ಸನಿಹ ನೀ ಇರುವಾಗ ಸಲುಗೆಯ ಅನುರಾಗ…
ಈಗ ಸಿನಿಮಾಗಳದ್ದೇ ಸುದ್ದಿ. ಅದರಲ್ಲೂ ಹಾಡುಗಳ ಬಿಡುಗಡೆ ಪರ್ವ. ಆ ಸಾಲಿಗೆ ಈಗ “ರಿಚ್ಚಿ” ಸಿನಿಮಾ ಸೇರಿದೆ. ಇತ್ತೀಚೆಗೆ ಚಿತ್ರದ ಹಾಡೊಂದು ಹೊರಬಂದಿದೆ. ನಾಯಕ ರಿಚ್ಚಿ ಹಾಗೂ ನಿಷ್ಕಲ ಜೋಡಿಯಾಗಿ ಕಾಣಿಸಿಕೊಂಡಿರುವ “ರಿಚ್ಚಿ” ಚಿತ್ರಕ್ಕೆ ರಿಚ್ಚಿ ನಟನೆ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ನಿರ್ದೇಶನ ಮಾಡಿರವ ರಿಚ್ಚಿ, ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಇನ್ನು, ಈ ಚಿತ್ರಕ್ಕೆ ಅಗಸ್ತ್ಯ ಸಂತೋಷ್ ಸಂಗೀತ ನೀಡಿದ್ದಾರೆ.
ಸೋನು ನಿಗಂ ಈ ಹಾಡಿಗೆ ಧ್ವನಿಯಾಗಿದ್ದಾರೆ. ಚಿನ್ನಿ ಪ್ರಕಾಶ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. “ಸನಿಹ ನೀ ಇರುವಾಗ ಸಲುಗೆಯ ಅನುರಾಗ…” ಹಾಡಲ್ಲಿ ನಾಯಕ ರಿಚ್ಚಿ ಮತ್ತು ನಿಷ್ಕಲ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ವಿನೋದ್ ಅವರ ಸಾಹಿತ್ಯವಿದೆ. ಬಹುತೇಕ ಕೊಡಗು ಸುತ್ತಮುತ್ತ ಈ ಹಾಡನ್ನು ಚಿತ್ರೀಕರಿಸಲಾಗಿದೆ. ವೀರೇಶ್ ಛಾಯಾಗ್ರಹಣವಿರು ಈ ಚಿತ್ರದಲ್ಲಿ ಸಸ್ಪೆನ್ಸ್ ಅಂಶಗಳೇ ಹೆಚ್ಚಾಗಿವೆ.
ಹೀರೋ ರಿಚ್ಚಿ ಚಿತ್ರದಲ್ಲಿ ಪತ್ರಕರ್ತನ ಪಾತ್ರ ನಿರ್ವಹಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಥಾಹಂದರವಿದ್ದು, ನಾಯಕ ಇಲ್ಲಿ ಒಂದು ರಿಸ್ಕ್ನಲ್ಲಿ ಸಿಲುಕಿಕೊಂಡು ಆ ಬಳಿಕ ಹೇಗೆ ಹೊರಬರುತ್ತಾನೆ ಅನ್ನೋದೇ ಕಥೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಶೇ.೭೦ ರಷ್ಟು ಬೆಂಗಳೂರು ಹಾಗೂ ಕೊಡಗಿನಲ್ಲಿ ಚಿತ್ರೀಕರಿಸಲಾಗಿದೆ.
ಚಿತ್ರಕ್ಕೆ ಮಂಜು ಸಹ ನಿರ್ದೇಶನವಿದೆ. ಅರ್ಜುನ್ ಕಿಟ್ಟು ಅವರ ಸಂಕಲನವಿದೆ. ಪುರುಷೋತ್ತಮ್ ಕಲಾ ನಿರ್ದೇಶನವಿದೆ. ವಿಕ್ರಮ್ ಅವರ ಸಾಹಸಿವೆ. ಪ್ರಕಾಶ್ರಾವ್ ಸಹ ನಿರ್ಮಾಣವಿದೆ. ಚಿತ್ರದಲ್ಲಿ ಮನೋಜ್ ಮಿಶ್ರ, ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ ಇತರರು ನಟಿಸಿದ್ದಾರೆ.