ಚಿನಕುರುಳಿ ಶಾನ್ವಿಗೆ ಕೋತಿ ಕಚ್ಚಿದ ಪ್ರಸಂಗ !

ವಾರಣಾಸಿಯ ಈ ನಟಿ ಶಾನ್ವಿ‌ಶ್ರಿ ವಾಸ್ತವ್ ‘ಕಸ್ತೂರಿ ಮಹಲ್ ‘ ಗೆ ಕಾಲಿಡುವ ಮುನ್ನ ನಿಜಕ್ಕೂ‌ ಆಗಿದ್ದೇನು?
……,………………………………..

ನಟಿ ಶಾನ್ವಿ ಶ್ರೀವಾಸ್ತವ್ ಗೊತ್ತಲ್ವಾ, ಅದೇ’ ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ನಟಿ. ಅವರೀಗ’ ಕಸ್ತೂರಿ ಮಹಲ್ ‘ ನಲ್ಲಿ ಬ್ಯುಸಿಯಾಗಿದ್ದಾರೆ. ಅದೃಷ್ಟ ಅಂತಾರಲ್ಲ ಹಾಗೆ ಬದಾವಣೆಯ ಗಾಳಿಯಲ್ಲಿ’ ಕಸ್ತೂರಿ ಮಹಲ್’ ಪ್ರವೇಶಿಸಿದ್ದಾರೆ. ಅದ್ದೆಂಗೆ ಅನ್ನೋದು ನಿಮಗೆಲ್ಲ ಗೊತ್ತಿರುವ ವಿಚಾರ. ರಚಿತಾ ರಾಮ್ ಅಭಿನಯಿಸಬೇಕಿದ್ದ ಜಾಗಕ್ಕೆ ಶಾನ್ವಿ ಬಂದರು. ಹಾಗಂತ ಈ ಅವಕಾಶಕ್ಕಾಗಿ ವಾರಾಣಾಸಿ ಆ ಚೆಲುವೆ ಶಾನ್ವಿ ಕಾದು ಕುಳಿತಿದ್ರಾ? ಅವಕಾಶಗಳೇ ಇಲ್ಲ ಅಂತ ಇದನ್ನ ಒಂದೇ ಗುಕ್ಕಿನಲ್ಲಿ ಒಪ್ಪಿಕೊಂಡ್ರಾ?

ವಿಷಯ ಅದಲ್ಲ, ಬೇರೆನೆ ಇದೆ‌‌‌…

ಅವರ ಪ್ರಕಾರ ಹಾಗೇನು ಅಲ್ಲ. ವಾಸ್ತವ ಬೇರೆನೆ ಇದೆ. ಅದೇನು ಎನ್ನುವುದಕ್ಕಿಂತ ಮುಂಚೆ‌. ಕಸ್ತೂರಿ ಮಹಲ್ ಗೆ ರಚಿತಾ ಯಾಕೆ ಕೈ ಎತ್ತಿದ್ರು ಗೊತ್ತಾ? ವಿಷಯ ಸ್ವಲ್ಪ ಸೀರಿಯಸ್. ಆ ಕತೆ ಹೀಗಿದೆ ಕೇಳಿ; ಈ ಚಿತ್ರಕ್ಕೆ ಮುಂಚೆ ‘ಕಸ್ತೂರಿ ನಿವಾಸ ‘ ಅಂತ ಟೈಟಲ್ ಇತ್ತು‌ . ಆಗ ಈ ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಆಗಿದ್ದರು. ಇದು ದಿನೇಶ್ ಬಾಬು ನಿರ್ದೇಶನದ ಚಿತ್ರ ಎನ್ನುವುದರ ಜತೆಗೆ ಚಿತ್ರದ ಟೈಟಲ್ ನೋಡಿಯೇ ಅವರು ಥ್ರಿಲ್ ಆಗಿದ್ರಂತೆ‌‌ . ಜತೆಗೆ ಅದು ನಾಯಕಿ ಪ್ರಧಾನ ಚಿತ್ರ ಬೇರೆ, ಅದೇ ಗುಂಗ್ ನಲ್ಲಿ ಕತೆ ಕೇಳಿದವರೇ ಓಕೆ ನಾನೇ ನಾಯಕಿ ಅಂತಲೂ ಕಾಲ್ ಶೀಟ್ ಕೊಟ್ಟಿದ್ದರು‌‌. ಮುಂದೆ ಮುಹೂರ್ತ ಕೂಡ ಮುಗೀತು.ಆದ್ರೆ ಆಗ ಶುರುವಾಗಿದ್ದು ಟೈಟಲ್ ವಿವಾದ. ಅದೇನೋ ಯಡವಟ್ಟಾಯ್ತು ಅಂತ ಗೊತ್ತಾಗಿದ್ದೇ ತಡ, ನಂಗೆ ಡೇಟ್ಸ್ ಹೊಂದಾಣಿಕೆ ಆಗ್ತಿಲ್ಲ. ಮುಂಚೇನೆ ಕಾಲ್ ಶೀಟ್ ಕೊಟ್ಟ ಸಿನ್ಮಾದವರೂ ಬಿಡ್ತಿಲ್ಲ, ಸಾರಿ ಸರ್ ನೀವು ಯಾರನ್ನಾದ್ರೂ ಬೇರೆ ಅವ್ರನ್ನ ಹಾಕ್ಕೊಳ್ಳಿ ಅಂತ ದಿನೇಶ್ ಬಾಬು ಅವರಿಗೆ ರಾತ್ರೋರಾತ್ರಿ ಮೆಸೇಜ್ ಹಾಕಿ‌ಬಿಟ್ರು ಬುಲ್ ಬುಲ್ ಬೆಡಗಿ ರಚಿತಾ ರಾಮ್.

