ಲೈಕ್ ಒತ್ತಿ, ಸಿನಿ ಲಹರಿ ಹಿರಿಮೆ ಗಗನಕ್ಕೇರಿಸಿ
ನೀವೂ ಡಿಜಿಟಲ್ ಆದ್ರಾ? ಹಲವು ದಿನಗಳಿಂದ ನಮಗೆ ಎದುರಾದ ಪ್ರಶ್ನೆ ಇದು. ಅದಕ್ಕೆ ಉತ್ತರಿಸಲು ನಮ್ಮಿಂದ ಈವರೆಗೂ ಆಗಿಲ್ಲ. ಹೌದು ಅಂತ ಹೇಳಿಬಿಡಬ ಹುದಾಗಿತ್ತೇನೋ, ಆದರೆ ಉತ್ತರ ಅಷ್ಟು ಸುಲಭ ಇಲ್ಲ. ಯಾಕಂದ್ರೆ, ಆ ಪ್ರಶ್ನೆಗಳೇ ವಿಚಿತ್ರವಾಗಿದ್ದವು. ಹೌದು ಎನ್ನಬೇಕೆ, ಬೇಡವೇ ಗೊಂದಲಕ್ಕೆ ಸಿಲುಕಿ ಮೌನಕ್ಕೆ ಜಾರಿದ್ದೆವು.ಬದಲಿಗೆ ಅಂದುಕೊಂಡಿದ್ದನ್ನ ಮಾಡಿ ತೋರಿಸೋಣ ಅಂತಷ್ಟೇ ಯೋಚಿಸಿದ್ದೇವು. ಈಗ ಅದು ಒಂದು ಹಂತಕ್ಕೆ ಬಂದಿದೆ. ಸರಳವಾಗಿಯೇ ಇರಲಿ ಅತಂದುಕೊಂಡಿದ್ದರೂ, ಎಲ್ಲವೂ ಗ್ರಾಂಡ್ ರೂಪ ಪಡೆದಿವೆ. ಇದೆಲ್ಲ ಹಿತೈಷಿಗಳ ಸಹಕಾರ. ಬೆಂಬಲ. ಅದರ ರೂಪವೇ ಈಗ ಸಿನಿಲಹರಿ.
ನಾವೇನು ಬ್ರಹ್ಮ ವಿಧ್ಯೆ ಕಲಿತವರಾ?
ಹೌದು, ಈಗ ನಮ್ಮದೇ ಒಂದು ಹಾದಿ. ಡಿಜಿಟಲ್ ಮಾಧ್ಯಮದ ದಾರಿ. ಅನೇಕ ಪ್ರಯೋಗಗಳ ಜತೆಗೆ ಇದೊಂದು ಹೊಸ ಪಯಣ. ಯಾಕೆ ಹೀಗೆ ಅಂತ ಅನೇಕರಿಗೆ ಅಚ್ಚರಿ. ಅದಕ್ಕೆ ಕಾರಣ ಕೋರೋನಾ. ಅದರಿಂದೇನಾಯ್ತ? ಅದಿಲ್ಲಿ ಬೇಕಿಲ್ಲ. ಆದರೆ ಏನಾದ್ರೂ ಕೆಲಸ ಮಾಡಲೇಬೇಕಿದೆ. ಹಾಗಂತ ಏನು ಮಾಡಲು ಸಾಧ್ಯ? ಗೊತ್ತಿರೋದು ಬರವಣಿಗೆ ಮಾತ್ರ. ಹಾಗಂತ ನಾವೇನು ಬ್ರಹ್ಮ ವಿದ್ಯೆ ಕಲಿತವರಾ? ಇಲ್ಲ, ಗೊತ್ತಿರೊದು ಅಷ್ಟೋ ಇಷ್ಟೋ ಸಿನಿಮಾ ವರದಿಗಾರಿಕೆ.ಅದು ಹತ್ತಾರು ವರ್ಷ ಚಿತ್ರೋದ್ಯಮದ ಜತೆಗಿನ ನಂಟಿನಿಂದ ಕಲಿತಿದ್ದು. ಅದನ್ನೇ ನಂಬಿಕೊಂಡು ಕಾಲಕ್ಕೆ ತಕ್ಕಂತೆ ಏನಾದರೂ ಮಾಡಬೇಕು ಅಂದಾಗ ನಮಗೆ ಹೊಳೆದಿದ್ದು ಡಿಜಿಟಲ್ ಮಾಧ್ಯಮ.
