ಸಂಚಾರಿ,ಕಮಾಂಡರ್ ಎಂಬ ಅತಿಥಿ ಅವತಾರಿ!

ಆಕ್ಟ್ 1978′ ಪಕ್ಕಾ ಮಾಸ್ ಸಿನಿಮಾ- ಸಂಚಾರಿ  ವಿಜಯ್ ವಿಶ್ವಾಸ

ಸಂಚಾರಿ ವಿಜಯ್ ಈಗ ಎನ್ ಎಸ್ ಜಿ ಕಮಾಂಡರ್. ಹೌದು , ಇದು ಅವರ ಹೊಸ ಅವತಾರ. ‘ಆಕ್ಟ್ 1978′ ಜಾರಿಗೆ ಅಂತ ಕಮಾಂಡರ್ ರೂಪದಲ್ಲಿ ಗಾಂಧಿನಗರಕ್ಕೆ ಅವರು ಹೊಸದಾಗಿ ಎಂಟ್ರಿ ಆಗುತ್ತಿದ್ದಾರೆ. ಆದರೆ, ಸರ್ಕಾರಿ ಸೇವೆಗಾಗಿ ಅವರು ಇಂತಹ ಯೂನಿಫಾರ್ಮ್ ಹಾಕಿರುವುದು ಇದು ಮೊದಲಲ್ಲ.‌‌’ಕಿಲ್ಲಿಂಗ್ ವೀರಪ್ಪನ್’ ಚಿತ್ರದಲ್ಲಿ ಎಸ್ ಟಿ ಎಫ್ ಇನ್ಸೆಸ್ಪೆಕ್ಟರ್ ಆಗಿದ್ದರು. ಆದಾದ‌ ನಂತರ ‘ಜಂಟಲ್ ಮೆನ್’ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಆಗಿ ಮಿಂಚಿದ್ದರು. ಇದೀಗ ಎನ್ ಎಸ್ ಜಿ ಕಮಾಂಡರ್.

ಆಕ್ಟ್ 1978 ನ ಅವತಾರ !

ಅಂದ ಹಾಗೆ, ಇದು ಬಹುನಿರೀಕ್ಷಿತ ‘ಆಕ್ಟ್ 1978’ ಚಿತ್ರದಲ್ಲಿನ ಅವರ ಹೊಸ ಅವತಾರ . ಕನ್ನಡದ ಪ್ರತಿಭಾವಂತ ನಿರ್ದೇಶಕ ಮಂಸೋರೆ ನಿರ್ದೇಶನದ ಚಿತ್ರವಿದು. ಈಗಾಗಲೇ ಟ್ರೇಲರ್ ಮೂಲಕ ಭಾರೀ ಕುತೂಹಲ ಮೂಡಿಸಿದೆ. ನವೆಂಬರ್ 20 ಕ್ಕೆ ರಿಲೀಸ್ ಆಗುತ್ತಿದೆ.


ಲಾಕ್ ಡೌನ್ ನಂತರ ಚಿತ್ರ ಮಂದಿರದಲ್ಲಿ ತೆರೆ ಕಾಣುತ್ತಿರುವ ಮೊದಲ ಕನ್ನಡ ಚಿತ್ರ. ಕನ್ನಡ ಮಾತ್ರವಲ್ಲ ದಕ್ಷಿಣ ಭಾರತದಲ್ಲೆ ಮೊದಲು. ಈ ಮೂಲಕ ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರಗಳ ರಿಲೀಸ್ ಮೆರವಣಿಗೆ ಶುರುವಾಗುತ್ತಿದೆ. ಕತೆ ಮತ್ತು ಮೇಕಿಂಗ್ ಕಾರಣಕ್ಕೆ ಸುದ್ದಿಯಾಗಿರುವ ಹಾಗೆಯೇ ಚಿತ್ರದಲ್ಲಿನ ದೊಡ್ಡ ತಾರಾಗಣವೇ ಇಲ್ಲಿನ‌ ಪ್ರಮುಖ‌ ಆಕರ್ಷಣೆ. ಅಷ್ಟು ಕಲಾವಿದರ ಜತೆಗೆ ಮತ್ತಷ್ಟು ಕುತೂಹಲ ಇರುವುದು ನಟ ಸಂಚಾರಿ ವಿಜಯ್ ಪಾತ್ರ ಬಗ್ಗೆ.