ರಾತ್ರೋರಾತ್ರಿ‌ ಮೆಸೇಜ್ ಹಾಕಿದ್ರು ರಚಿತಾ…

ಚೇಂಜ್ ಒವರ್ ಕತೆ ನಡೆದಿದ್ದು ಹೀಗೆ. ಮುಂದೆ ಶಾನ್ವಿ ಹೇಗೆ ಬಂದ್ರು?’ ಅವನೇ ಶ್ರೀ ಮನ್ನಾರಾಯಣ’ ಚಿತ್ರದ ನಂತರ ಹೊಸ ಅವಕಾಶಗಳನ್ನು ಎದುರು ನೋಡುತ್ತಿದ್ದ ಅವರಿಗೆ ‘ತ್ರಿಶೂಲಂ’ ಮೂಲಕ‌ ಉಪೇಂದ್ರ ಅವರ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕಿತು. ಅಲ್ಲಿಂದೀಗ ದಿನೇಶ್ ಬಾಬು ನಿರ್ದೇಶನದ ಕಸ್ತೂರಿ ಮಹಲ್ ಚಿತ್ರಕ್ಕೆ ನಾಯಕಿಯಾದರು. ಅವರ ಪ್ರಕಾರ ಈ ಸಿನಿಮಾ ಒಪ್ಪಿಕೊಳ್ಳುವುದಕ್ಕಿದ್ದ ಮೊದಕ ಕಾರಣ ಕತೆ ಮತ್ತು ಪಾತ್ರ.‌ಒಬ್ಬ ನಟಿಗೂ ಬೇಕಾಗಿದ್ದೂ ಕೂಡ ಅದೇನೆ. ಹಾಗಾಗಿ ತಾನು ಈ ಸಿನಿಮಾ‌ಒಪ್ಪಿಕೊಂಡೇ ಎನ್ನುವ ಶಾನ್ವಿ, ಈಗ ಅದೇ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಅವರು ತಮಗೆ ಕೋತಿ ಕಚ್ಚಿದ ಪ್ರಸಂಗವೊಂದನ್ನು’ ಕಲರ್ಸ್ ಕನ್ನಡ’ದ ಮಜಾ ಟಾಕೀಸ್ ಶೋ ನಲ್ಲಿ ಹೇಳಿಕೊಂಡಿದ್ದಾರೆ.

ಕೋತಿ ಕಂಡ್ರೆ ನಂಗೆ ಈಗಲೂ ಭಯ..

