ಮುಖವಾಡಿಗಳ ನಡುವೆ ಮುಖವಾಡ ಇಲ್ಲದವನೊಬ್ಬ!!

ಬೇಕಿರುವುದಿಲ್ಲಿ ಜ್ಞಾನದ ಭಂಗಿಯೋ, ತೊಗಲು ಮುಚ್ಚುವ ಅಂಗಿಯೋ…?

ಚರ್ಮವೇ ಭಗವಂತ ಕೊಟ್ಟ ಊಡುಗೆಯಾಗಿರುವಾಗ, ಇನ್ಯಾಕೆ ದುಬಾರಿ ಬಟ್ಟೆ. ಹೋಗುವಾಗ ಬೆತ್ತಲೆ, ಬರುವಾಗ ಬೆತ್ತಲೆ ಎನ್ನುವಾಗ ಇನ್ಯಾಕೆ ಆಸ್ತಿ- ಅಂತಸ್ತು? ಇದು ಮುಖವಾಡ ಇಲ್ಲದವ ಹೇಳುವ ಮಾತು. ಅಂದ  ಹಾಗೆ ಇದೊಂದು ಸಿನಿಮಾ ಕಥೆ.  ಇಂತಹ ಕಥೆ ಹೊತ್ತು ಬರುತ್ತಿರುವ ಚಿತ್ರದ ಹೆಸರು  ʼ ಮುಖವಾಡ ಇಲ್ಲದವನು ೮೪ʼ .

ಓಂ ನಮ: ಶಿವಾಯ ಬ್ಯಾನರ್‌ ವಲ್ಲಿ ಗಣಪತಿ ಬೆಳಗಾವಿ ನಿರ್ಮಾಣ ಮಾಡಿದ ಚಿತ್ರವಿದು. ಶಿವಕುಮಾರ್‌ ಕಡೂರ್‌ ಇದರ ನಿರ್ದೇಶಕ. ಹಾಗೆಯೇ ಇಬ್ಬರೂ ಕೂಡ ಚಿತ್ರದ ಪ್ರಮುಖ ಪಾತ್ರಧಾರಿಗಳು. ನಿರ್ದೇಶಕ ಶಿವಕುಮಾರ್‌ ನಾಯಕರಾಗಿ ಕಾಣಿಸಿಕೊಂಡರೆ, ನಿರ್ಮಾಪಕ ಗಣಪತಿ ಕೂಡ ಮತ್ತೊಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಂತೆ.  ಚಿತ್ರ ತಂಡ ಚಿತ್ರೀಕರಣ ಹಾಗೂ ಪೋಸ್ಟ್‌ ಪ್ರೊಡಕ್ಷನ್‌ ವರ್ಕ್‌  ಜತೆಗೆ ಸೆನ್ಸಾರ್‌ ಮುಗಿಸಿಕೊಂಡು  ಈ ಚಿತ್ರ ರಿಲೀಸ್‌ ಗೆ ರೆಡಿಯಾಗಿದೆ.  ಸದ್ಯಕ್ಕೆ ರಿಲೀಸ್‌ ದಿನಾಂಕ ಫಿಕ್ಸ್‌ ಆಗಿಲ್ಲ. ಆದರೆ ಆ ನಿಟ್ಟಿನಲ್ಲಿ ಚಿತ್ರ ತಂಡ ಸಿದ್ದತೆ ನಡೆಸಿಕೊಂಡಿದ್ದು, ಈಗ ಟ್ರೇಲರ್‌ ಲಾಂಚ್‌ ಮೂಲಕ ಸದ್ದು ಮಾಡಿದೆ.

ನಿರ್ಮಾಪಕ ಗಣಪತಿ ಬೆಳಗಾವಿ, ನಿರ್ದೇಶಕ ಶಿವಕುಮಾರ್

ರೇಣುಕಾಂಬ ಚಿತ್ರ ಮಂದಿರದಲ್ಲಿ ಇತ್ತೀಚೆಗೆ ಚಿತ್ರ ತಂಡ ಟ್ರೇಲರ್‌ ಲಾಂಚ್‌ ಮಾಡುವ ಮೂಲಕ ಮಾಧ್ಯಮದ ಮುಂದೆ ಬಂತು. ನಿರ್ದೇಶಕ ರವಿ ಶ್ರೀವತ್ಸ ಹಾಗೂ  ವೇಣು ಗೋಪಾಲ್‌ ಅತಿಥಿಗಳಾಗಿ ಬಂದು ಟ್ರೇಲರ್‌ಲಾಂಚ್‌ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದರು.  ಆನಂತರ ಚಿತ್ರ ತಂಡ ಚಿತ್ರದ ವಿಶೇಷತೆ ಕುರಿತುಮಾತನಾಡಿತು.

‌ʼಇದೊಂದು ಪುಸ್ತಕದ ಮೂಲಕ ಶುರುವಾಗುವ ಕಥೆ ಇದು. ಒಬ್ಬ ಭಿಕ್ಷುಕ ಇಲ್ಲಿ ಒಬ್ಬ ಆಧ್ಯಾತ್ಮದ ಗುರು. ಆತನ ವೇಷ, ಭೂಷಣ ವಿಚಿತ್ರವಾಗಿರುತ್ತದೆ. ಅದಕ್ಕೆ ಕಾರಣ ಭೌತಿಕ ಜೀವನದ ಮೇಲಿನ ತಿರಸ್ಕಾರ. ಅವರ ದೃಷ್ಟಿಯಲ್ಲಿ ಜ್ಣಾನವೇ ನಿಜವಾದ ಆಸ್ತಿ ಎಂಬುದು ಚಿತ್ರದ ತಿರುಳು ” ಎನ್ನುತ್ತಾರೆ ಶಿವಕುಮಾರ್. ನಿರ್ದೇಶನದ  ಜತೆಗೆ  ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ  ಬರೆದಿದ್ದಾರೆ.  ಇದು ಅವರಿಗೆ ಎರಡನೇ ಚಿತ್ರ.‌

