ಮರಿ ಟೈಗರ್ ಗೆ ಸಿಗ್ತು ಭರ್ಜರಿ ಗಿಫ್ಟ್!

ನಟ  ವಿನೋದ್ ಪ್ರಭಾಕರ್ ಗೆ ಇಂದು ಹುಟ್ಟು ಹಬ್ಬ

ಮರಿ ಟೈಗರ್ ವಿನೋದ್ ಪ್ರಭಾಕರ್ ಅವರಿಗೆ ಇಂದು ಹುಟ್ಟು ಹಬ್ಬ. ಸದ್ಯ ಅವರೀಗ ಕನ್ನಡದ ಬಹು ಬೇಡಿಕೆಯ ನಟ. ಅವರು ನಾಯಕರಾಗಿ ಅಭಿನಯಿಸಿರುವ ‘ಫೈಟರ್’ ಮತ್ತು ‘ಶ್ಯಾಡೋ’ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದೆ. ಎರಡು ಚಿತ್ರಗಳು ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಕಾಯುತ್ತಿದೆ. ಇನ್ನು ಹೆಸರಿಡದ ಚಿತ್ರವೊಂದು ಕೂಡ ಚಿತ್ರೀಕರಣ ಮುಗಿಸಿದೆ.ಈ ಮಧ್ಯೆ ಹೊಸ ಸಿನಿಮಾವೊಂದಕ್ಕೂ ಕಾಲ್ ಶೀಟ್ ನೀಡಿದ್ದು , ಇತ್ತೀಚೆಗಷ್ಟೆ ರಿವೀಲ್ ಆಗಿದೆ. ಹಾಗೆಯೇ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಬರ್ಟ್ ನಲ್ಲೂ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿದ್ದು, ಈಗ ಅವರ ಹುಟ್ಟು ಹಬ್ಬಕ್ಕೆ ರಾಬರ್ಟ್ ಚಿತ್ರ ತಂಡ ವಿನೋದ್ ಪ್ರಭಾಕರ್ ಅವರ ಪಾತ್ರದ ಫಸ್ಟ್ ಲುಕ್ ಲಾಂಚ್ ಮಾಡಿದೆ.


ನಟ ದರ್ಶನ್ ಬಳಗದಲ್ಲಿ ವಿನೋದ್ ಪ್ರಭಾಕರ್ ತುಂಬಾನೆ‌ ಆಪ್ತರು. ವಿನೋದ್ ಪ್ರಭಾಕರ್ ಅಭಿನಯದ ಸಿನಿಮಾಗಳಿಗೆ ದರ್ಶನ್ ಆರಂಭದಿಂದಲೂ ಸಾಥ್ ನೀಡುತ್ತಾ ಬಂದಿದ್ದು, ಈಗ ರಾಬರ್ಟ್ ನಲ್ಲೂ ಒಟ್ಟಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ‌ ನೀಡಲು ಮುಂದಾಗಿದ್ದಾರೆ.

ಈ ನಡುವೆಯೇ ಹುಟ್ಟು ಆಚರಿಸಿಕೊಳ್ಳುತ್ತಿರುವ ವಿನೋದ್ ಪ್ರಭಾಕರ್ ಅವರಿಗೆ ದರ್ಶನ್ ಆ್ಯಂಡ್ ಟೀಮ್ ಫಸ್ಟ್ ಲುಕ್ ಕೊಡುಗೆ ನೀಡಿರುವುದು ವಿಶೇಷ. ಇದೇ ರೀತಿ ಶ್ಯಾಡೋ ಹಾಗೂ ಪೈಟರ್ ಚಿತ್ರ ತಂಡಗಳು ಕೂಡ ನಟ ವಿನೋದ್ ಪ್ರಭಾಕರ್ ಅವರಿಗೆ ತಮ್ಮ ಚಿತ್ರಗಳ ಸ್ಪೆಷಲ್ ಪೋಸ್ಟರ್ ಕೊಡುಗೆನೀಡಿವೆ.

Related Posts

error: Content is protected !!