ನಮ್ಮದೂ ಒಂದು ಪ್ರಯತ್ನ!
ಆಧುನಿಕ ಜಗತ್ತೀಗ ಅಚ್ಚರಿಗೊಳ್ಳುವಷ್ಟು ಬದಲಾಗಿದೆ. ಪ್ರತಿದಿನವೂ ಹೊಸತುಕಾಣುತ್ತಿದೆ. ಸಿನಿಮಾ ಮತ್ತು ಮಾಧ್ಯಮ ಜಗತ್ತು ಕೂಡ ಅದರಿಂದ ಹೊರತಾ ಗಿಲ್ಲ.ಮಾಧ್ಯಮ ಎನ್ನುವಂತಹದು ಹತ್ತಾರು ರೂಪುಗಳನ್ನು ದಾಟುತ್ತಾ ಬಂದಿದೆ. ಅಚ್ವುಮೊಳೆಯಿಂದ ಕಂಪ್ಯೂಟರ್ ತಂತ್ರಜ್ಞಾನ ಕ್ಕೆ, ಅಲ್ಲಿಂದೀಗ ಡಿಜಿಟಲ್ ತಂತ್ರಜ್ಞಾನ ದ ಕಾಲಕ್ಕೆ ಬಂದಿದೆ. ಹೇಳಿ – ಕೇಳಿ ಇದು ಮೊಬೈಲ್ ಯುಗ. ಬೆರಳಿನ ತುದಿಯಲ್ಲೇ ಜಗತ್ತು.ಅದನ್ನೇ ನಂಬಿಕೊಂಡು ಮಾಧ್ಯಮ ಕೂಡ ಹೊಸ ಅವತಾರ ತಾಳಿದೆ.ನಮ್ಮದೂ ಕೂಡ ಈಗ ಅದರ ಒಂದು ಪ್ರಯತ್ನ.ಅದೇ ಸಿನಿಲಹರಿ.
ಇದು ಬಣ್ಣದ ಭಾವನೆಗಳ ಲಹರಿ !
ಹೆಸರಲ್ಲೇನಿದೆ ಬಿಡಿ ಅಂದರೂ ಹೆಸರು ಮುಖ್ಯವೇ. ಒಂದಷ್ಟು ಯೋಚಿಸಿ, ಚರ್ಚಿಸಿ ಈ ಹೆಸರು ಫೈನಲ್ ಆಗಿದೆ. ಈಗಾಗಲೇ ಅದಕ್ಕೆ ಒಳ್ಳೆಯ ಕಾಮೆಂಟ್ ಕೂಡ ಸಿಕ್ಕಿದೆ. ಅದು ನಮ್ಮ ಪ್ರಯತ್ನದ ಪಾಸಿಟಿವ್ ವೈಬ್ರೇಷನ್. ಇನ್ನು ಮನೆಗೊಂದು ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ಇರುವ ಕಾಲ ಇದು. ಅದರ ಅರಿವು ನಮಗಿದೆ. ಏನಾದ್ರೂ ಹೊಸತನ ಇರಬೇಕು ಅನ್ನೋದು ನಮ್ಮ ಬಯಕೆ. ದ್ವೇಷ, ಮತ್ಸರಕ್ಕೆ ಜಾಗ ಕೊಡದೇ ಸಕರಾತ್ಮಕ ಚಿಂತನೆಯ ಮೂಲಕ ಕನ್ನಡ ಚಿತ್ರ ರಂಗದ ಸಮಗ್ರ ಸುದ್ದಿ ಕೊಡುವ ವೆಬ್ ಸೈಟ್ ಮಾಡಬೇಕೆಂಬುದು ನಮ್ಮ ಉದ್ದೇಶ. ನಮಗ್ಯಾರು ಇಲ್ಲಿ ಸ್ಪರ್ಧಿಗಳಿಲ್ಲ.ನಮಗೆ ನಾವೇ ಸ್ಪರ್ಧಿಗಳು ಮಾತ್ರ.