ಯುವ ನಿರ್ದೇಶಕ ಶಿವಕುಮಾರ್‌  ಈ ಹಿಂದೆ ʼಡ್ರೆಸ್‌ ಕೋಡ್‌ ʼಹೆಸರಿನ ಚಿತ್ರ ನಿರ್ದೇಶಿಸಿದ್ದರು. ಜತೆಗೆ ʼ ಕಠಾರಿ ʼ ಹೆಸರಿನ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದರು. ‌ ಇದೀಗ ” ಮುಖವಾಡ ಇಲ್ಲದವನು ೮೪”  ಹೆಸರಿನ ಚಿತ್ರದೊಂದಿಗೆ ಮತ್ತೆ ನಿರ್ದೇಶನದ ಅದೃಷ್ಟ ಪರೀಕ್ಷಿಸಿಕೊಳ್ಳಲು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಚಿತ್ರಕ್ಕೆ ಬಂಡವಾಳ ಹಾಕುವ ಮೂಲಕ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರು ಗಣಪತಿ ಪಾಟೀಲ್‌  ಬೆಳಗಾವಿ. ವೃತ್ತಿಯಲ್ಲಿ ಮೆಡಿಕಲ್​ ಕ್ಷೇತ್ರದಲ್ಲಿದ್ದಾರೆ. ದೂರದ ನ್ಯೂಜಿಲೆಂಡ್​ನಲ್ಲಿ ನೆಲೆಸಿದ್ದಾರೆ. ಪರಿಚಿತರೊಬ್ಬರ ಮೂಲಕ ನಿರ್ದೇಶಕ ಶಿವಕುಮಾರ್‌  ಹೇಳಿದ ಕಥೆ ಕೇಳಿದ ತಕ್ಷಣವೇ ಚಿತ್ರ ನಿರ್ಮಾಣ ಮಾಡಲು ಮುಂದಾದರಂತೆ.

” ಒಂದು ಸಿನಿಮಾ ಮಾಡ್ಬೇಕು ಎನ್ನುವುದು ನನ್ನ ಕನಸಾಗಿತ್ತು. ಅದೀಗ ನನಸಾಗಿದೆ. ತುಂಬಾ ಕಡಿಮೆ ಸಮಯದಲ್ಲಿ ಈ ಸಿನಿಮಾ ಸಿದ್ದತೆ ನಡೆಯಿತು. ಸುಮಾರು ೪೫ ದಿನಗಳ ಕಾಲ ಚಿತ್ರೀಕರಣ ವಡೆಯಿತು. ಅಂದು ಕೊಂಡಂತೆ ಚಿತ್ರ ಚೆನ್ನಾಗಿ ಬಂದಿದೆ. ಸಂಭಾಷಣೆಯೇ ಚಿತ್ರದ ಜೀವಾಳ ಆಗಿದೆ. ಮಾಸ್‌ , ಕಮರ್ಷಿಯಲ್‌ ಎನ್ನುವುದಕ್ಕಿಂತ ಈ ಚಿತ್ರದ ಒಂದು ಡಿಫೆರೆಂಟ್‌ ಚಿತ್ರದ ಆಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರಕ್ಕೆ ಬೆಂಗಳೂರು, ಬನ್ನೇರಘಟ್ಟ, ಚಿಕ್ಕಮಗಳೂರು, ಉತ್ತರ ಕರ್ನಾಟಕ , ಬೆಳಗಾವಿ ಹಾಗೂ  ಅಂಬಾಲಿ ಸೇರಿದಂತೆ ವಿವಿಧೆಡೆಗಳಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ರಚನಾ ಅಂಬಲೆ, ಅನುಶ್ರೀ, ಕಾವ್ಯಗೌಡ ನಾಯಕಿಯರಾಗಿ ಅಭಿನಯಿಸಿದ್ದಾರೆ.  ಭಂಗಿ ಹಾಡಿನಲ್ಲಿ ಮರಾಠಿ ನಟಿ ಸೋನಾಲಿ ರಾಯ್‌ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ಚಿತ್ರ ತಂಡ ಕೂಡ ಫುಲ್‌ ಫಿದಾ ಆಗಿದೆ. ದುರ್ಗಾ ಪ್ರಸಾದ್​ ಸಂಗೀತ, ಡಾ. ಮಹಾರಾಜಾ ಹಿನ್ನೆಲೆ ಸಂಗೀತ, ಮಧು ಆರ್ಯ ಕ್ಯಾಮರಾ ಜವಾಬ್ದಾರಿ ನಿಭಾಯಿಸಿದರೆ, ಕಥೆ, ಚಿತ್ರಕತೆ ಸಂಭಾಷಣೆ ಮತ್ತು ನಿರ್ದೇಶನವನ್ನು ಶಿವಕುಮಾರ್ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಯುಎ ಪ್ರಮಾಣ ಪತ್ರ  ಸಿಕ್ಕಿದೆ. ಚಿತ್ರ ತಂಡ ರಿಲೀಸ್‌ ಸಿದ್ದತೆಯಲ್ಲಿದೆ. ಚಿತ್ರ ಮಂದಿರಗಳ ಪರಿಸ್ಥಿತಿ ನೋಡಿಕೊಂಡು ಚಿತ್ರಮಂದಿರಕ್ಕೆ ಬರಲಿದೆಯಂತೆ.

Related Posts

error: Content is protected !!