ಓ…ಶೋ…!

ಓಶೋ ಎಂಬ ಹೊಸಬರ ಅಚ್ಚರಿಯ ಸುತ್ತ ಹೊಸ ಚಿತ್ರ

ಓಶೋ…
ಬಹುಶಃ ಇವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಹಾಗಾಗಿ ಆ ಕುರಿತು ಹೆಚ್ಚೇನೂ ಹೇಳುವ ಅಗತ್ಯವಿಲ್ಲ.
ಆದರೂ ಈ ಹೊಸ “ಓಶೋ” ಬಗ್ಗೆ ಹೇಳಲೇಬೇಕು. ಅಷ್ಟಕ್ಕೂ ಯಾರಪ್ಪ ಹೊಸ ಓಶೋ ಎಂಬ ಸಣ್ಣ ಕುತೂಹಲ ಸಹಜ. ಆ ಕುತೂಹಲ ಇದ್ದವರು ಈ ಸುದ್ದಿ ಓದಿ.

“ಓಶೋ” ಇದು ಕನ್ನಡ ಸಿನಿಮಾ‌ ಹೆಸರು. ಹಾಗಂತ ಓಶೋ ಅವರ ಬಯೋಗ್ರಫಿ ಏನಾದರೂ ಸಿನಿಮಾ‌ ಆಗುತ್ತಿದೆಯಾ? ಅದಕ್ಕೆ ಸದ್ಯ ಉತ್ತರವಿಲ್ಲ. ಇಂಥದ್ದೊಂದು ಶೀರ್ಷಿಕೆ ಇಟ್ಟು ಸಿನಿಮಾ ಮಾಡಲು ಹೊರಟಿರೋದು ಕೂಡ ಹೊಸಬರೆ.
ಕನ್ನಡದಲ್ಲೀಗ ಹೊಸ ಪ್ರತಿಭೆಗಳದ್ದೇ ಕಲರವ. ಹೊಸ ನಿರ್ದೇಶಕರು ತಮ್ಮೊಳಗಿನ ಹೊಸ ಆಲೋಚನೆಗಳ ಮೂಲಕ ಕಥೆ ಹೆಣೆದು, ತಮ್ಮದೇ ಶೈಲಿಯಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ಈಗಾಗಲೇ ಅಂತಹ ಪ್ರಯತ್ನದಲ್ಲಿ ಗೆದ್ದಿದ್ದಾರೆ ಕೂಡ. ಈಗ ಆ ಸಾಲಿಗೆ ಈ “ಓಶೋ” ಕೂಡ ಇದೆ.

ಬಹುತೇಕ ಹೊಸಬರೇ ಈಗ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರೋದು. ಅಂತವರನ್ನು ಪ್ರೇಕ್ಷಕ‌ ಕೂಡ ಪ್ರೀತಿಯಿಂದಲೇ ಒಪ್ಪಿ ಅಪ್ಪಿದ್ದಾನೆ. ಹೊಸಬರಲ್ಲಿ ಹೊಸತನ ತುಂಬಿದೆ. ಅದನ್ನು ಸಾಕಾರಗೊಳಿಸಲು ಒಳ್ಳೆಯ ವೇದಿಕೆ ಕೊರತೆ ಇದ್ದೇ ಇದೆ. ಸಿನಿಮಾರಂಗ ಮೂಲಕ ತಮ್ಮ ಆಶಯವನ್ನು ಈಡೇರಿಸಿಕೊಳ್ಳಲು ಹೊರಟ ಈ ಚಿತ್ರತಂಡಕ್ಕೂ “ಸಿನಿ ಲಹರಿ” ಕಡೆಯಿಂದ ಆಲ್ ದಿ ಬೆಸ್ಟ್.

ಅಂದಹಾಗೆ, ಇಂಥದ್ದೊಂದು ಕುತೂಹಲ ಎನಿಸುವ ಶೀರ್ಷಿಕೆ ಇಟ್ಟು ಸಿನಿಮಾ ಮಾಡಲು ಹೊರಟಿರೋದು ಕ್ರಿಯಾಶೀಲ ಬರಹಗಾರ ಜಿಯಾ (ಜಿಯಾಉಲ್ಲಾ ಖಾನ್ ). ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜೊತೆ ನಿರ್ದೇಶನದ ಜವಬ್ದಾರಿ ಹೊತ್ತಿದ್ದಾರೆ. ಇನ್ನು ಇವರ ಹೊಸ ಪ್ರಯತ್ನ ಬೆಂಬಲಿಸಿ ಗ್ಯಾನಗೌಡ್ರು ಹಾಗೂ ಅನಂತ್ ಇಟಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅನಂದ್ ಇಟಗಿ, ದೀಪಶ್ರೀ ಗೌಡ, ಕರಿಸುಬ್ಬು, ಗಿರಿರಾಜ್ ಇತರರು ಇದ್ದಾರೆ.

ದೀಪಾ, ಆನಂದ್‌, ಜಿಯಾ

ಕೀರ್ತನ್ ಸಂಗೀತ ನೀಡಿದರೆ, ಪ್ರದೀಪ್ ಛಾಯಾಗ್ರಹಣವಿದೆ. ಗುರುಸ್ವಾಮಿ ಸಂಕಲನವಿದೆ. ಸದ್ಯ ಶೀರ್ಷಿಕೆ ಜೊತೆ ಚಂದದ ಪೋಸ್ಟರ್ ಲಾಂಚ್ ಆಗಿದ್ದು, ಈಗಾಗಾಲೇ ಚಿತ್ರೀಕರಣ ಮುಗಿಸಿ ಫಸ್ಟ್ ಕಾಪಿ ಕೂಡ ಬಂದಿದೆ. ಇಷ್ಟರಲ್ಲೇ ಸೆನ್ಸಾರ್ ಮುಗಿಸಿ ಪ್ರೇಕ್ಷಕರ ಮುಂದೆ ಬರಲಿದೆ.

Related Posts

error: Content is protected !!