ನನ್ನಿಷ್ಟದ ಪಾತ್ರ ಸಿಕ್ಕರೆ ಅಭಿನಯಿಸಲು ನಾನ್‌ ರೆಡಿ

ಕಿಸ್‌ ಸುಂದರಿ ಶ್ರೀಲೀಲಾ ಎಲ್ಲಿ ಎನ್ನುವ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ

ಸಿನಿಮಾ ಅಂತ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ ಎನ್ನುವುದನ್ನು ಬಿಟ್ಟರೆ ಸೋಷಲ್ ಮೀಡಿಯಾದಲ್ಲಿ ಅಂದ ಚೆಂದದ ಫೋಟೋಗಳ ಮೂಲಕ ಶ್ರೀಲೀಲಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿ. ಈಗ ದಸರಾ ಹಬ್ಬಕ್ಕೂ ಅವರು ಒಂದು ಚೆಂದದ ಫೋಟೋಶೂಟ್ ಮಾಡಿಸಿ, ರಾಣಿಯಂತೆ ಪೋಸು ನೀಡಿರುವುದು ವಿಶೇಷ.

ಸಿನಿ ದುನಿಯಾವೇ ಹಾಗೆ. ಚಾಲ್ತಿಗೆ ಬಂದ ನಟ-ನಟಿಯರು ಇಲ್ಲಿ ಸದಾ ಸುದ್ದಿಯಲ್ಲಿರಬೇಕು. ಅದೆಲ್ಲ ಬೇಡ, ತಾವಾಯ್ತು ತಮ್ಮ ಪಾಡಾಯ್ತು ಅಂತ ಅವರೇನಾದ್ರು  ತೆರೆಮರೆಯಲ್ಲಿ ಕುಳಿತರೆ  ಇಲ್ಲಿ ದಿನಕ್ಕೊಂದು ಗಾಸಿಪ್. ಅದರಲ್ಲೂ ಒಂದು ಸಕ್ಸಸ್ ಫುಲ್ ಸಿನಿಮಾ‌ ಬಂದು‌ ಹೋದ ನಂತರ ಅದರ ನಟ ಅಥವಾ ನಟಿ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುವುದು ತಡವಾದರೆ ಅವರ ಸುತ್ತ ಹತ್ತಾರು ಪ್ರಶ್ನೆ. ನೂರೆಂಟು ಗಾಳಿ‌ಮಾತು. ಸದ್ಯಕ್ಕೆ ಅಂತಹದೇ ಗಾಸಿಪ್ ‘ಕಿಸ್ ‘ ಚೆಲುವೆ ಶ್ರೀಲೀಲಾ‌ ಸುತ್ತಲೂ‌ ಇದೆ.

‘ಕಿಸ್ ‘ ಕೊಟ್ಟ ಕ್ಯೂಟ್ ಹುಡುಗಿ ಶ್ರೀ ಲೀಲಾ ಯಾಕೆ ಹೊಸ ಸಿನಿಮಾ ಒಪ್ಪಿಕೊ‌ಂಡಿಲ್ಲ  ?  ‘ಭರಾಟೆ ‘  ನಂತರ ಅವರ ಸಿನಿ‌ ಜರ್ನಿ ಏನಾಯ್ತು ? ಹೊಸ ಸಿನಿಮಾ‌ ಒಪ್ಪಿಕೊಂಡಿದ್ದರೆ ಅದು ಶುರುವಾಗುವುದು ಯಾವಾಗ? ಮೂರನೇ ಸಿನಿಮಾ ಯಾವ ಸ್ಟಾರ್ ಜತೆ ? ಸಿನಿಮಾ‌ ಪ್ರೇಮಿಗಳಲ್ಲಿ ಹೀಗೆಲ್ಲ ಕುತೂಹಲದ ಪ್ರಶ್ನೆಗಳಿವೆ.  ಹಾಗಂತ ಶ್ರೀಲೀಲಾ  ಸಿನಿಮಾ‌ ಬೇಡ ಅಂತ ‌ಸುಮ್ಮನಿದ್ದಾರಾ? ಖಂಡಿತಾ ಇಲ್ಲ‌.‌ ನೋ‌, ಚಾನ್ಸ್ . ‘ಭರಾಟೆ ‘ ನಂತರ ಶ್ರೀಲೀಲಾ ತಕ್ಷಣವೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ ಎನ್ನುವುದು ನಿಜವೇ ಆಗಿದ್ದರೂ, ಅವರೇ ಹೇಳುವ ಪ್ರಕಾರ ಅದಕ್ಕೆ ಮೂರು ಕಾರಣ. ಮೊದಲನೇಯದು ಎಜುಕೇಷನ್. ಎರಡನೇಯದು ಒಳ್ಳೆಯ ಕತೆ ಮತ್ತು ಪಾತ್ರ. ಮೂರನೆಯದು ಕೊರೋನಾ.

