ಲಾಸ್ಟ್ ಸೀನ್ ಎಂಬ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಆಲ್ಬಂ

ನಾಲ್ಕು ಭಾಷೆಗಳಲ್ಲಿ ಬರುತ್ತಿದೆ ನೊಂದ ಹೆಣ್ಣಿನ ಗೀತೆ

ಬಣ್ಣದ ಜಗತ್ತಿನಲ್ಲೀಗ ಎಲ್ಲವೂ ಪ್ಯಾನ್ ಇಂಡಿಯಾ. ‘ಕೆಜಿಎಫ್’ ನಂತರ ಅದು ಸ್ಯಾಂಡಲ್ ವುಡ್ ನಲ್ಲೂ ದೊಡ್ಡ ಹವಾ ಸೃಷ್ಟಿಸಿದ್ದು ನಿಮಗೂ ಗೊತ್ತಿದೆ. ಅದರ ಪ್ರಭಾವವೇ ಎನ್ನುವ ಹಾಗೆ, ಮುಂಬರುವ ಅನೇಕ ಸಿನಿಮಾಗಳು ಪ್ಯಾನ್ ಇಂಡಿಯಾ ರಿಲೀಸ್ ಗೆ ಕಾದಿವೆ. ಸಿನಿಮಾ ಕತೆ ಇದಾದರೆ, ಈಗ ಆಲ್ಭಂ ಸಾಂಗ್ ಮೇಕಿಂಗ್ ನಲ್ಲೂ ಇದೇ ಟ್ರೆಂಡ್ ಶುರುವಾಗಿದೆ. ‌’ಲಾಸ್ಟ್ ಸೀನ್’ ಹೆಸರಿನ ಒಂದು‌ ವಿಡಿಯೋ‌ ಸಾಂಗ್ ಅಲ್ಬಂ ಈಗ ಅದೇ ಕಾರಣಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಮೊದಲು‌ ಕನ್ನಡದಲ್ಲಿ‌ ರಿಲೀಸ್..

ಅದ್ದೂರಿ ಸಿನಿಮಾ ಮಾದರಿಯಲ್ಲೆ ಇದು ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ‌ ನಿರ್ಮಾಣಗೊಂಡಿದೆ. ಅಷ್ಟು ಭಾಷೆಗಳಲ್ಲೂ ಹಂತ‌ಹಂತವಾಗಿ ಬಿಡುಗಡೆಯಾಗುತ್ತಿದೆ. ಇದರ ಮೊದಲ ಹಂತವಾಗಿ ಭಾನುವಾರ( ಸೆ.27) ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಇದರ ಕನ್ನಡದ ಆವತರಿಣಿಕೆ ಲಾಂಚ್ ಆಗಿದೆ. ಕನ್ನಡದ ಮಟ್ಟಿಗೆ ನಾಲ್ಕುವರೆ ನಿಮಿಷಗಳ ಒಂದು ವಿಡಿಯೋ ಸಾಂಗ್ ಆಲ್ಬಂ ಅದ್ದೂರಿ ವೆಚ್ವದಲ್ಲಿ‌ ನಿರ್ಮಾಣಗೊಂಡು, ಪ್ಯಾನ್ ಇಂಡಿಯಾ ಟ್ರೆಂಡ್ ಮೂಲಕ ಬಹು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ಒಂದು ಉತ್ಸಾಹಿ ಯುವಕರ ತಂಡ.

ಉತ್ಸಾಹಿ ಯುವಕರ ಪ್ರಯತ್ನ…

‘ಮಿ.ಬೀಜಾ’ ಹೆಸರಿನ ಕಿರುಚಿತ್ರದೊಂದಿಗೆ ಈಗಾಗಲೇ ಒಂದಷ್ಟು ಹೆಸರು ಮಾಡಿದ್ದ ಚಿತ್ರದುರ್ಗ ಮೂಲದ ಎನ್. ವಿನಾಯಕ , ರಚಿಸಿ- ನಿರ್ದೇಶಿರುವ ವಿಡಿಯೋ‌ ಸಾಂಗ್ ಆಲ್ಬಂ ಇದು.ವಿನು ಐಡಿಯಾ ಪ್ರೊಡಕ್ಷನ್ ಮೂಲಕ ನಿರ್ಮಾಣಗೊಂಡಿದೆ. ಹೊಸ ಪ್ರತಿಭೆಗಳಾದ ವಾಗೀಶ್ ಆಯುಷ್ ಹಾಗೂ ಸಂಗೀತಾ ಇದರ ಪ್ರಮುಖ ಕಲಾವಿದರು.ಪ್ರಮೋದ್ ಆಚಾರ್ಯ ಅವರ ಸಾಹಿತ್ಯಕ್ಕೆ ಜುಬೇರ್ ಮೊಹಮದ್ ಸಂಗೀತ ನೀಡಿದ್ದಾರೆ.ಮನು ಬಿ.ಕೆ‌.ಛಾಯಾಗ್ರಹಣ, ಕೃಷ್ಣ ಸುಜಾನ್ ಸಂಕಲನ ಮಾಡಿದ್ದಾರೆ.ವಾಸುಕಿ ವೈಭವ್ ಅವರ ಗಾಯನಕ್ಕೆ ಮೋಹನ್ ಜಾಕ್ಸನ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಅದ್ದೂರಿ ಮೇಕಿಂಗ್..

