂಡು ಪ್ಯಾನ್ ಇಂಡಿಯಾ ಸಿನಿಮಾ‌ ಮಾಡಿ‌ಗೆದ್ದವರು ಈಗ ತೆಲುಗು ನಟ ಪ್ರಭಾಸ್ ಮೊರೆ ಹೋಗಿದ್ದೇಕೆ? ಅದರ ಅಸಲಿ ಕತೆ ಏನು?

ನಿರ್ಮಾಪಕ ವಿಜಯ್ ಕಿರಗಂದೂರು ಹೀಗೇಕೆ ಮಾಡಿದ್ರು? ‘ಕೆಜಿಎಫ್’ ನೋಡಿ ಖುಷಿ ಪಟ್ಟ ಕನ್ನಡದ ಸಿನಿ ಪ್ರೇಕ್ಷಕನಿಗೆ ಹಿಗೊಂದು ಪ್ರಶ್ನೆ ಶುರುವಾಗದೆ ಉಳಿದಿಲ್ಲ. ಅದಕ್ಕೆ ಕಾರಣ ಅವರೀಗ ಅನೌನ್ಸ್ ಮಾಡಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ., ಮತ್ತದಕ್ಕೆ ಅವರು ಆಯ್ಕೆ ಮಾಡಿಕೊಂಡಿರುವ ನಾಯಕ ನಟ.

ಡಿಸೆಂಬರ್ 2 ಕ್ಕೆ ಹೊಂಬಾಳೆ ಫಿಲಂಸ್ ಕನ್ನಡದ ಸಿನಿ ಪ್ರೇಕ್ಷಕ ರಿಗೆ ದೊಡ್ಡದೊಂದು ಸಿಹಿ ಸುದ್ದಿ ಕೊಡಲಿದೆ ಎನ್ನುವ ಮಾಹಿತಿ ರಿವೀಲ್ ಆದಾಗ, ನಿರ್ಮಾಪಕ ವಿಜಯ್ ಕಿರಗಂದೂರು ಈ ಬಾರಿ ಕನ್ನಡದ ಯಾವ ಸ್ಟಾರ್ ನಟನ ಜತೆಗೆ ಸಿನಿಮಾ ಮಾಡಲಿದ್ದಾರೆನ್ನುವ ಕುತೂಹಲ ಬೆಟ್ಟದಷ್ಟಿತ್ತು. ಕನ್ನಡದ ಸಿನಿ ಪ್ರೇಕ್ಷಕರ ಮನಸ್ಸಲ್ಲಿ ಅರೆ ಘಳಿಗೆ ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ಸೇರಿದಂತೆ ಒಂದಷ್ಟು ಬಹು ಬೇಡಿಕೆ ನಟರ ಹೆಸರು ಹಾದು ಹೋಗಿದ್ದು ಸುಳ್ಳಲ್ಲ.

ಬಹಳಷ್ಟು ಜನರಿಗೆ ದರ್ಶನ್ ಹಾಗೂ ಸುದೀಪ್ ಟಾರ್ಗೆಟ್ ಆಗಿದ್ದರು.ಆದರೆ ಡಿಸೆಂಬರ್ 2 ಕ್ಕೆ ಹೊಂಬಾಳೆ ಹೊರಗೆಡವಿದ ಸುದ್ದಿಯೇ ಬೇರೆ. ಕನ್ನಡದ ಸಿನಿ ಪ್ರೇಕ್ಷಕರು ಖುಷಿ ಪಡುವ ಬದಲಿಗೆ ಶಾಕ್ ಆಗುವಂತಹ ಸುದ್ದಿಯೇ ಹೊರ ಬಿತ್ತು. ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತೊಂದು ಅದ್ದೂರಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದರೂ, ಈ ಬಾರಿ ಅವರು ಸೆಲೆಕ್ಟ್ ಮಾಡಿಕೊಂಡ ನಟ ಬಾಹುಬಲಿ ಖ್ಯಾತಿಯ ಪ್ರಭಾಸ್. ಪ್ಯಾನ್ ಇಂಡಿಯಾ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಾರುಕಟ್ಟೆ ದೃಷ್ಟಿಯಿಂದ ಹೊಂಬಾಳೆ ಫಿಲಂಸ್ ನ ಆಯ್ಕೆ ಸರಿ ಇತ್ತೇನೋ ಆದರೆ, ಕನ್ನಡದ ಸಿನಿ ಪ್ರೇಕ್ಷಕರಿಗೆ ಅದೇ ಆಕ್ರೋಶಕ್ಕೆ ಕಾರಣವಾಯ್ತು.‌ ಸುದ್ದಿ ಹೊರ ಬೀಳುತ್ತಿದ್ದಂತೆ ಸೋಷಲ್ ಮೀಡಿಯಾದಲ್ಲಿ ಪ್ರಶಾಂತ್ ನೀಲ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ್ರು.