ಬಿಕ್ಕಟ್ಟಿನ ಸಂದರ್ಭಕ್ಕೆ ಎಂಟ್ರಿ…

‘ ಇದೊಂದು‌ ದೊಡ್ಡ ಕಲಾವಿದರ ಸಮಾಗಮದ ಚಿತ್ರ.‌ ಅಂದ್ರೆ ಸಾಕಷ್ಟು ಜನ ಕಲಾವಿದರು ಇಲ್ಲಿದ್ದಾರೆ. ಅಷ್ಟು ಪಾತ್ರಗಳಿಗೂ‌ ಸರಿ‌ ಸಮಾನದ ಪ್ರಾಮುಖ್ಯತೆ ಸಿಕ್ಕಿದೆ ಅನ್ನೋದು ಅದರ ಇನ್ನೊಂದು ವಿಶೇಷ. ಅಂತಹ ಪಾತ್ರಗಳ ಪೈಕಿ ಎನ್ ಎಸ್ ಜಿ ಕಮಾಂಡರ್ ಪಾತ್ರವು ಒಂದು. ಇದು ಚಿತ್ರದಲ್ಲಿನ ಗೆಸ್ಟ್ ರೋಲ್. ಇದಕ್ಕೆ ಬಣ್ಣ ಹಚ್ಚಿರುವುದು ನನ್ನ ಅದೃಷ್ಟ. ಒಂದು ಕ್ರೂಷಿಯಲ್ ಸಂದರ್ಭದಲ್ಲಿ ಕಮಾಂಡರ್ ಎಂಟ್ರಿ ಆಗುತ್ತೆ. ಬಿಕ್ಕಟ್ಟಿನ ಪರಿಸ್ಥಿತಿ ನಿಭಾಯಿಸಲು ಸರ್ಕಾರವೇ ಅಲ್ಲಿಗೆ ನನ್ನನ್ನು ನೇಮಕ‌ಮಾಡಿರುತ್ತದೆ.‌ ಆದರೆ ಅಲ್ಲಿಗೆ ಬಂದಾಗ ಪೊಲೀಸ್ ಇನ್ಸೆಸ್ಪೆಕ್ಟರ್ ‌ಪ್ರಮೋದ್ ಶೆಟ್ಟಿ ಮತ್ತು ನನಗೆ ಒಂದಷ್ಟು‌ಜಟಾಪಟಿ‌ ನಡೆಯುತ್ತೆ‌. ಅಲ್ಲಿನ ಸಂಭಾಷಣೆ ಅದ್ಬುತವಾಗಿದೆ. ಅದ್ಯಾಕೆ ಅನ್ನೊದು ಸಿನಿಮಾದ ಸಸ್ಪೆನ್ಸ್’ ಎನ್ನುತ್ತಾರೆ ನಟ‌ ಸಂಚಾರಿ ವಿಜಯ್.

ಮಂಸೋರೆ ಬದಲಾಗಿದ್ದು ಕಂಡೆ..

ಸಂಚಾರಿ ವಿಜಯ್ ಹಾಗೂ ನಿರ್ದೇಶಕ ಮಂಸೋರೆ ಮತ್ತೊಮ್ಮೆ ಒಂದಾಗಿರುವುದು‌ ಇಲ್ಲಿನ ಮಗದೊಂದು ವಿಶೇಷ. ಯಾಕಂದ್ರೆ ಅವರಿಬ್ಬರದು ಭಲೇ ಜೋಡಿ.‌ ಚೊಚ್ಚಲ ಸಿನಿಮಾದಿಂದಲೇ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾದರು.‌ಸಿನಿ‌ದುನಿಯಾದಲ್ಲಿ ಜೊತೆಯಾಗಿ ಸಾಗಿ ಬರುತ್ತಿದ್ದಾರೆ. ಒಂದು ಹಂತದಲ್ಲಿ ಬದ್ದತೆಗೆ ಕಟ್ಟು ಬಿದ್ದು ಬದಲಾಗದೆ ಉಳಿದವರು ಈಗ ಬದಲಾಗಿದ್ದಾರೆ. ಸಂಚಾರಿ ವಿಜಯ್ ಕಮಾಂಡರ್ ಆಗಿದ್ದು ಕೂಡ ಹಾಗೆಯೆ.‌ಅದರಾಚೆ ಮಂಸೋರೆ ಕೂಡ ಕ್ಲಾಸ್ ಆಚೆ ಮಾಸ್ ಸಿನಿಮಾ ‌ಮಾಡಿದ್ದೇನೆಂದು ಹೇಳುತ್ತಿರುವುದು ಕೂಡ ಹಾಗೆಯೆ. ಹಾಗಾದ್ರೆ ಆ ಬದಲಾವಣೆ ಏನು? ಆ ಬಗ್ಗೆ ಸಂಚಾರಿ ವಿಜಯ್ ಕಂಡಿದ್ದೇನು?