ಕನ್ನಡ ಹೊರತು ಪಡಿಸಿ ಉಳಿದ ಮೂರು ಭಾಷೆಗಳಿಗೆ ಗೌತಮ್ ಶಕ್ತಿ, ಜಯ ಚಂದ್ರ ಹಾಗೂ ರಾಜೇಶ್ ಅವರ ಸಾಹಿತ್ಯಕ್ಕೆ ಜುಬೇರ್ ಮೊಹಮದ್ ಅವರೇ ಸಂಗೀತ ಸಂಯೋಜಿಸುವ ಮೂಲಕ‌ ತಾವೇ ಹಾಡಿರುವುದು ವಿಶೇಷ. ಅತ್ಯಾಚಾರಕ್ಕೆ ಒಳಗಾದ ಒಬ್ಬ ಹುಡುಗಿಯ ನೋವು ಹಾಗೂ ಆಕೆಯ ನೋವಿನಲ್ಲಿ ಅವಳ ಪ್ರೇಮಿಯ ವೇದನೆ ಹೇಗಿರುತ್ತೆ ಎನ್ನುವ ಪರಿಕಲ್ಪನೆಯ ಮೇಲೆ ಈ ಹಾಡು ಮೂಡಿ‌ಬಂದಿದೆ. ನಾಲ್ಕುವರೆ ನಿಮಿಷಗಳ ಈ ವಿಡಿಯೋ ಸಾಂಗ್ ಆಲ್ಬಂ ಮೇಕಿಂಗ್ ನಲ್ಲಿ ತುಂಬಾ ರಿಚ್ ಆಗಿದೆ. ಒಂದು‌ ಅದ್ದೂರಿ ಸಿನಿಮಾ‌ದ ಹಾಡಿನ‌ ಹಾಗೆಯೇ ಸೆಟ್ ಹಾಕಿ ಚಿತ್ರೀಕರಣ‌ ಮಾಡಲಾಗಿದೆ. ಬೆಂಗಳೂರು ಅಲ್ಲದೆ ಡಾಬಸ್ ಪೇಟೆ ಹಾಗೂ‌ ಮಂಗಳೂರಿನಲ್ಲೂ ಚಿತ್ರೀಕರಣ ನಡೆದಿದೆ.

ಜನರಿಗೆ ರೀಚ್ ಆದ್ರೆ ಸಾಕು..

ಸದ್ಯಕ್ಕೆ‌ಹಾಡಿನ‌ ಬಿಡುಗಡೆ ಗೆ ಸಜ್ಜಾಗಿರುವ ತಂಡ ಶನಿವಾರ‌ ರೇಣುಕಾಂಬ‌‌ ಚಿತ್ರ‌ಮಂದಿರದಲ್ಲಿ‌ ಹಾಡಿನ‌ಪ್ರದರ್ಶನದ ಜತೆಗೆ ಸುದ್ದಿಗೋಷ್ಟಿ ಆಯೋಜಿಸಿತ್ತು.‌ ತಂಡದ ಸದಸ್ಯರು, ಹಿತೈಷಿಗಳು ವೇದಿಕೆಯಲ್ಲಿದ್ದು ಮಾತನಾಡಿದರು‌. ನಿರ್ದೇಶಕ ವಿನಾಯಕ್ ಮಾತನಾಡಿ, ನಮ್ಮನ್ನು ನಾವು ಪರಿಚಯಿಸಿಕೊಳ್ಳುವುದಕ್ಕೆ ಈ ವಿಡಿಯೋ ಸಾಂಗ್ ಆಲ್ಬಂ ಮಾಡಿದ್ದೇವೆ. ಇದರಿಂದ ಲಾಭ‌ಗಳಿಸಬೇಕು ಎನ್ನುವುದಕ್ಕಿಂತ ಜನರಿಗೆ‌ ತಲುಪಿದರೆ‌ ನಮ್ಮ‌ಶ್ರಮ‌ಸಾರ್ಥಕವಾಗಲಿದೆ ಎಂದರು.‌ಹಾಗೆಯೇ ಕಲಾವಿದರಾದ ವಾಗೀಶ್ ಮತ್ತು ಸಂಗೀತಾ ಇಬ್ಬರು ಅದ್ದೂರಿ ವೆಚ್ಚದ ಒಂದು‌ಆಲ್ಬಂ‌ನಲ್ಲಿ ತಾವು ಕಾಣಿಸಿಕೊಂಡಿದ್ದೇ ಅದೃಷ್ಟ ಎಂದು‌ ಸಂಭ್ರಮ‌ಪಟ್ಟರು.‌ಅತಿಥಿಗಳಾಗಿ ಬಂದಿದ್ದ‌ ನಿರ್ದೇಶಕ ನಾಗಚಂದ್ರ ಮರಡಿಹಳ್ಳಿ ಸೇರಿದಂತೆ ಗಣ್ಯರನ್ನು ತಂಡವು ನೆನಪಿನ ಕಾಣಿಕೆ‌ನೀಡಿ‌ಗೌರವಿಸಿತು.ಇದೀಗ ಆಲ್ಬಂ ವೀಕ್ಷಕರ ಸಂಖ್ಯೆ ಲಕ್ಚದಷ್ಟಾಗಿದೆ. ತಂಡ ಖುಷಿಯಾಗಿದೆ.

Related Posts

error: Content is protected !!