‘ ನಂಗೆ  ಸಿನಿಮಾ‌ ಆಫರ್  ಇಲ್ಲ ಅಂತಲ್ಲ.  ‘ಭರಾಟೆ ‌”ರಿಲೀಸ್ ಆದ ನಂತರ ಎಕ್ಸಾಂ ಶುರುವಾದವು. ತಕ್ಷಣವೇ ಅತ್ತ  ಗಮನ‌ಹರಿಸಬೇಕಾಗಿ ಬಂತು‌. ಎಕ್ಸಾಂ ಸಿದ್ಧತೆಗಾಗಿಯೇ  ಒಂದಷ್ಟು ದಿನ ಕಳೆದವು. ಅಲ್ಲಿಂದ ಎಕ್ಸಾಂ ಮುಗಿಸುವುದಕ್ಕೂ ಒಂದಷ್ಟು‌‌ ಸಮಯ ಹಿಡಿಯಿತು. ಅದೆಲ್ಲ ಮುಗಿಸಿ ಇನ್ನೇನು ಹೊಸ ಪ್ರಾಜೆಕ್ಟ್  ಫೈನಲ್ ಮಾಡಿಕೊಳ್ಳೊಣ ಅನ್ನೋ ಹೊತ್ತಿಗೆ ಕೊರೋನಾ ಬಂತು. ಎಲ್ಲವೂ ಬಂದ್ ಆದವು. ಆಗ ನಮ್ದೇನು ಕೆಲಸ? ಹಾಯಾಗಿ ಮನೆಯಲ್ಲಿದ್ದೆ. ಒಂದಷ್ಟು ಓದು, ಅದರ ಜತೆಗೆ ಸಿನಿಮಾ ವೀಕ್ಷಣೆ ಅಂತ ಬ್ಯುಸಿಯಿದ್ದೆ. ‘ ಎನ್ನುತ್ತಾರೆ ಕಿಸ್ ಚೆಲುವೆ ಶ್ರೀಲೀಲಾ.

ಶ್ರೀಲೀಲಾ ಸದ್ಯಕ್ಕೆ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ. ಮೋಹಕ‌ ನೋಟ ಹಾಗೂ ಮುದ್ದು ಮುಖದ ಮೂಲಕ ಎಂಟ್ರಿಯಲ್ಲೇ ಸಿನಿ ರಸಿಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ ನಟಿ.  ಹಾಗೆಯೇ ಅಭಿನಯ ಹಾಗೂ  ಮಾತಿನಲ್ಲೂ ಬುದ್ದಿವಂತೆ. ಹಾಗಾಗಅವರಿಗೆ ಸಿನಿಮಾ ಆಫರ್ ಇಲ್ಲ ಅಂತಲ್ಲ. ಸಾಕಷ್ಟಿವೆ‌. ಅದನ್ನು ಅವರೇ  ಒಪ್ಪಿಕೊಳ್ಳುತ್ತಾರೆ.

‘ ಭರಾಟೆ ‘ ನಂತರ‌  ಸರಿ ಸುಮಾರು 20 ಕ್ಕೂ ಹೆಚ್ಚು ಕತೆ ಕೇಳಿದ್ದೇನೆ ಅಂದ್ರೆ ನಿಮಗೆ ಅಚ್ಚರಿ ಎನಿಸಬಹುದು. ಕತೆ ಕೇಳುವುದು, ಚರ್ಚೆ ಮಾಡುವುದು ನಡೆದೇ ಇದೆ.ಆದ್ರೆ ನಂಗಿಷ್ಟವಾದ ಕತೆ ಮತ್ತು ಪಾತ್ರ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ಇದುವರೆಗೂ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ‌ . ಇವತ್ತೇ, ಈಗಲೇ ನಂಗಿಷ್ಟವಾಗುವ ಕತೆ ಮತ್ತು ಪಾತ್ರ ಸಿಕ್ಕರೆ ನಾನು‌ಅಭಿನಯಿಸಲು ರೆಡಿ ಎನ್ನುವ ಮೂಲಕ ತಮ್ಮ ನಿರೀಕ್ಷೆಯ ಬೇಡಿಕೆಗಳನ್ನು ಮುಂದಿಡುತ್ತಾರೆ ನಟಿ ಶ್ರೀಲೀಲಾ.

Related Posts

error: Content is protected !!