ಪ್ಯಾನ್ ಇಂಡಿಯಾ ಕ್ಕೆ ನಟನಾಗಬಲ್ಲ ನಟ ಕನ್ನಡದಲ್ಲಿ ಇಲ್ಲವೇ? ಪ್ರಶಾಂತ್ ನೀಲ್ ಯಾವ ಭಾಷೆ ಸಿನಿಮಾ ಮಾಡಲು ಹೊರಟಿದ್ದಾರೆ? ಇತ್ಯಾದಿ ರೀತಿಯಲ್ಲಿ ನೆಟ್ಟಿಗರು ಕಿಡಿಕಾರಿದರು. ಅಂತಹ ಸಿಟ್ಟು ಸ್ಪೋಟವಾಗುವುದಕ್ಕೆ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಜೋಡಿಯ ಸಿನಿಮಾದ ಟೈಟಲ್ ಕೂಡ ಕಾರಣವಾಯಿತು. ಸಾಲಾರ್ ಅನ್ನೋದು ಆ ಚಿತ್ರದ ಹೆಸರು. ಸಾಲಾರ್ ಅಂದ್ರೆ ಕನ್ನಡದ ಪದವೇ? ಇದು ನೆಟ್ಟಿಗರ ಪ್ರಶ್ನೆ . ಅಸಲಿಗೆ ಸಾಲಾರ್ ಅನ್ನುವ ಪದವೇ ಕನ್ನಡದಲ್ಲಿ ಇಲ್ಲ. ಇದೊಂದು ಅರೇಬಿಯಾ ಪದ. ಇದು ಕೂಡ ಪ್ಯಾನ್ ಇಂಡಿಯಾ ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಯ ತಂತ್ರ. ಜಾಗತಿಕವಾಗಿ ಸಿನಿಮಾ ಮಾಡಲು ಹೊರಟ ಪ್ರಶಾಂತ್ ನೀಲ್ ಗೆ ಒಂದು ಯುನಿವರ್ಷಲ್ ಟೈಟಲ್ ಬೇಕಿತ್ತು. ಅದಕ್ಕಾಗಿ ಅವರು ಆ ಪದ ಆಯ್ಕೆ ಮಾಡಿಕೊಂಡ್ರು.ಆದರೆ ಅದನ್ನು ಕನ್ನಡಿಗರು ಒಪ್ಪಿಕೊಳ್ಳುತ್ತಾರಾ?


ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಜೋಡಿಯ ಸಿನಿಮಾ ಚಿತ್ರದ ಕತೆ ಏನು ಅನ್ನೊದು ಇನ್ನು ಗೊತ್ತಾಗಿಲ್ಲ. ಟೈಟಲ್ ಮಾತ್ರ ಈ ರಿವೀಲ್ ಆಗಿದೆ. ಅದೇ ಸಾಲಾರ್. ಸಾಲಾರ್ ಅಂದ್ರೆ ಅರೇಬಿಯಾದಲ್ಲಿ ಲೀಡರ್. ಅರೇಬಿಯಾಕ್ಕೂ ಕತೆಗೂ ಒಂದು ನಂಟಿರುವ ಹಾಗೆ ಕಾಣಿಸುತ್ತೆ. ಅದು ಟೆರರಿಸ್ಟ್ ಲಿಂಕೇ ಆಗಿರುತ್ತೆ. ಅದೀಗ ಯುನಿವರ್ಷಲ್ ವಿಷಯವೂ ಹೌದು. ಅದರ ವಿರುದ್ಧ ಒಬ್ಬ ನಾಯಕನನ್ನು ಸೃಷ್ಟಿಸಿರುವ ಪ್ರಶಾಂತ್ ನೀಲ್ ಅದಕ್ಕೆ ಪ್ರಭಾಸ್ ಅವರನ್ನು ಸೆಲೆಕ್ಟ್ ಮಾಡಿಕೊಂಡು ಸಾಲಾರ್ ಅಂತ ಹೆಸರಿಟ್ಟಿದ್ದಾರೆ. ಆದರೆ ಅದು ಕನ್ನಡಕ್ಕೆ ಒಗ್ಗಿತಾ? ಸದ್ಯದ ವಿರೋಧ ನೋಡಿದರೆ ಪ್ರಶಾಂತ್‌ನೀಲ್ ಈಗ ಎಡವಿದ್ರಾ ಎನ್ನುವ ಅನುಮಾನ ಶುರುವಾಗಿದೆ. ಅದರ ವಾಸ್ತವ ಮುಂದೆ ಗೊತ್ತಾಗಲಿದೆ. ಸದ್ಯಕ್ಕೆ ಫಿಚ್ಚರ್ ಬಾಕಿ ಇದೆ.

Related Posts

error: Content is protected !!