ಗೆಲ್ಲೋದೇ ನಮ್ಮ ಟಾರ್ಗೆಟ್ ಅಲ್ಲ
ಕ್ಯೂರಿಯಾಸಿಟಿ ಹುಟ್ಟಿಸಲು ಮಸಾಲೆ ಟೈಟಲ್ ನೀಡುವುದು, ಕತೆ ಕಟ್ಟುವುದು, ಯಾರದೋ ಮನಸ್ಸು ನೋಯಿಸುವಂತಹ ಬರಹ ಬರೆದು ನಮ್ಮ ವೆಬ್ ಸೈಟ್ ಮತ್ತು ಯುಟ್ಯೂಬ್ ವೀಕ್ಚಕರ ಸಂಖ್ಯೆಯನ್ನು ರಾತ್ರೋರಾತ್ರಿ ಹೆಚ್ಚಿಸಿಕೊಳ್ಳುವುದು ನಮ್ಮ ಉದ್ದೇಶ ಅಲ್ಲ. ತಾಜಾ,ವಸ್ತು ನಿಷ್ಟ, ಸಕರಾತ್ಮಕ, ನಂಬಿಕೆಗೆ ಅರ್ಹವಾದ ಸುದ್ದಿ ನೀಡುವುದಷ್ಟೇ ನಮ್ಮಕೆಲಸ. ಹಾಗಂತ ಇಲ್ಲಿ ಏನಾದ್ರೂ ಮಾಡಿ ಗೆಲ್ಲೋದೇ ನಮ್ಮ ಟಾರ್ಗೆಟ್ ಅಲ್ಲ . ಅಂದುಕೊಂಡಿದ್ದನ್ನು ಅಚ್ಚುಕಟ್ಟಾಗಿ ಮಾಡೋಣ, ಒಂದೊತ್ತಿನ ಹೊಟ್ಟೆ ತುಂಬಿಸಿಕೊಳ್ಳೋಣ ಎನ್ನುವುದಷ್ಟೇ ನಮ್ಮ ಟಾರ್ಗೆಟ್. ಆ ಮೂಲಕ ಸಿನಿಮಾಪ್ರೇಮಿಗಳಿಗೂ ಒಂದು ಚೆಂದದ ಸುದ್ದಿ ಜಾಲ ತಾಣ ಸಿಗಲಿದೆ. ಅದೆಲ್ಲದಕ್ಕೂ ನಿಮ್ಮಿಂದ ಆಗಬೇಕಿರುವುದು ಬೆಂಬಲ. ಆ ಬೆಂಬಲಕ್ಕೆ ಸಿನಿ ಲಹರಿ ಪೇಜ್ ಮತ್ತು ಯುಟ್ಯೂಬ್ ಚಾನೆಲ್ ಗೆ ಒಂದು ಲೈಕ್ ಒತ್ತಿ, ನಮ್ಮನ್ನು ಕೈ ಹಿಡಿದು ಮೇಲಕ್ಕೆತ್ತಿ. ಉಳಿದಂತೆ ‘ಸಿನಿಲಹರಿ ‘ನಿಮ್ಮದೇ ಸಿನಿಮಾ ಸುದ್ದಿ ವೆಬ್ ಸೈಟ್.