ಗಾಯಕ ನವೀನ್ ಸಜ್ಜು ಈಗ ಹೀರೋ !

ಆದಿಚುಂಚನಗಿರಿಯಲ್ಲಿ ಸ್ಕ್ರಿಪ್ಟ್ ಪೂಜೆ

ಗಾಯಕ, ಸಂಗೀತ ನಿರ್ದೇಶಕ ಹಾಗೂ ಬಿಗ್ ಬಾಸ್ ಖ್ಯಾತಿಯ ನವಿನ್ ಸಜ್ಜು ಈಗ ಹೀರೋ. ಹೌದು ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗೆ ಅವರು ತೆರೆ ಮೇಲೆ ಹೀರೋ ಆಗಿ ರಾರಾಜಿಸುತ್ತಿದ್ದರು. ಆದರೆ, ಕೋವಿಡ್ ಹಾವಳಿ ಅದಕ್ಕೆ ತಡೆಯಾಗಿತ್ತು. ಈಗ ಕೊನೆಗೂ ನವೀನ್ ಸಜ್ಜು ಹೀರೋ ಆಗಿದ್ದಾರೆ.
ಸ್ಕ್ರಿಫ್ಟ್‌ ಪೂಜೆಯ ವೇಳೆ
ಅಂದಹಾಗೆ, ಇವರನ್ನು ಹೀರೋ ಮಾಡುತ್ತಿರೋದು “ಕೆಮಿಸ್ಟ್ರಿ ಆಫ್ ಕರಿಯಪ್ಪ” ಖ್ಯಾತಿಯ ನಿರ್ದೇಶಕ ಕುಮಾರ್.
“ಬಿಗ್ ಬಾಸ್​”ನಿಂದ ಹೊರ ಬಂದ ಬೆನ್ನಲ್ಲೇ, ಅವರು ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಆ ಸುದ್ದಿ ಆಗ ನಿಜವಾಗಲಿಲ್ಲ. ಹಾಗಂತ ನವೀನ್ ಆ ಸಮಯದಲ್ಲಿ ಸುಮ್ಮನೆ ಕೂರಲಿಲ್ಲ. ಕಥೆ ಕೇಳುತ್ತಲೇ ಇದ್ದರು. ಆ ಸಾಲಿಗೆ ಕುಮಾರ್ ಕಥೆಯನ್ನೂ ಕೇಳಿ, ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಎಲ್ಲಾ ತಯಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೋವಿಡ್ ಸಮಸ್ಯೆ ಎದುರಾಯಿತು.
ಲಾಕ್ ಡೌನ್ ನಡುವೆಯೇ ಚಿತ್ರತಂಡ ಚಿತ್ರದ ಸ್ಕ್ರಿಪ್ಟ್  ಕೆಲಸ ಮಾಡಿಕೊಂಡಿತ್ತು. ಕೊರೊನಾ‌ ಲಾಕ್ ಡೌನ್ ಸಡಿಲಗೊಂಡ ನಂತರ ಚಿತ್ರದ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಇತ್ತೀಚೆಗೆ ಆದಿಚುಂಚನಗಿರಿ ಸನ್ನಿಧಿಯಲ್ಲಿ ಸ್ಕ್ರಿಪ್ಟ್ ಪೂಜೆ‌ ನೆರವೇರಿದೆ.
ಈ ಚಿತ್ರಕ್ಕಿನ್ನೂ ಶೀರ್ಷಿಕೆ ‌ಅಂತಮವಾಗಿಲ್ಲ. ಕಥೆ ಇತ್ಯಾದಿ ಬಗ್ಗೆಯೂ ಇನ್ನೂ ಗುಟ್ಟು ತಿಳಿದಿಲ್ಲ. ನಾಯಕಿ ಯಾರು, ಉಳಿದಂತೆ ಯಾರೆಲ್ಲ ಕಲಾವಿದರು ಇರುತ್ತಾರೆ ಎಂಬಿತ್ಯಾದಿ ವಿಷಯ ಇಷ್ಟರಲ್ಲೇ ತಿಳಿಯಲಿದೆ.
ತಂಡದ ಜತೆಗೆ ನಿರ್ದೇಶಕ ಕುಮಾರ್

Related Posts

error: Content is protected !!