ಆಕಾಶವಾಣಿ ಡಬ್ಬಿಂಗ್‌ ಕಂಪ್ಲೀಟ್‌

ನಿರೀಕ್ಷೆ ಹೆಚ್ಚಿಸಿದ ಹೊಸಬರ ಚಿತ್ರ

ಕನ್ನಡದಲ್ಲಿ ಒಂದಷ್ಟು ಸಿನಿಮಾಗಳು ಗಮನಸೆಳೆಯುತ್ತಿರುವುದು ಗೊತ್ತೇ ಇದೆ. ಅದರಲ್ಲೂ ಹೊಸಬರಂತೂ ತಮ್ಮ ಚಿತ್ರಗಳಿಗೆ ವಿಭಿನ್ನ ಸಿನಿಮಾ ಶೀರ್ಷಿಕೆ ಮೂಲಕವೇ ಗಮನಸೆಳೆಯುತ್ತಿದ್ದಾರೆ. ಆ ಸಾಲಿಗೆ “ಇದು ಆಕಾಶವಾಣಿ ಬೆಂಗಳೂರು ನಿಲಯ” ಸಿನಿಮಾ ಕೂಡ ಸೇರಿದೆ. ತನ್ನ ಶೀರ್ಷಿಕೆಯಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಮೇಲೆ ನಿರೀಕ್ಷೆಯೂ ಇದೆ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಡಬ್ಬಿಂಗ್‌ ಕೂಡ ಮುಗಿಸಿದೆ. ಕಮಲಾನಂದ ಚಿತ್ರಾಲಯ ಸಂಸ್ಥೆಯಡಿ ಶಿವಾನಂದಪ್ಪ ಬಳ್ಳಾರಿ (ಮಿಸ್ಟರ್ ಎಇಜಿ) ಹಾಗೂ ಅವರ ಒಂದಷ್ಟು ಗೆಳೆಯರು ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಬೆಂಗಳೂರು, ತಿಪಟೂರು ಹಾಗೂ ನೊಣವಿನಕೆರೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.


ಇತ್ತೀಚೆಗೆ ಚಿತ್ರದ ಡಬ್ಬಿಂಗ್ ಮುಗಿಸಿರುವ ಚಿತ್ರತಂಡ, ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಈ ಹಿಂದೆ “ನಾವೇ ಭಾಗ್ಯವಂತರು” ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಎಂ. ಹರಿಕೃಷ್ಣ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಇದೊಂದು ವಿಭಿನ್ನವಾದ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ಆಗಿದ್ದು, ಚಿತ್ರಕ್ಕೆ ಸುಮ್‌ ಸುಮ್ನೆ ವಿಜಯಕುಮಾರ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಎ.ಟಿ.ರವೀಶ್‌ ಸಂಗೀತವಿದೆ. ಆಂಟೋನಿ ಎಂ, ಶಿವರಾಜ್‍ಗುಬ್ಬಿ ಅವರ ಸಾಹಿತ್ಯವಿದೆ. ಪ್ರವೀಣ್ ಶೆಟ್ಟಿ ಅವರ ಛಾಯಾಗ್ರಹಣ, ಪವನ್‍ಗೌಡ ಅವರ ಸಂಕಲನ, ಕಂಬಿರಾಜು ಅವರ ನೃತ್ಯ ನಿರ್ದೇಶನವಿದೆ. ನಿಖಿತಸ್ವಾಮಿ, ರಣ್‌ವೀರ್
‌ ಟೀಲ್, ಸುಚೇಂದ್ರ ಪ್ರಸಾದ್, ಟೆನ್ನಿಸ್ ಕೃಷ್ಣ, ಎಸ್.ನಾರಾಯಣಸ್ವಾಮಿ, ದಿವ್ಯಶ್ರೀ (ಕಾಮಿಡಿ ಕಿಲಾಡಿಗಳು) ಮುಂತಾದವರ ತಾರಾಬಳಗವಿದೆ. ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರದ್ದು.

Related Posts

error: Content is protected !!