ಇದು ಸೋನಾಲ್ ಶುಗರ್ ಫ್ಯಾಕ್ಟರಿ!

ಹೊಸ ಚಿತ್ರ ಒಪ್ಪಿದ ಮಾಂತೆರೊ

ಸೋನಾಲ್

ಅಮೂಲ್ಯ ಸಹೋದರ ದೀಪಕ್ ಅರಸ್ ಈ ಹಿಂದೆ ‘ಮನಸಾಲಜಿ’ ಎಂಬ ಸಿನಿಮಾ ಮಾಡಿದ್ದು ಗೊತ್ತೇ ಇದೆ. ಈಗ ತುಂಬ ಗ್ಯಾಪ್ ಬಳಿಕ ಅವರೊಂದು “ಶುಗರ್ ಫ್ಯಾಕ್ಟರಿ” ಶುರುಮಾಡಿದ್ದಾರೆ.
ಹೀಗಂದಾಕ್ಷಣ, ದೀಪಕ್ ಶುಗರ್ ಫ್ಯಾಕ್ಟರಿ ಇಟ್ಟುಕೊಂಡರಾ ಎಂಬ ಅನುಮಾನ ಬೇಡ. ಗ್ಯಾಪ್ ನಂತರ ಅವರೀಗ “ಶುಗರ್ ಫ್ಯಾಕ್ಟರಿ” ಹೆಸರಿನ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ಈ ಸಿನಿಮಾಗೆ “ಡಾರ್ಲಿಂಗ್” ಕೃಷ್ಣ ಹೀರೋ. ಅವರಿಗೆ ಸೋನಲ್ ಮಾಂತೆರೊ ನಾಯಕಿಯಾಗಿದ್ದಾರೆ.
ಇದೊಂದು ಫನ್ ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಚಿತ್ರ. ತಮ್ಮ ಎರಡನೇ ಸಿನಿಮಾಗೆಬಕೈ ಹಾಕಿರುವ ದೀಪಕ್‌ ಅರಸ್,
ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಬಹದ್ದೂರ್ ಚೇತನ್ ಸಂಭಾಷಣೆ ಬರೆಯುತ್ತಿದ್ದಾರೆ. ಇನ್ನು,.
ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಗಿರೀಶ್ ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌
ಜನವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ನಂತರ ಹಂತಹಂತವಾಗಿ ಗೋವಾ, ಮೈಸೂರು ಹಾಗೂ ಅಬ್ರಾಡ್ ನಲ್ಲಿ ಚಿತ್ರೀಕರಣ ಸಾಗಲಿದೆ.
ಆರು ಹಾಡುಗಳಿಗೆ ಕಬೀರ್ ರಫಿ ಸಂಗೀತ ನೀಡುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ.
ಡಾರ್ಲಿಂಗ್ ಕೃಷ್ಣ ಅವರಿಗೆ ಮೂವರು ನಾಯಕಿಯರಿದ್ದು, ಸದ್ಯ ಸೋನಾಲ್ ಮಾಂತೆರೊ ಮೊದಲ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನಿಬ್ಬರು ನಾಯಕಿಯರು ಸೇರಿದಂತೆ ಉಳಿದ ತಾರಾಬಳಗದ ಸುದ್ದಿ ಸದ್ಯದಲ್ಲೇ ಹೊರಬೀಳಲಿದೆ.

Related Posts

error: Content is protected !!