ಪಲ್ಸ್‌ ರೆಕಾರ್ಡಿಂಗ್‌ ಸ್ಟುಡಿಯೋ ಶುರು ಮಾಡಿದ ಪಳನಿಸೇನಾಪತಿ

ಶಿಷ್ಯ ಟೂಲ್ಸ್‌ ಬಂದಿದೆ, ಪಲ್ಸ್‌  ಕೂತಿದೆ ಶುರು ಹಚ್ಚು ಅಂದ್ರು  ಹಂಸಲೇಖ 

ಟೂಲ್ಸ್‌  ಬಂದಿದೆ, ಪಲ್ಸ್ ಕೂತಿದೆ. ಟೂಲ್ಸ್ ಆ್ಯಂಡ್ ಫಲ್ಸ್ ಉತ್ತಮವಾಗಿದೆ. ಇನ್ನೇಕೆ ತಡ ಎಲ್ಲವೂ ಸರಿ ಹೋಗ್ತಿದೆ..!

– ಸಂಗೀತ ನಿರ್ದೇಶಕ ಹಂಸಲೇಖ ಇಷ್ಟು ಹೇಳಿದ್ದೇ ತಡ ಅಲ್ಲಿದ್ದವರು ಜೋರಾಗಿ ನಕ್ಕು , ಸಂಭ್ರಮಿಸಿದರು.

ಇದು ಆಗಿದ್ದು ಸಂಗೀತ ನಿರ್ದೇಶಕ ಪಳನಿ ಸೇನಾಪತಿ ಅವರ ಪಲ್ಸ್ ರೆಕಾರ್ಡಿಂಗ್ ಸ್ಟುಡಿಯೋ ಉದ್ಘಾಟನೆ ಕಾರ್ಯಕ್ರಮದಲ್ಲಿ. ನಾದಬ್ರಹ್ಮ ಹಂಸಲೇಖ ಅವರ ಶಿಷ್ಯ ಪಳನಿ ಸೇನಾಪತಿ . ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ.ಈಗ ಅವರೇ ಸಂಗೀತ ನಿರ್ದೇಶಕ ರಾಗಿ ಹೊಸದೊಂದು ಸ್ಟುಡಿಯೋ ಆರಂಭಿಸಿದ್ದು ಗುರುವಾರ ಅದರ ಉದ್ಘಾಟನೆ ಹಂಸಲೇಖ ಬಂದಿದ್ದರು.

ಹಂಸಲೇಖ ಇರುವ ಕಡೆ ಆಡುಭಾಷೆಗೆ ಬರವಿಲ್ಲ.‌ಹಾಗೆಯೇ ಶಬ್ದಕ್ಕೂ ಬರವಿಲ್ಲ.‌ಮಾತು ಶುರು ಮಾಡಿದರೆ ನಗಿಸುವ, ಗಂಭೀರವಾಗಿ ಅಲೋಚಿಸುವಂತೆ ಮಾತನಾಡುವ ಕಲೆ ಅವರಿಗೆ ಸಿದ್ದಿಸಿದೆ.‌ಶಿಷ್ಯ ಪಳನಿಯವರ ’ಪಲ್ಸ್ ರೆರ್ಕಾಡಿಂಗ್ ಸ್ಟುಡಿಯೋ’ ಉದ್ಘಾಟಿಸಿ ಮಾತನಾಡಿದ ಅವರು, ಹೋಲ್ಡ್ ದಿ ಪಲ್ಸ್, ಲಿಸನ್ ದಿ ಮ್ಯೂಸಿಕ್. ಸೌಂಡ್ ಆಫ್ ಮ್ಯೂಸಿಕ್ ಇದೆ. ಸೌಂಡ್ ಆಫ್ ರುಪಿ ಬೇಕು. ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಮಾಡುವ ಜಾಣತನ ಬೇಕಾಗಿದೆ. ನಮ್ಮ ಸಿನಿಮಾಗಳನ್ನು ಹೇಗೆ ಮಾರ್ಕೆಟ್ ಮಾಡಿಸಬೇಕು. ಇವತ್ತು ಉತ್ಪಾದನೆ ಇಷ್ಟು. ಮಾರಾಟ ಆಗುವ ಜಾಗಗಳು ಅಷ್ಟು. ಹುಷಾರಾಗಿ ಮಾರಾಟ ಮಾಡಿ ದುಡ್ಡು ತೆಗದುಕೊಳ್ಳಬೇಕಿದೆ. ಟೂಲ್ಸ್ ಅಂಡ್ ಪಲ್ಸ್ ಉತ್ತಮವಾಗಿದೆ. ಅಂಥಾ ಪಲ್ಸ್ ಪಳನಿಗೆ ಒಳ್ಳೆಯದಾಗಲಿ ಎಂದರು.


ಪಳನಿಸೇನಾಪತಿ ಇಲ್ಲಿಯವರೆಗೂ ೧೦೦೦ಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನಲೆ ಶಬ್ದ ಒದಗಿಸಿ, ಇಂದು ಸಂಗೀತ ನಿರ್ದೇಶಕರಾಗಿದ್ದಾರೆ. ಪಲ್ಸ್ ಹೆಸರಲ್ಲಿ ಹೊಸದೊಂದು ರೆಕಾರ್ಡಿಂಗ್‌ ಸ್ಟುಡಿಯೋ ಶುರು ಮಾಡಿದ್ದು, ಆ ಬಗ್ಗೆ‌ಮಾತನಾಡಿದರು. ಹಿರಿಯ ನಿರ್ದೇಶಕ ಭಗವಾನ್, ಲಹರಿವೇಲು, ವಿ.ಮನೋಹರ್, ನಟ ವಿಜಯ್‌ಮಹೇಶ್, ನಿರ್ಮಾಪಕರುಗಳು ಶುಭಸಂದರ್ಭದಲ್ಲಿ ಹಾಜರಿದ್ದರು.

Related Posts

error: Content is protected !!