ಕಾಗೆ ಹಾರಿಸಿ ಹೋದ್ಲು ಮಾಮ
ಕೈಗೆ ಸಿಗದೇ ಹೋಯ್ತು ಪ್ರೇಮ…
– ಹೀಗೆ ಶುರುವಾಗುವ ವಿಡಿಯೋ ಸಾಂಗ್ ಈಗ ಲೋಕಾರ್ಪಣೆಗೊಂಡಿದೆ. ಲಹರಿ ಮ್ಯೂಸಿಕ್ ಸಂಸ್ಥೆಯಿಂದ ಹೊರಬಂದಿರುವ ಮೊಟ್ಟಮೊದಲ ಮ್ಯೂಸಿಕ್ ವಿಡಿಯೋ ಇದಾಗಿದೆ. ಇದರ ಹೆಸರು ‘ಲವ್ ಗುರು’ . ಶುಕ್ರವಾರ ಸಂಜೆ ಮಲ್ಲೇಶ್ವರಂ ನ ರೇಣುಕಾಂಬ ಸ್ಟುಡಿಯೋ ದಲ್ಲಿ ಈ ಹಾಡು ಪ್ರದರ್ಶನ ಗೊಂಡಿತು.
ಈ ಹೆಸರು ಕೇಳಿದಾಕ್ಷಣ ತರುಣ್ ಚಂದ್ರ ನಟನೆಯ ಲವ್ ಗುರು ಸಿನಿಮಾ ನೆನಪಾದ್ರೂ ಅಚ್ಚರಿ ಇಲ್ಲ.ಹಾಗಂತ ಅದಕ್ಕೂ ಇದಕ್ಕೂ ಏನಾದ್ರೂ ಕನೆಕ್ಷನ್ ಉಂಟಾ ಅಂತ ನಿಮಗನಿಸಿದರೂ, ಅದೇನು ತಪ್ಪಲ್ಲ. ಯಾಕಂದ್ರೆ , ಅವರೆಡಕ್ಕೂ ಕನೆಕ್ಷನ್ ಇದೆ.ಲವ್ ಗುರು ಖ್ಯಾತಿಯ ನಟ ತರುಣ್ ಇದರ ಪ್ರಮುಖ ಆಕರ್ಷಣೆ. ಆ ಮೂಲಕ, ತರುಣ್ ಮತ್ತೆ ಬಣ್ಣ ಹಚ್ವಿ ಬಣ್ಣದ ಲೋಕಕ್ಕೆ ಬಂದಿದ್ದಾರೆ.
ತರುಣ್ ಅವರ ಮಿತ್ರ ಹಾಗೂ ನಿರ್ಮಾಪಕ ಗಣೇಶ್ ಪಾಪಣ್ಣ ಈ ವಿಡಿಯೋ ಸಾಂಗ್ ನಿರ್ದೇಶಕರು. ಲಹರಿ ಮ್ಯೂಜಿಕ್ ಒರಿಜಿನಲ್ ಇದರ ನಿರ್ಮಾಣ ಸಂಸ್ಥೆ.
ಎಲ್ವಿನ್ ಜೋಷ್ವಾ ಸಂಗೀತ ನೀಡಿದ್ದಾರೆ. ಕೆಜಿಎಫ್ ಚಿತ್ರ ಖ್ಯಾತಿಯ ಖಳ ನಟ ಲಕ್ಕಿಲಕ್ಣ್ಮಣ್ ಈ ಆಲ್ಬಂಮೂಲಕ ಗಾಯಕರಾಹಿಯೂ ಪರಿಚಯವಾಗುತ್ತಿದ್ದಾರೆಹೆಸರಾಂತ ಮಾಡೆಲ್ ಹಾಗೂ ಬಾಲಿವುಡ್ ನಟಿ ನುತಶ್ರೀ ಜಗತಪ್ ಈ ಹಾಡಿನಲ್ಲಿ ನಟಿಸಿದ್ದಾರೆ. ಆಲ್ಬಂ ಲಾಂಚ್ ಗೆ ಅವರು ಗೈರಾಗಿದ್ದರು.
‘ ಅವರ ಹಾಜರಿ ಎಂಟು ಸೆಕೆಂಡುಗಳಷ್ಟೇ ಇತ್ತು. ಆದರೂ ಅವರು ಬೆಂಗಳೂರಿಗೆ ಬಂದು ಖುಷಿಯಿಂದ ಶೂಟಿಂಗ್‌ನಲ್ಲಿ ಪಾಲ್ಗೊಂಡರು. ಅಷ್ಟು ದೂರದಿಂದ ಬಂದರು ಎನ್ನುವ ಕಾರಣಕ್ಕೆ ಮತ್ತೆ ಎಂಟು ಸೆಕೆಂಡುಗಳನ್ನು ಹೆಚ್ಚಿಗೆ ಮಾಡಿದ್ದೇನೆ ‘ ಅಂತ ನಿರ್ದೇಶಕ ಗಣೇಶ್ ಪಾಪಣ್ಣ ಹೇಳಿದರು. ‘ಫ್ರೆಂಚ್ ಬಿರಿಯಾನಿ ‘ಚಿತ್ರದಲ್ಲಿ ಮಸಲ್ ಮಣಿ ಈ ಆಲ್ಬಂ ನಲ್ಲಿದ್ದಾರೆ. ನಟ ತರುಣ್ ಹಾಜರಿದ್ದರು.
ಲಹರಿ ಮ್ಯೂಸಿಕ್ ಸಂಸ್ಥೆಯ ನವೀನ್ ಮನೋಹರನ್ ಈ ಒರಿಜಿನಲ್ ಆಲ್ಬಂ ಅನ್ನು ನಿರ್ಮಾಣ ಮಾಡಿದ್ದಾರೆ. ಗೌಸ್ ಪೀರ್ ಬರೆದಿರುವ ಹಾಡಿಗೆ ಎಲ್ವಿನ್ ಜೋಷ್ವಾ ಸಂಗೀತ, ಆರ್.ಜೆ. ರಘು ನೃತ್ಯ ನಿರ್ದೇಶನ, ಅರುಣ್ ರಾಚಪುಟಿ ಛಾಯಾಗ್ರಹಣವಿದೆ.