ಪಕ್ಕಾ ಕಮರ್ಷಿಯಲ್  ಸಿನಿಮಾ‌..

‘ ಮಂಸೋರೆ ಸಿ‌ನಿ‌ಜರ್ನಿಯಲ್ಲಿ ಆಕ್ಟ್ ೧೯೭೮ ಮಹತ್ತರವಾದ ಸಿನಿಮಾ. ಅದಕ್ಕೆ ಕಾರಣ ಹಲವು.‌ಕತೆ, ಅದರ ಮೇಕಿಂಗ್ ಶೈಲಿ ಇತ್ಯಾದಿ. ‘ಹರಿವು’ ಸಿನಿಮಾದಿಂದಲೂ ಪರಸ್ಪರ ಒಟ್ಟಿಗೆ ಕೆಲಸ‌ಮಾಡುತ್ತಾ ಬಂದಿದ್ದೇವೆ. ಅವರ ಸಿನಿಮಾ‌ ಮೇಕಿಂಗ್ ಶೈಲಿ ಎಂಥದ್ದು ಅಂತ‌ ನಂಗೊತ್ತು.‌ಹಾಗೆಯೇ ನನ್ನ ಆ್ಯಕ್ಟಿಂಗ್ ಟೆಸ್ಟ್ ಹೇಗೆ ಆಂತಲೂ‌ಅವರಿಗೆ ಗೊತ್ತು.‌ಆ ದೃಷ್ಟಿಯಲ್ಲಿ ನಾನಿಲ್ಲಿ ಸಾಕಷ್ಡು ಬದಲಾವಣೆ ಕಂಡಿದ್ದೇನೆ. ಅವರ ತಮ್ಮ ಮಾಮೂಲು ಶೈಲಿಯನ್ನು‌ಮೀರಿ‌ ಒಂದಷ್ಟು ಸಿನಿಮ್ಯಾಟಿಕ್ ರೂಪ ಬಳಸಿದ್ದಾರೆ. ಹಾಗೆಯೇ ಬಡ್ಜೆಟ್ ನಲ್ಲೂ‌ ರಾಜಿಯಾಗದೆ ಕತೆಯ ಡಿಮ್ಯಾಂಡ್ ಅನುಸಾರ ಸಿನಿಮಾ‌ ಮಾಡಿದ್ದಾರೆ.‌ಆದ್ದರಿಂದಲೇ ದೊಡ್ಡ ಮಟ್ಟದ ಸೆಟ್ ಹಾಕಿ‌ ಸಿನಿಮಾ‌ ಮಾಡಲು ಸಾಧ್ಯವಾಗಿದೆ. ಪಾತ್ರಗಳ ದಂಡೇ ಇಲ್ಲಿದ್ದರೂ, ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ‌ಸಿಗುವಂತೆ ಚಿತ್ರಕತೆ ಹೆಣೆದಿದ್ದಾರೆ. ಥ್ರಿಲ್ಲರ್ ಎಲಿಮೆಂಟ್ ಸಿನಿಮಾ‌ದೊಡ್ಡ‌ಶಕ್ತಿ‌ಆಗಿದೆ. ಹಾಗೆಯೇ ತಾಂತ್ರಿಕತೆ ಯಲ್ಲೂ ಯಾವುದೇ ರೀತಿ ರಾಜಿ ಆಗಿಲ್ಲ. ಇದೆಲ್ಲ‌ಮಾಸ್ ಸಿನಿಮಾವೊಂದರ ಸ್ಟೈಲ್ ಅಂತಾರೆ‌ ನಟ ಸಂಚಾರಿ‌ವಿಜಯ್.

Related Posts

error: Content is protected !!