‘ ನಾನಗಾಗ 15 ವರ್ಷ.‌ಮನೆಯ ಟೇರಾಸ್ ಮೇಲೆ ಆಟ ಆಡ್ತಾ ಇದ್ವಿ.‌ ಎಲ್ಲಿಂದಲೋ‌ ಬಂದ ಕೋತಿ ನನ್ನ ಕೈ ಕಚ್ಚಿತು. ಅದೃಷ್ಟವಶಾತ್ ನಂಗೇನು‌ಗಾಯ ಆಗ್ಲಿಲ್ಲ.‌ ಆದ್ರೆ ಕೋತಿ ಕಂಡ ಭಯ ಪಟ್ಟು ಓಡಿದೆ. ಅವತ್ತಿನಿಂದ ನಂಗೆ ಮನೆಯವ್ರು ಕೋತಿ ಅಂತಲೇ ಕರೀತಿದ್ರು ಅಂತ 15 ವರ್ಷದಲ್ಲಿ ನಡೆದ ಘಟನೆಯೊಂದನ್ನು ಹೇಳಿಕೊಂಡು‌ ನಕ್ಕರು ಚಿನಕುರುಳಿ ಶಾನ್ವಿ ಶ್ರೀವಾಸ್ತವ್.

ಇದು ಬಿಡಿ, ಮುಗ್ದ ಮುಖದ ಶಾನ್ವಿ ಬಗ್ಗೆ ಹೇಳಲೇಬೇಕಾದ ಒಂದು‌ಮಾತು ಅವರಿಗಿರುವ ಕನ್ನಡದ‌ ಮೇಲಿನ‌ ಪ್ರೀತಿಯ ಬಗ್ಗೆ. ನಿಮಿಗೆಲ್ಲ ಗೊತ್ತೇ ಇದೆ. ಶಾನ್ವಿ ಕನ್ನಡಕ್ಕೆ ಬಂದ ಆಮದು ನಟಿ. ಅಂದ್ರೆ ಬೇರೆ ಭಾಷೆಯಿಂದ ಕನ್ನಡಕ್ಕೆ ಬಂದವರು. ಹಾಗೆ ಬಂದವರನೇಕ ನಟಿಯರು ಅವಕಾಶ ಇದ್ದಷ್ಟು ದಿನ ಇಲ್ಲಿದ್ದು , ಹಣ ಮಾಡಿಕೊಂಡು‌ಮರಳಿ ತಮ್ಮೂರು ಸೇರಿಕೊಂಡಿ ದ್ದಾರೆಸ್ವಲ್ಪ ಕಮಲ ಈ ನಟಿ ಬೆಂಗಳೂರಿನಲ್ಲೆ ಉಳಿದು ಕೊಂಡಿದ್ದಾರೆ. ಕನ್ನಡ ಭಾಷೆ ಕಲಿತಿದ್ದಾರೆ. ಓದು,ಬರಹ‌ ಎರಡೂ ಕನ್ನಡದಲ್ಲೇ ಮಾಡುತ್ತಾರೆ. ಬೆಂಗಳೂರು ನನ್ನೂರು ಅಂತ ಹೆಮ್ಮೆಯಿಂದ ಹೇಳುತ್ತಾರೆ. ಅಷ್ಟು ಮಾತ್ರವಲ್ಲ, ಇಲ್ಲಿಯೇ ಸೆಟ್ಲ್ ಆಗುವುದಾಗಿಯೂ ಹೇಳುತ್ತಾರೆ. ಹಾಗೆಯೇ ಕನ್ನಡದ ಸ್ಟಾರ್ ಒಬ್ಬರನ್ನು ಲವ್ ಮಾಡುತ್ತಿರುವ ಬಗ್ಗೆ‌ಗಾಸಿಪ್ ಕೂಡ ಇದೆ. ಸದ್ಯಕ್ಕೆ ಅದು ಕನ್ ಫರ್ಮ್‌ಅಲ್ಲ.‌ಗಾಸಿಪ್ ಮಾತ್ರ.‌ ಏನೇ ಆಗಲಿ ಶಾನ್ವಿ ಅವರಿಗೆ ಸಿನಿ‌ಲಹರಿ ಕಡೆಯಿಂದ ಆಲ್ ದಿ‌ಬೆಸ್ಟ್.

Related Posts

error: Content is protected !!