ಜೆಕೆ ಮತ್ತೆ ಬಂದ್ರು

ಅವರೀಗ ಐರಾವನ್ ಸಿನ್ಮಾ ಹೀರೋ

ಕನ್ನಡದಲ್ಲಿ ಹಲವು ಸಿನಿಮಾ ಮೂಲಕ ಗುರುತಿಸಿಕೊಂಡಿದ್ದರೂ, ಕಿರುತೆರೆ ಮೂಲಕ ಸುದ್ದಿಯಾದ ನಟ ಜೆಕೆ (ಜಯರಾಮ್‌ ಕಾರ್ತಿಕ್)‌ ಈಗ ಮತ್ತೊಂದು ಹೊಸ ಸಿನಿಮಾ ಮೂಲಕ ಸುದ್ದಿಯಾಗುತ್ತಿದ್ದಾರೆ. ಹೌದು, ಅವರ ಹೊಸ ಚಿತ್ರಕ್ಕೆ “ಐರಾವನ್‌” ಎಂದು ನಾಮಕರಣ ಮಾಡಲಾಗಿದೆ. ಇತ್ತೀಚೆಗೆ ಗವಿಪುರಂನಲ್ಲಿರುವ ಕಾಲಭೈರವನ ಸನ್ನಿಧಿಯಲ್ಲಿ ನೂತನ ಚಿತ್ರ ಆರಂಭಗೊಂಡಿದೆ. “ನಿರಂತರ” ಗಣೇಶ್‌ ಅವರು ಕ್ಲಾಪ್‌ ಮಾಡುವ ಮೂಲಕ ಸಿನಿಮಾಗೆ ಚಾಲನೆ ಕೊಟ್ಟರು. ಇನ್ನು, ಈ ಸಂದರ್ಭದಲ್ಲಿ ತುಮಕೂರಿನ ಶ್ರೀಸಾಗರ ಮಹಾಸ್ವಾಮಿಗಳು ಕ್ಯಾಮೆರಾಗೆ ಚಾಲನೆ ನೀಡಿದರು.

ಈ ಚಿತ್ರವನ್ನು ನಿರಂತರ ಗಣೇಶ್ ಅವರು ತಮ್ಮ ನಿರಂತರ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸುತ್ತಿದ್ದಾರೆ. ರಾಮ್ಸ್ ರಂಗಾ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಕನ್ನಡದ ಹಲವು ಚಿತ್ರಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ರಾಮ್ಸ್ ರಂಗಾ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿದ್ದು, ಬೆಂಗಳೂರು ಮತ್ತು ಮಂಗಳೂರು ಸುತ್ತಮುತ್ತ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಎಸ್. ಪ್ರದೀಪ್ ವರ್ಮ ಸಂಗೀತವಿದೆ. ಚಿತ್ರಕ್ಕೆ ದೇವೇಂದ್ರ ಛಾಯಾಗ್ರಹಣ ಮಾಡಿದರೆ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಅರ್ಜುನ್ ಸಾಹಸ ನಿರ್ದೇಶನ ಹಾಗೂ ವಲ್ಲಭ ಅವರ ನಿರ್ಮಾಣ ನಿರ್ವಹಣೆಯಿದೆ ಚಿತ್ರಕ್ಕೆ ಇದೆ. ಚಿತ್ರದಲ್ಲಿ ವಿವೇಕ್, ಅದ್ವಿತಿ ಶೆಟ್ಟಿ, ಅವಿನಾಶ್, ಕೃಷ್ಣ ಹೆಬ್ಬಾರ್ ಇತರರು ಇದ್ದಾರೆ.

Related Posts

error: Content is protected !!